Breaking News

ಕಿಚ್ಚನ ಕೋಟಿಗೊಬ್ಬ-3ಗೆ ಪೈರಸಿ ಭಯ..!

Spread the love

ಬೆಂಗಳೂರು: ಬಿಡುಗಡೆಗೂ ಮುನ್ನವೇ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಸಿನಿಮಾವನ್ನು ಬಿಡುಗಡೆಗೂ ಮುನ್ನ ಪೈರಸಿ ಮಾಡೋದಾಗಿ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪಬಾಬುಗೆ ಟೆಲಿಗ್ರಾಂನಲ್ಲಿ ಬೆದರಿಕೆಗಳು ಬಂದಿವೆಯಂತೆ. ಈ ಹಿನ್ನೆಲೆ ಸೂರಪ್ಪ ಬಾಬು ಗೃಹ ಸಚಿವ ಆರಗ ಜ್ಞಾನೇಂದ್ರಗೆ ಪತ್ರ ಬರೆದಿದ್ದಾರೆ.

ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ 1 ರಂದು ರಿಲೀಸ್ ಆಗಲಿದೆ. ಆದ್ರೆ ಅದಕ್ಕೂ ಮುನ್ನ ಇದೀಗ ಪೈರಸಿಯ ಬೆದರಿಕೆ ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಸಿನಿಮಾ ತಂಡ ಸೈಬರ್ ಕ್ರೈಂ ಮೊರೆ ಹೋಗಿದೆ. ಜೊತೆಗೆ ಕಮಿಷನರ್​ಗೂ ಭೇಟಿ ನೀಡಿ ಸೂರಪ್ಪ ಬಾಬು ಮನವಿ ಮಾಡಿಕೊಂಡಿದ್ದಾರೆ. ಪೈರಸಿ ಮಾಡೋರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ