Breaking News

ಪುನೀತ್‌ ಸಾವಿನಲ್ಲಿ ವಿಕೃತಿ ಮೆರೆದ ಕಿಡಿಗೇಡಿಗಳು: ಸುದೀಪ್​ ಮಗಳು ಸಾನ್ವಿ ಹೇಳಿತ್ತು ಏನು ಗೊತ್ತಾ?

Spread the love

ಬೆಂಗಳೂರು: ನಟ ಪುನೀತ್‌ ರಾಜ್‌ ಕುಮಾರ ಅವರ ಸಾವಿಗೆ ಇಡೀ ನಾಡಿಗೆ ನಾಡು ಕಣ್ಣೀರಿಡುತ್ತಿದೆ. ನಾಡಿನ ಜನತೆ ತಮ್ಮ ಮನೆ ಮಗನನ್ನೇ ಕಳೆದುಕೊಂಡ ರೀತಿಯಲ್ಲಿ ದುಖಃದಲ್ಲಿ ಮುಳುಗಿದ್ದು, ಪುನೀತ್‌ ಅವರ ಅಕಾಲಿಕ ನಿಧನಕ್ಕೆ ದೇವರಿಗೆ ಶಾಪ ಹಾಕುತ್ತಿದ್ದಾರೆ.

 

ಈ ನಡುವೆ ಪುನೀತ್‌ ಅವರ ನಿಧನದಿಂದ ಬೆಂಗಳೂರು ನಗರದಲ್ಲಿ ಮದ್ಯಪಾನವನ್ನು ಮೂರು ದಿನ ಮಾರಾಟ ಮಾಡದಂತೆ ನಿಶೇಧಿಸಿ ಜಿಲ್ಲಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.ಆದರೆ ಉತ್ತರ ಭಾರತದ ಕೆಲವು ಮಂದಿ ಮದ್ಯಕ್ಕಾಗಿ ಬೀದಿ ಬೀದಿ ಅಲೆದಾಡಿ, ಕೊನೆಗೆ ಎಲ್ಲೋ ಮದ್ಯವನ್ನು ತೆಗೆದುಕೊಂಡು, ಅದನ್ನು ಕೈನಲ್ಲಿ ಹಿಡಿದುಕೊಂಡು ಸೋಷಿಯಲ್​ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿ, ನೀವು ನೆನಪಿನಲ್ಲೇ ಇಟ್ಟುಕೊಳ್ಳಿ ಮರೆಯಬೇಡಿ. ನಾನು ಎಣ್ಣೆ ಕುಡಿದು ಬಳಿಕ ಆತನ ಸಮಾಧಿ ಮೇಲೆ ಮೂ** ಮಾಡುತ್ತೇವೆ ಅಂತ ವಿಕೃತಿ ಮೆರೆದಿದ್ದಾರೆ.

ಈ ಪೋಸ್ಟ್‌ ನೋಡಿರುವ ಕಿಚ್ಚ ಸುದೀಪ್‌ ಸಾನ್ವಿ ಅವರು ಕಿಡಿಗೇಡಿಗಳ ಈ ಕೃತ್ಯಕ್ಕೆ ಕಿಡಿಕಾರಿದ್ದು, ಮದ್ಯಕ್ಕಾಗಿ ಈ ರೀತಿ ಮಾತನಾಡುವುದು ಸರಿಯಲ್ಲ, ಮೊದಲು ಮಾನವೀಯತೆಯನ್ನು ಕಲಿತುಕೊಳ್ಳಿ ಅಂತ ಬುದ್ದಿ ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ