Breaking News

ಮಾವನ ಜೊತೆ ಜೇನು ಮುರಿಯಲು ಹೋಗಿದ್ದ ಬಾಲಕ ಶವವಾಗಿ ಪತ್ತೆ – ಕೊಲೆ ಶಂಕೆ

Spread the love

ದಾವಣಗೆರೆ: ಮಾವನ ಜೊತೆ ಜೇನು  ಮುರಿಯಲು ಹೋಗಿದ್ದ 7 ವರ್ಷದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ದಾವಣಗೆರೆ  ಜಿಲ್ಲೆಯ ಜಗಳೂರು  ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಶಶಿನಾಯ್ಕ್ ಎಂಬವರ ಪುತ್ರ ಆದಿತ್ಯ (7) ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾನೆ. ಬುಧವಾರ ಬೆಳಗ್ಗೆ ಮಾವ ತಾವರೆನಾಯ್ಕ್ ಜೊತೆ ಬಾಲಕ ಜೇನು ಮುರಿದುಕೊಂಡು ಬರಲು ಹೋಗಿದ್ದ. ಸಂಜೆಯಾದರೂ ಇಬ್ಬರು ಮನೆಗೆ ಬಾರದ ಹಿನ್ನೆಲೆ ಜಗಳೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಗ್ರಾಮದ ಪಕ್ಕದ ಹಳ್ಳದಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಮಾವ ತಾವರೆನಾಯ್ಕ್ ಬಾಲಕನನ್ನು ಕೊಲೆ ಮಾಡಿ ಬಿಸಾಕಿ ಹೋಗಿದ್ದಾನೆ ಎಂದು ಶಂಕಿಸಲಾಗಿದೆ.

ಘಟನೆ ಬಳಿಕ ಮಾವ ತಾವರೆನಾಯ್ಕ್ ನಾಪತ್ತೆಯಾಗಿದ್ದಾನೆ. ಸದ್ಯ ಬಾಲಕ ಆದಿತ್ಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಬಾಲಕನ ಮಾವ ತಾವರೆನಾಯ್ಕ್‌ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎಂಬುದು ಇನ್ನು ನಿಗೂಢವಾಗಿದೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ