Breaking News

ಮಹಿಳೆಯಿಂದ ವಂಚನೆ: ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಟ, ನಿರ್ದೇಶಕ

Spread the love

ಬೆಂಗಳೂರು: ಮನೆ ಮಾರಾಟ ಪ್ರಕರಣದಲ್ಲಿ ವಂಚನೆಗೊಳಗಾದ ಸ್ಯಾಂಡಲ್ ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕೊಟ್ಟ ಹಣ ಇಲ್ಲದೇ, ಮನೆ ಕೂಡ ಇಲ್ಲದೇ 50 ಲಕ್ಷ ರೂಪಾಯಿ ವಂಚನೆಯಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಮೀನಾ ಮತ್ತು ರಾಜಕುಮಾರ್ ಎಂಬುವರು ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಆರ್.ಆರ್. ನಗರದ ಜಯಣ್ಣ ಲೇಔಟ್ ನಲ್ಲಿ ಮನೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದ ನಿರ್ದೇಶಕ ನಾಗಶೇಖರ್ ಅವರು 2.20 ಕೋಟಿ ರೂ.ಗೆ ಮಾತುಕತೆ ನಡೆಸಿದ್ದರು. ಮೀನಾ ಎಂಬುವರ ಬಳಿ ಮಾತುಕತೆ ನಡೆಸಿದ್ದು, 2020 ರ ಆಗಸ್ಟ್ ನಲ್ಲಿ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು.

ಸೇಲ್ ಅಗ್ರಿಮೆಂಟ್ ಬಳಿಕ ಹಂತ ಹಂತವಾಗಿ ಮೀನಾ ಅವರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. 50 ಲಕ್ಷ ರೂಪಾಯಿ ಹಣವನ್ನು ನಾಗಶೇಖರ್ ವರ್ಗಾವಣೆ ಮಾಡಿದ್ದು, ಈಗ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಲಾಗಿದೆ. ಸೇಲ್ ಅಗ್ರಿಮೆಂಟ್ ಬಳಿಕ ಕೊಟ್ಟ ಹಣವನ್ನು ವಾಪಸ್ ನೀಡಿಲ್ಲ ಎಂದು ದೂರು ನೀಡಲಾಗಿದೆ. ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಅಡಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ