Breaking News

ಬಿಎಂಟಿಸಿ ಸಿಬ್ಬಂದಿಯ ಸಂಬಳ94 ಕೋಟಿ 64 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ

Spread the love

ಬೆಂಗಳೂರು : ಬಿಎಂಟಿಸಿ ಸಿಬ್ಬಂದಿಯ ಸಂಬಳ ವಿತರಣೆ ಮಾಡುವ ಸಲುವಾಗಿ ಸರ್ಕಾರದಿಂದ 94 ಕೋಟಿ 64 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ.

ಬಿಎಂಟಿಯಲ್ಲಿ ಕೊರೊನಾ ಕಾರಣದಿಂದಾಗಿ ಉಂಟಾದ ಸಂಕಷ್ಟದಿಂದಾಗಿ ತನ್ನ ನೌಕರರ ಡಿಸೆಂಬರ್​ ಮತ್ತು ಜನವರಿ ತಿಂಗಳ ಅರ್ಧ ಸಂಬಳವನ್ನು ಮಾತ್ರ ನೀಡಲಾಗಿತ್ತು. ಇನ್ನರ್ಧ ನೀಡಲಾಗಿರಲಿಲ್ಲ. ಈ ಸಂಬಂಧ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ ಶಿಕಾರವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ ನೌಕರರ ಸಂಬಳಕ್ಕಾಗಿ 94 ಕೋಟಿ ರೂಪಾಯಿಯ ಹಣ ಮಂಜೂರು ಮಾಡುವಂತೆ ಕೋರಲಾಗಿತ್ತು.

ಕೊರೊನಾ ಲಾಕ್​ ಡೌನ್​ ಉಂಟು ಮಾಡಿದ ಆರ್ಥಿಕ ಸಮಸ್ಯೆಯಿಂದ ಇನ್ನು ಹೊರ ಬಾರದ ಬಿಎಂಟಿಸಿಯ ಸ್ಥಿತಿಯನ್ನ ಗಮನಿಸಿದ ಸರ್ಕಾರ ನೌಕರರ ನೆರವಿಗೆ ಧಾವಿಸಿದೆ. ಅದಕ್ಕಾಗಿಯೇ ಸದ್ಯ ಹಣ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರ ಮಂಜೂರು ಮಾಡಿರುವ ಹಣದಿಂದಲೇ ಸಿಬ್ಬಂದಿಗೆ ಉಳಿದ ಸಂಬಳವನ್ನು ನೀಡಲಾಗುತ್ತದೆ ಎನ್ನಲಾಗಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ