Breaking News

ಅಡ್ಡ ಮತದಾನ ಮಾಡಿರೋರ ಮೇಲೆ ಹೈಕಮಾಂಡ್‌ನಿಂದ ಕ್ರಮ: ಸುರೇಶ್ ಗೌಡ

Spread the love

ಬೆಂಗಳೂರು: ಅಡ್ಡ ಮತದಾನಮಾಡಿರುವವರ ವಿರುದ್ಧ ಹೈಕಮಾಂಡ್ ಕ್ರಮ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.

ಅಡ್ಡ ಮತದಾನ ವಿಚಾರವಾಗಿ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಆಣೆ-ಪ್ರಮಾಣ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಡ್ಡ ಮತದಾನದ ಕುರಿತು ಕಾಂಗ್ರೆಸ್‌ನವರೇ ಅಪಪ್ರಚಾರ ಮಾಡುತ್ತಿದ್ದಾರೆ. ನಾನೇ ಕ್ರಾಸ್ ವೋಟ್ ಮಾಡಿದ್ದೀನಿ ಅಂತ ಹೇಳ್ತಿದ್ರು. ನಾನು ಅಡ್ಡ ಮತದಾನ ಮಾಡಿಲ್ಲ. ಅವರ ಆರೋಪಕ್ಕೆ ನಾನೇನು ತಲೆಕೆಡಿಸಿಕೊಂಡಿಲ್ಲ. ಪ್ರಾಮಾಣಿಕವಾಗಿ ಇರುವವರಿಗೆ ಯಾವುದೇ ಆಣೆ-ಪ್ರಮಾಣ ಬೇಕಿಲ್ಲ ಎಂದರು.

ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಪಕ್ಷಕ್ಕೆ ಗೊತ್ತಿದೆ. ಮೋದಿ, ಅಮಿತ್ ಶಾ ಬಳಿ ಎಲ್ಲ ಮಾಹಿತಿ ಇದೆ. ಕೇಂದ್ರದ ಬಳಿ ಸಿಬಿಐ, ಐಬಿ ಎಲ್ಲವೂ ಇದೆ. ಕೇಂದ್ರದ ನಾಯಕರಿಗೆ ಎಲ್ಲಾ ಮಾಹಿತಿ ಇರುತ್ತದೆ. ಪಕ್ಷಕ್ಕೆ ದ್ರೋಹ ಮಾಡಿದ ಯಾರನ್ನೂ ಪಕ್ಷ ಬಿಡಲ್ಲ. ತಕ್ಕ ಶಾಸ್ತಿ ಮಾಡುತ್ತಾರೆ. ಅಡ್ಡ ಮತದಾನ ಯಾರೇ ಮಾಡಿದರೂ ಅವರಿಗೆ ಬುದ್ಧಿ ಕಲಿಸುತ್ತಾರೆ. ಪಕ್ಷಕ್ಕೆ ದ್ರೋಹ ಬಗೆದರೆ ತಾಯಿಗೆ ದ್ರೋಹ ಬಗೆದಂತೆ. ಅಡ್ಡ ಮತದಾನ ಮಾಡಿರುವವರ ಮೇಲೆ ಹೈಕಮಾಂಡ್ ಕ್ರಮ ತೆಗೆದುಕೊಂಡೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ