ಗೋಕಾಕ: ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ,ಪ್ಯಾರಾಮೆಡಿಕಲ್ ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವ ವಿಮೆ ಮಾಡಿಸಿದಂತೆ,ಪತ್ರಕರ್ತರಿಗೆ, ಪೋಲೀಸರಿಗೆ ವಿಮೆ ಮಾಡಿಸಬೇಕೆಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ.
ನಗರದ ಹಿಲ್ ಗಾರ್ಡನ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸತೀಶ್ ಜಾರಕಿಹೊಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಾರ್ವಜನಿಕರು ಮಹಾಮಾರಿ ಕೊರೋನಾ ವೈರಸ್ ಹರಡದಂತೆ ಜಾಗೃತಿ ವಹಿಸಬೇಕು,ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೇ ಮನೆಯಲ್ಲಿದ್ದು ಸೋಸಿಯಲ್ ಡಿಸ್ಟನ್ಸ್ ಕಾಪಾಡಬೇಕು ಎಂದು ಸತೀಶ್ ಜಾರಕಿಹೊಳಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.