Breaking News

ಮಾನವೀಯತೆ ಮೆರೆದ ಶಾಸಕ ಯು.ಟಿ ಖಾದರ್

Spread the love

ಮಂಗಳೂರು: ಅಂಬುಲೆನ್ಸ್ ನಲ್ಲಿ ಅರ್ಧ ಗಂಟೆ ಕಾದು ಕೂತಿದ್ದ ಕೊರೊನಾ ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಶಾಸಕ ಯು.ಟಿ ಖಾದರ್ ಮಾನವೀಯತೆ ಮೆರೆದಿದ್ದಾರೆ.

ಮಂಗಳೂರು ಹೊರವಲಯದ ದೇರಳಕಟ್ಟೆ ಎಂಬಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆ ತಂದು ನಂತರ ಜಿಲ್ಲಾಡಳಿತ ಅನುಮತಿ ಇರದ ಕಾರಣ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಹೀಗಾಗಿ ಕೋವಿಡ್-19 ಸೋಂಕಿತ ಕರೆತಂದ ಆಂಬ್ಯುಲೆನ್ಸ್‍ನಲ್ಲೇ ಅರ್ಧ ಗಂಟೆಯಿಂದ ಬಾಕಿಯಾಗಿದ್ದ. ಈ ವೇಳೆ ಇದೇ ಮಾರ್ಗವಾಗಿ ಬರುತ್ತಿದ್ದ ಮಾಜಿ ಸಚಿವ ಯು.ಟಿ.ಖಾದರ್ ಅಂಬುಲೆನ್ಸ್ ನೋಡಿ ಕಾರ್ ನಿಲ್ಲಿಸಿ ವಿಚಾರಿಸಿದ್ದಾರೆ.

ಈ ವೇಳೆ ಕೋವಿಡ್-19 ರೋಗಿಯನ್ನು ಚಿಕಿತ್ಸೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದ ವಿಚಾರ ತಿಳಿದು, ಸ್ವತಃ ತಾವೇ ಮುಂದೆ ನಿಂತು ಸೋಂಕಿತನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಕೋವಿಡ್-19 ವಿಭಾಗಕ್ಕೆ ದಾಖಲು ಮಾಡಿದ್ದಾರೆ. ಖಾದರ್ ಅವರ ಉತ್ತಮ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.


Spread the love

About Laxminews 24x7

Check Also

ಸುಬ್ರಹ್ಮಣ್ಯ: ರೈಲ್ವೆ ಹಳಿ ಮೇಲೆ ಬಂಡೆ ಬಿದ್ದು ಸಂಚಾರದಲ್ಲಿ ವ್ಯತ್ಯಯ

Spread the loveಸುಬ್ರಹ್ಮಣ್ಯ(ದ.ಕನ್ನಡ): ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಬರುವ ಎಡಕುಮಾರಿ-ಶಿರಿಬಾಗಿಲು ನಡುವೆ ಗುಡ್ಡ ಕುಸಿದು ಮೆಟೀರಿಯಲ್​ ರೈಲ್ವೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ