Breaking News
Home / Uncategorized / ನಾನು ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಬೇಕು: ಸಚಿವ ಉಮೇಶ ಕತ್ತಿ

ನಾನು ಅಖಂಡ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಬೇಕು: ಸಚಿವ ಉಮೇಶ ಕತ್ತಿ

Spread the love

ನಾನು ಹಿರಿಯ ಶಾಸಕ.ತಾಲ್ಲೂಕಿನ ಪೋಲಕಪಳ್ಳಿಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘2024ರ ನಂತರ ದೇಶದಲ್ಲಿ ರಾಜ್ಯಗಳ ಸಂಖ್ಯೆ ಹೆಚ್ಚಾಗಲಿವೆ. ಉತ್ತರ ಪ್ರದೇಶ 4, ಮಹಾರಾಷ್ಟ್ರ 3, ಕರ್ನಾಟಕ 2 ರಾಜ್ಯಗಳಾಗಲಿವೆ. ಉತ್ತರ ಕರ್ನಾಟಕ ರಾಜ್ಯದ ಹೇಳಿಕೆಗೆ ನಾನು ಬದ್ಧ. ಆದರೆ ನಾನು ಅಖಂಡ ಕರ್ನಾಟಕದ ಮುಖ್ಯಮಂತ್ರಿ ಆಗುವೆ’ ಎಂದು ಬಯಕೆ ವ್ಯಕ್ತಪಡಿಸಿದರು.

 

‘ಕುಂಚಾವರಂ ವನ್ಯಜೀವಿ ಧಾಮದಲ್ಲಿರುವ ಶೇರಿಭಿಕನಳ್ಳಿ ಗ್ರಾಮವನ್ನು ಮುಂದಿನ 6 ತಿಂಗಳಲ್ಲಿ ಸ್ಥಳಾಂತರಿಸಲು ಕ್ರಮ‌ ಕೈಗೊಳ್ಳಲಾಗುವುದು’ ಎಂದರು.

 

ಚಿಂಚೋಳಿಯಲ್ಲಿ ಅರಣ್ಯ ಕಾಲೇಜು ಮ‌ಂಜೂರು ಮಾಡುವ ಭರವಸೆ ನೀಡಿದ ಸಚಿವರು, ಜತೆಗೆ ಚಂದ್ರಂಪಳ್ಳಿಯಲ್ಲಿ‌ ₹ 2 ಕೋಟಿ ವೆಚ್ಚದಲ್ಲಿ‌ ಜಂಗಲ್ ಲಾಡ್ಜ್ ಮತ್ತು 4 ಕಾಟೇಜು‌ ನಿರ್ಮಿಸಿ‌ ಪ್ರವಾಸೋದ್ಯಮಕ್ಕೆ ಒತ್ತು‌ ನೀಡಲಾಗುವುದು, ಇವುಗಳಿಗೆ ಮುಂದಿನ ತಿಂಗಳು ಅಡಿಗಲ್ಲು ನೆರವೇರಿಸಲಾಗುವುದು. ಈ ಭಾಗದ ಅಭಿವೃದ್ದಿಗೆ ಎಲ್ಲಾ ರೀತಿಯ ಸಹಕಾರ ನೀಡುವೆ ಎಂದು ಭರವಸೆ ನೀಡಿದರು‌.


Spread the love

About Laxminews 24x7

Check Also

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

Spread the love ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ