ಬೆಂಗಳೂರು: ಪೊಲೀಸ್ ಇಲಾಖೆ ನ್ಯಾಯ ಕೊಡಬೇಕು. ಚಿತ್ರರಂಗ ಸ್ವಚ್ಛ ಆಗಬೇಕು ಅನ್ನೊದು ನನ್ನ ಉದ್ದೇಶ ಎಂದು ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿಕೆಗೆ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾತನಾಡಿದ ಇಂದ್ರಜಿತ್ ಲಂಕೇಶ್, ಪೊಲೀಸ್ ಕಮಿಷನರ್ ಅವರ ತನಿಖೆಗೆ ಸಹಕರಿಸುತ್ತೀನಿ, ಭದ್ರತೆ ಕೊಡುತ್ತೀನಿ ಅಂತ ಹೇಳಿರೋದು ಸಂತೋಷ. ಆದರೆ ಪೊಲೀಸ್ ಇಲಾಖೆ ಚಿತ್ರರಂಗಕ್ಕೆ ನ್ಯಾಯ ಕೊಡಬೇಕು ಎಂದು ಕಮಲ್ ಪಂತ್ ಅವರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.
ಅಲ್ಲದೇ ಚಿತ್ರರಂಗ ಸ್ವಚ್ಛ ಆಗಬೇಕು ಅನ್ನೋದು ನನ್ನ ಉದ್ದೇಶ. ಚಿತ್ರರಂಗಕ್ಕೆ ನನ್ನಿಂದ ಯಾವುದೇ ಧಕ್ಕೆ ಆಗಲ್ಲ. ಚಿತ್ರರಂಗದ ಮಂದಿ ಡ್ರಗ್ಸ್ ಮಾಫಿಯಾದಲ್ಲಿ ಸಿಲುಕಿದೆ ಅಂದಾಗ ಫಿಲಂ ಚೇಂಬರ್ ಮಾತನಾಡಬೇಕಿತ್ತು. ಈ ಹಿಂದೆ ಹನಿಟ್ರಾಪ್ ಆರೋಪ್ ಕೇಳಿ ಬಂದಿತ್ತು. ಆಗಲೂ ಫಿಲಂ ಚೇಂಬರ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದರು.