Breaking News

ಸಂಧಾನಕ್ಕಾಗಿ ದೇವೇಂದ್ರ ಫ‌ಡ್ನವೀಸ್‌ಗೆ ಉದ್ಧವ್‌ ಠಾಕ್ರೆ ಕರೆ?

Spread the love

ಮುಂಬಯಿ: ಶಿವಸೇನೆ ಶಾಸಕರು ಮತ್ತು ಸಚಿವರು ಬಂಡಾಯವೆದ್ದ ದಿನದಂದು ಫೇಸ್‌ಬುಕ್‌ ಲೈವ್‌ ಬಂದು ಮಾತನಾ ಡಿದ್ದ ಸಿಎಂ ಠಾಕ್ರೆ ಅಂದೇ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಅವರನ್ನು ತಡೆದಿದ್ದರು. ಅದರ ಮಾರನೇ ದಿನವೂ ಸಿಎಂ ರಾಜೀನಾಮೆ ನೀಡಲು ಸಜ್ಜಾಗಿದ್ದು, ಆಗಲೂ ಪವಾರ್‌ ತಡೆದಿದ್ದಾಗಿ ಮೂಲಗಳು ತಿಳಿಸಿವೆ.

ಜೂ.21ರಂದು ರಾತ್ರಿ ಸಿಎಂ ಉದ್ಧವ್‌, ಮಾಜಿ ಸಿಎಂ ದೇವೇಂದ್ರ ಫ‌ಡ್ನವಿಸ್‌ಗೆ ಕರೆ ಮಾಡಿದ್ದರು. ಈ ವೇಳೆ ಬಿಜೆಪಿ ಜತೆಗೆ ರಾಜಿ ಮಾಡುವ ಪ್ರಯತ್ನ ಮಾಡಿದ್ದರು ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

ರಾವತ್‌ಗೆ ಇ.ಡಿ. ನೋಟಿಸ್‌
ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆಯ ಹೊಯ್ದಾಟದ ನಡುವೆಯೇ ಶಿವಸೇನೆಯ ವಕ್ತಾರ ಸಂಜಯ ರಾವತ್‌ ಅವರಿಗೆ ಇ.ಡಿ.ನೋಟಿಸ್‌ ಜಾರಿ ಮಾಡಿದೆ. ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ಮಂಗಳವಾರವೇ ವಿಚಾರಣೆಗೆ ಬರುವಂತೆ ಸೂಚಿಸಿದೆ. “ಜೂ. 28ರಂದು ವಿಚಾರಣೆಗೆ ಹಾಜರಾಗಲು ಅಸಾಧ್ಯ. ಸಮಯಾವಕಾಶ ಬೇಕು’ ಎಂದು ರಾವತ್‌ ಮನವಿ ಮಾಡಿದ್ದಾರೆ. ಹಾಗೆಯೇ “ಇದೊಂದು ಸಂಚು.

ರಾಜಕೀಯ ವಿರೋಧಿಗಳ ವಿರುದ್ಧ ಹೋರಾಟ ನಡೆಸದಂತೆ ತಡೆಯುವ ಕ್ರಮ. ಇ.ಡಿ. ವಿಚಾರಣೆಗೆ ಹಾಜ ರಾಗುವಂತೆ ಸಮನ್ಸ್‌ ನೀಡಿದೆ. ನಾವು, ಬಾಳಾ ಸಾಹೇಬರ ಶಿವಸೈನಿಕರು ಈಗ ದೊಡ್ಡ ಯುದ್ಧದಲ್ಲಿ ತೊಡಗಿದ್ದೇವೆ. ನನ್ನ ತಲೆಯನ್ನು ಕಡಿದರೂ, ಗುವಾಹಾಟಿ ದಾರಿ ಹಿಡಿಯಲಾರೆ. ನನ್ನನ್ನು ಬಂಧಿಸಿ ‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ