ಕಾರವಾರ: ರೆಡ್ ಝೋನ್‍ನಲ್ಲಿ ಇದ್ದ ಉತ್ತರ ಕನ್ನಡ ಜಿಲ್ಲೆ ವೈದ್ಯಾಧಿಕಾರಿಗಳ ಹಾಗೂ ಜಿಲ್ಲಾಡಳಿತದ ಕಠಿಣ ಶ್ರಮದಿಂದ ಹಳದಿ ವಲಯಕ್ಕೆ ಬಂದಿದೆ.
ಜೊತೆಗೆ ಸೋಂಕಿತ 11 ಜನರೂ ಗುಣಮುಖರಾಗುವಂತೆ ಶ್ರಮವಹಿಸಿ ಕಾರ್ಯನಿರ್ವಹಿದ ಕೊರೊನಾ ವಾರಿಯರ್ಸ್ ಉತ್ತರ ಕನ್ನಡ ಜಿಲ್ಲೆಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಹಗಲಿರುಳೂ ಈ ಕಾಯಕದಲ್ಲಿ ಇರುವ ವೈದ್ಯಕೀಯ ಸಿಬ್ಬಂದಿಗಳು ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಕೊರೊನಾ ಸೋಂಕಿತರ ಚಿಕಿತ್ಸೆ ಕುರಿತು ಕಾರವಾರದ ಕೊರೊನಾ ವಿಶೇಷ ವಾರ್ಡ್ ನಲ್ಲಿ ಕಾರ್ಯ ನಿರ್ವಹಿಸುವ ವೈದ್ಯಾಧಿಕಾರಿ ಶರತ್ ಅವರು ವಿವರ ನೀಡಿದರು.
ಶರತ್ ಅವರು ಹೇಳುವಂತೆ ಸೋಂಕಿತರನ್ನು ಮೂರು ವಿಭಾಗ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ತುಂಬ ಕ್ರಿಟಿಕಲ್ ಇರುವವರಿಗೆ ವೆಂಟಿಲೇಷನ್ ವ್ಯವಸ್ಥೆ ಕಲ್ಪಿಸಿ ತೀರ್ವ ನಿಗಾ ವಹಿಸಲಾಗುತ್ತದೆ. ಇಲ್ಲಿಗೆ ಬರುವ ಸೋಂಕಿತರ ಬಟ್ಟೆ ಸಹಿತ ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚಿಕಿತ್ಸೆ ನೀಡುವ ವೈದ್ಯಕೀಯ ತಂಡ ಪಿಪಿಇ ಕಿಟ್ ಹಾಕಿಕೊಂಡು ಹೋಗುವುದು ಕಡ್ಡಾಯವಾಗಿದ್ದು, ಬರುವಾಗ ಪಿ.ಪಿ.ಇ ಕಿಟ್ ಅನ್ನು ಅಲ್ಲಿಯೇ ಬಿಟ್ಟು ಪ್ರತ್ಯೇಕ ಕೊಠಡಿಯಲ್ಲಿ ಸ್ನಾನ ಮಾಡಿ ಹೊರಬರಬೇಕು ಎಂದು ತಿಳಿಸಿದ್ದಾರೆ.
ಪಿಪಿಇ ಕಿಟ್ ಇಲ್ಲದೇ ಯಾರೊಬ್ಬರಿಗೂ ಒಳ ಪ್ರವೇಶವಿರುವುದಿಲ್ಲ ಹಾಗೂ ವೈದ್ಯರನ್ನು ಸಹ ತಪಾಸಣೆ ಮಾಡಲಾಗುತ್ತದೆ ಎಂದು ತಮ್ಮ ಕಾರ್ಯದ ಬಗ್ಗೆ ಕೆಲವು ವಿಚಾರಗಳನ್ನು ಶರತ್ ಅವರು ಹಂಚಿಕೊಂಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿ.ವಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ಲಾಕ್ ಡೌನ್ ನಂತರ ವಿದೇಶದಿಂದ ಜಿಲ್ಲೆಗೆ ಬರುವ ಜನರನ್ನು ಕೊರಂಟೈನ್ ಮಾಡುವ ಜೊತೆ ಇವರ ಮೇಲೆ ನಿಗಾ ಇಡಲು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಕಾರ್ಯಪಡೆ ಸ್ಥಾಪನೆ ಮಾಡಲಾಗುವುದು. ಇನ್ನು ಜಿಲ್ಲೆಯಲ್ಲಿ ಕೊರೊಟಿಂ ವಾರ್ಡ್ ಸಹ ನಿರ್ಮಿಸಲಾಗಿದ್ದು ಪ್ರಯೋಗಾಲಯ ಸಹ ಇನ್ನು 15 ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಸಹ ಕೊರೊನಾ ವಿರುದ್ಧ ಹೋರಾಟಲು ಜಿಲ್ಲೆ ಸಮರ್ಥವಾಗಿದ್ದು ನುರಿತ ವೈದ್ಯರ ತಂಡ, ಪ್ರತ್ಯೇಕ ಆಸ್ಪತ್ರೆ, ಹೆಚ್ಚಿನ ಮೆಡಿಸಿನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಮೇ4 ರ ನಂತರ ಭಟ್ಕಳ ಹೊರತುಪಡಿಸಿ ಎಲ್ಲೆಡೆ ಲಾಕ್ ಡೌನ್ ಸಡಿಲಿಕೆ ಮಾಡಲಿದ್ದು ಭಟ್ಕಳದಲ್ಲಿ ಮೇ.15 ರ ವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು ಹಂತ ಹಂತವಾಗಿ ಸಡಿಲಿಕೆ ಮಾಡಲಾಗುವುದು. ಜಿಲ್ಲೆಯ ಗಡಿಭಾಗದಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಯಾರೂ ಹೊರ ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.credits to public tv
pic