Breaking News

ಪಿಕೆಪಿಎಸ್ ದಲ್ಲಿ ಸೇವೆ ಸಲ್ಲಿಸಿದ ಬಸಪ್ಪಾ ಶಿದ್ನಾಳ ನಿಧನ

Spread the love

ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ಹಿರಿಯರು ಶಿದ್ನಾಳ ಮನೆತನದ ಬಸಪ್ಪಾ ಬಾಳಪ್ಪ ಶಿದ್ನಾಳ ಶುಕ್ರವಾರ ನಿಧನರಾದರು. ಮೃತರು ಗ್ರಾಮದ ಮಡಿವಾಳೇಶ್ವರ ಪಿಕೆಪಿಎಸ್ ದಲ್ಲಿ 3ದಶಕಗಳ ಕಾಲ ಅವಿರತ ಸೇವೆ ಸಲ್ಲಿಸಿ ಗ್ರಾಮದ ರೈತರಿಗೆ ಉತ್ತಮ ಸೇವೆ ನೀಡಿ ಜನಮಾನಸದಲ್ಲಿ ಉಳಿದಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು ಗ್ರಾಮದ ಎಲ್ಲ ಕಾರ್ಯಗಳಲ್ಲಿ ತೊಡಗಿಕೊಂಡು ಮರಡಿ ಬಸವೇಶ್ವರ ದೇವಸ್ಥಾನದ ಟ್ರಸ್ಟಿಗಳಾಗಿ ಸೇವೆ ಸಲ್ಲಿಸಿದ ಇವರು ಶುಕ್ರವಾರ ನಿಧನರಾದರು.
ಮೃತರಿಗೆ ಪತ್ನಿ, ಒರ್ವ ಮಗಳು ಮಗ ಹಾಗೂ ಅಪಾರ ಬಂಧು ಬಳಗ ಹೊಂದಿದ್ದಾರೆ.
ಸಂತಾಪ: ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಬಿ.ಸಿದ್ದನಗೌಡರ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ವೀರಣಗೌಡ ಸಂಗಣ್ಣವರ, ಸೋ.ಸ.ಸ.ಖಾ ನಿರ್ದೇಶಕ ಪ್ರಕಾಶ ಮೂಗಬಸವ ಮಾಜಿ ನಿರ್ದೇಶಕ ಜಿ.ಎನ್.ಮೂಗಬಸವ ಮಾಜಿ ತಾಪಂ ಸದಸ್ಯ ಜಗದೀಶ್ ಬೂದಿಹಾಳ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮುರಗೋಡ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭ

Spread the loveಮುರಗೋಡ: ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮಾ.30ರವರೆಗೆ ಜರುಗಲಿದೆ. ದುರ್ಗಾದೇವಿಯ ದ್ವಾರ ಬಾಗಿಲು ಪೂಜೆ ನೆರವೇರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ