Breaking News

ಗೋಕಾಕ ನಗರದಲ್ಲಿ ಐದು ದಿನಗಳ ಕಾಲ ಲಾಕ್ ಡೌನ್

Spread the love

ಗೋಕಾಕ:  ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ನಗರದಲ್ಲಿ ಐದು ದಿನಗಳ ಕಾಲ ಲಾಕ್ ಡೌನ್ ಮಾಡಲು  ನಿರ್ಧರಿಸಲಾಗಿದೆ ಎಂದು ನಗರಸಭೆ  ಕಮಿಷನರ್ ಶಿವನಂದ ಹಿರೇಮಠ್  ತಿಳಿಸಿದ್ದಾರೆ.

 ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ  ಅಂಗಡಿ, ಮುಗ್ಗಟ್ಟು ಹಾಗೂ ವ್ಯಾಪಾರಸ್ತರೊಂದಿಗೆ ಮಂಗಳವಾರ  ನಡೆದ ಸಭೆಯಲ್ಲಿ ನಾಳೆಯಿಂದ  ಆ. 15(ರವಿವಾರ)ದವರೆಗೂ ಲಾಕ್ ಡೌನ್ ಮಾಡಲು ತೀರ್ಮಾನಿಸಲಾಗಿದೆ.

ಬಳಿಕ  ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚುತಲಿದೆ.  ಹೀಗಾಗಿ ಬಟ್ಟೆ ಅಂಗಡಿ, ಹೊಟೇಲ್ ಮಾಲೀಕರು, ಮೊಬೈಲ್ ಶಾಪ್ ಮಾಲೀಕರು ಸೇರಿದಂತೆ ಬಹುತೇಕ ಎಲ್ಲ ವ್ಯಾಪಾರಸ್ಥರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಕೊರೊನಾ ಸೋಂಕು ಚೈನ್ ಬ್ರೇಕ್ ಮಾಡಲು  ಲಾಕ್ ಡೌನ್ ಅವಶ್ಯವಾಗಿದೆ. ಬೆಳ್ಳಗ್ಗೆ 11 ಗಂಟೆವರೆಗೂ ಅಗತ್ಯ  ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ