38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಕೈಹಿಡಿದಿದ್ದಾಳೆ.

Spread the love

ಚಿಕ್ಕಮಗಳೂರು: 38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಕೈಹಿಡಿದಿದ್ದಾಳೆ. ಆಕೆಗೆ ಇತನೇ ಬೇಕು ಎನ್ನುವುದು ಮುಖ್ಯವಲ್ಲ. ಆದರೆ ಈತ ಇವಳೇ ಬೇಕು, ಬಾಳು ಕೊಡುತ್ತೇನೆ ಎನ್ನುವುದು ವಿಶೇಷದಲ್ಲಿ ವಿಶೇಷ.

ಕಂಬಿಹಳ್ಳಿ ಚಂದ್ರುಗೂ ಈಕೆ ಹೆಂಡತಿ. ಹನಿಕೆ ಬಸವರಾಜನ ಪ್ರೇಮಿಯೂ ಈಕೆ. ಬೆಂಗಳೂರಿನ ಬೇಕರಿಯ ಕಿರಣನ ಮನದರಸಿಯೂ ಹೌದು. ರಮೇಶನ ರಾಧೆಯೂ ಇವಳೇ. ತುಕಾರಂನ ಮಡದಿಯೂ ಇದೇ ಗಟ್ಟಿಗಿತ್ತಿ. ಈಗ ರಂಗೇನಹಳ್ಳಿ ಚಂದ್ರುವಿನ ಚಕೋರಿ.

 

38ರ ಅಸುಪಾಸಿಗೆ ಆರನೇ ಮದ್ವೆಯಾದ ಪ್ರಿಯಾಳ ಕೊನೆ ಪ್ರೇಮಿ ವಯಸ್ಸು ಕೇವಲ 22. ಪ್ರೀತಿಗೆ ಕಣ್ಣಿಲ್ಲ ನಿಜ. ಬುದ್ಧಿಯೂ ಇಲ್ಲದಂತಾಯ್ತು. ಈಕೆ ಐದು ಮದ್ವೆಯಾಗಿ ಎರಡು ಮಕ್ಕಳಿದ್ದರೂ 38ನೇ ವಯಸ್ಸಿಗೆ ಆರನೇ ಬಾರಿ ಹಸೆಮಣೆ ಏರಿ, ಕೈಗೆ ಕರಿ ಬಳಿ ಧರಿಸಿ 22ರ ಯುವಕನ ಜೊತೆ ಸಂಸಾರ ಶುರು ಮಾಡಿದ್ದಾಳೆ.

ಈಕೆಯನ್ನ ವರಿಸಿದ 22ರ ಯುವಕ ಕೂಡ ನಂಗೆ ಇವಳೇ ಬೇಕು. ನಾನು ಇವಳ ಜೊತೆಯೇ ಇರುತ್ತೇನೆ ಎಂದಿದ್ದಾನೆ. ಅಂತಿದ್ದಾನೆ. ಇನ್ನು ತನ್ನ ಆರನೇ ಮದುವೆ ಬಗ್ಗೆ ಹೇಳಿಕೊಂಡಿರುವ ಮದುವೆ ಎಕ್ಸ್ಪರ್ಟ್ ಮೇಡಂ, ಇದೆ ಕೊನೆ ಮದುವೆ ನಾವಿಬ್ರೂ ಚೆನ್ನಾಗಿ ಇರುತ್ತೇವೆ ಎಂದು ಪ್ರಾಮಿಸ್ ಮಾಡಿದ್ದಾಳೆ ಪ್ರಿಯಾ.

ನಾನು ಈಕೆಯನ್ನ ಬೀಡೋದಿಲ್ಲ, ಒಂದು ತಿಂಗಳಿಂದ ಲವ್ ಮಾಡ್ತಿದ್ವಿ. ನಾನೇ ಈಕೆಯನ್ನ ಇಷ್ಟ ಪಟ್ಟು ಮದ್ವೆ ಆದೆ, ಈಕೆಗೊಂದು ಬಾಳು ಕೊಡ್ತೀನಿ ಅಂತಿದ್ದಾನೆ 22ರ ಲವ್ವರ್ ಬಾಯ್ ಚಂದ್ರು. ಚಂದ್ರುವಿಗೆ ಪೋಷಕರು ಇಲ್ಲ. ಈತನನ್ನು ಅಕ್ಕ ಸಾಕಿದ್ದಾರೆ.

ಅವಳಿಗೆ 5 ಮದುವೆಯಾಗಿದೆ, ಇಬ್ಬರು ಮಕ್ಕಳಿದ್ದಾರೆ, ನಿನಗಿಂತ ದೊಡ್ಡವಳು ಎಂದು ಅಕ್ಕ ಬುದ್ಧಿವಾದ ಹೇಳಿದ್ದರೂ ಚಂದ್ರು ನನಗೆ ಈಕೆಯೇ ಬೇಕು ಅಂತಿದ್ದಾನೆ ಮುಖದ ಮೇಲೆ ಇನ್ನು ಸರಿಯಾಗಿ ಮೀಸೆ ಮೂಡದ ಹುಡುಗ.


Spread the love

About Laxminews 24x7

Check Also

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

Spread the loveಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪಕ್ಷದ ವಿರುದ್ಧವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ