Breaking News

LPG ಗ್ಯಾಸ್ ಸಿಲಿಂಡರ್ ಸ್ಪೋಟ: 7 ಜನರಿಗೆ ಗಂಭೀರ ಗಾಯ

Spread the love

ಬೆಂಗಳೂರು: ನಗರದ ಹೊರವಲಯದಲ್ಲಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಮನೆಯೊಂದರಲ್ಲಿನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ( LPG Gas Cylinder Blast ) ಪರಿಣಾಮ, ಮನೆಯಲ್ಲಿದ್ದಂತ 7 ಜನರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ.

ಆನೇಕಲ್ ತಾಲೂಕಿನ ಜಿಗಣಿಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವಂತ ಮಂಜುನಾಥ್ ರೆಡ್ಡಿ ಎಂಬುವರಿಗೆ ಸೇರಿದಂತೆ ಮನೆಯೊಂದರಲ್ಲಿ, ಉತ್ತರ ಭಾರತ ಮೂಲಕ ಏಳು ಕಾರ್ಮಿಕರು 2 ವರ್ಷಗಳಿಂದ ಬಾಡಿಗೆ ಇದ್ದರು.

ಇಂತಹ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬ್ಲಾಸ್ ಆಗಿದೆ.

ಈ ಘಟನೆ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಡೆದಿದ್ದು, ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಮನೆ ಕೂಡ ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಕಾರ್ಮಿಕರಾದ ಜಗದೀಶ್, ಶಾಂತಿಬೈ, ಪ್ರಕಾಶ್, ಜೈಮುಲ್, ಮಂಜು ಹಾಗೂ ವಲ್ಲಿ ಎಂಬಂತ 7 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಗಣಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ