Breaking News

ಕೆಆರ್ ಮಾರ್ಕೆಟ್ ಶಿಫ್ಟ್ ಪ್ಲಾನ್ ಠುಸ್- ಬಸವನಗುಡಿ ಮೈದಾನದಲ್ಲಿ ಸಾಮಾಜಿಕ ಅಂತರವೇ ಇಲ್

Spread the love

ಬೆಂಗಳೂರು: ಜನದಟ್ಟನೆ ಹಿನ್ನೆಲೆಯಲ್ಲಿ ಕೆಆರ್ ಮಾರ್ಕೆಟ್ ಅನ್ನು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್ ಮಾಡಿದ್ದ ಪ್ಲಾನ್ ವಿಫಲವಾಗಿದೆ.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ ಕೆ.ಆರ್ ಮಾರುಕಟ್ಟೆಯಂತೆ ಆಗಿದೆ. ಬಸವನಗುಡಿ ಮೈದಾನದಲ್ಲಿ ಅನೇಕ ತರಕಾರಿ ಲೋಡ್ ಲಾರಿಗಳು ನಿಂತಿವೆ. ಅಷ್ಟೇ ಅಲ್ಲದೆ ಯಾವುದೇ ಸಾಮಾಜಿಕ ಅಂತರ ಇಲ್ಲದಂತಾಗಿದೆ. ಈ ಮೂಲಕ ಜನಸಂದಣಿ ಕಡಿಮೆ ಮಾಡುವ ಬಿಬಿಎಂಪಿ ಪ್ಲಾನ್ ಠುಸ್ ಆಗಿದೆ.

20 ಅಡಿ ಅಂತರದಲ್ಲಿ ಸ್ಟಾಲ್ ನಿರ್ಮಾಣ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿತ್ತು. ಆದರೆ ಯಾವ ಅಂತರವೂ ಕಾಣದ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಕಾಣಿಸಲಿಲ್ಲ. ಅಲ್ಲದೇ ಕೆಆರ್ ಮಾರ್ಕೆಟ್ ಕಲಾಸಿಪಾಳ್ಯಕ್ಕೂ ವಿಸ್ತರಿಸಿಕೊಂಡಿದೆ.

ಈ ಕುರಿತು ಶುಕ್ರವಾರ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ಮತ್ತು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿದೆ. ತಾತ್ಕಾಲಿಕವಾಗಿ 15 ದಿನಗಳ ಕಾಲ ಕೆ.ಆರ್.ಮಾರ್ಕೆಟ್‍ನ ಹೋಲ್‍ಸೇಲ್ ತರಕಾರಿ ಮಾರುಕಟ್ಟೆಯನ್ನು ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಸ್ಟಾಲ್‍ಗಳು ಸಿದ್ಧವಾಗಿದ್ದು, 20 ಅಡಿ ಅಂತರದಲ್ಲಿ 10 ಸ್ಟಾಲ್‍ಗಳನ್ನು ಹಾಕಲಾಗಿದೆ. ಸಾರ್ವಜನಿಕರು ಅಂತರ ಕಾಯ್ದುಕೊಳ್ಳಲು 5 ಅಡಿ ಅಂತರದಲ್ಲಿ ಸರ್ಕಲ್ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದರು. ಆದರೆ ಸಾಮಾಜಿಕ ಅಂತರವಿಲ್ಲದಿರುವುದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ನೇತೃತ್ವದಲ್ಲೇ ಮುಂದುವರೆಯುತ್ತಿದ್ದೇವೆ,

Spread the loveಚಾಮರಾಜನಗರ: “ಸಿಎಂ ಸ್ಥಾನ ಖಾಲಿಯಿಲ್ಲ, ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಐದು ವರ್ಷ ಮುಂದುವರಿಯುತ್ತೇವೆ” ಎಂದು ಅರಣ್ಯ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ