Breaking News

ಐಸಿಸಿ ಟಿ -20 ವಿಶ್ವಕಪ್ ಮುಂದೂಡಿಕೆ – ಐಪಿಎಲ್ ಲೀಗ್ ಗೆ ರಹದಾರಿ

Spread the love

ನವದೆಹಲಿ, ಜು.23 (ಹಿ.ಸ) : ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಈ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಬೇಕಿದ್ದ ಐಸಿಸಿ ಟಿ-20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯನ್ನು 2022ಕ್ಕೆ ಮುಂದೂಡಿದೆ. ಈ ಹಿನ್ನಲೆಯಲ್ಲಿ ಇಂಡಿಯನ್ ಪ್ರೀಮಿಯರ್‌ ಲೀಗ್‌ ಆಯೋಜನೆಗೆ ರಹದಾರಿ ಸಿಕ್ಕಂತಾಗಿದೆ.

ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಮಾರ್ಚ್‌ 29ರಿಂದ ಮೇ 24ರವರೆಗೆ ನಡೆಯಬೇಕಿದ್ದ ಐಪಿಎಲ್‌ 2020 ಟೂರ್ನಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಅನಿರ್ದಿಷ್ಟ ಕಾಲ ರದ್ದು ಪಡಿಸಿತ್ತು.

ಸೆಪ್ಟೆಂಬರ್‌-ನವೆಂಬರ್‌ ಅವಧಿಯಲ್ಲಿ ಟೂರ್ನಿ ಆಯೋಜನೆಗೆ ಯೋಜನೆ ರೂಪಿಸಿತ್ತು. ಆದರೆ, ವಿಶ್ವಕಪ್‌ ಮುಂದೂಡದ ಹೊರತಾಗಿ ಬಿಸಿಸಿಐಗೆ ಐಪಿಎಲ್‌ ಆಯೋಜಿಸುವುದು ಸಾಧ್ಯವಿರಲಿಲ್ಲ.

 

ಐಪಿಎಲ್ ಪಂದ್ಯಾವಳಿಯನ್ನು ವಿಶ್ವಕಪ್‌ ಗೆ ಹೋಲಿಸಿರುವ ಗ್ಲೇನ್ ಮ್ಯಾಕ್ಸ್‌ವೆಲ್, ಇದರಲ್ಲಿ ಭಾಗವಹಿಸುವ ಸಾಗರೋತ್ತರ ಆಟಗಾರರು ಅದರಲ್ಲಿ ಆಡುವ ‘ಕಿಕ್ ಪಡೆಯಿರಿ ಎಂದು ಹೇಳಿದ್ದಾರೆ.

https://youtu.be/I1U-UG-NHuk


Spread the love

About Laxminews 24x7

Check Also

ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್

Spread the loveಬೆಂಗಳೂರು: ಸ್ವಂತ ಅಕ್ಕ-ಭಾವನಿಂದಲೇ ತಂಗಿ-ಮೈದುನನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪ ಬೆಂಗಳೂರಿನ ಚಂದ್ರಾ ಲೇಔಟ್‌ನಲ್ಲಿ  ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ