Breaking News

ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎನ್ನಲಿ, ಇಲ್ಲ ಬದಲಾವಣೆ ಮಾಡ್ತೀವಿ ಅಂತಾದ್ರೂ ಹೇಳಲಿ: ರಾಜಣ್ಣ

Spread the love

ಮೈಸೂರು: ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಕೊಡಲಿ, ಇಲ್ಲ ಬದಲಾವಣೆ ಮಾಡ್ತೀವಿ ಅಂತಾದ್ರೂ ಹೇಳಲಿ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ  ಹೇಳಿದ್ದಾರೆ.

ಮೈಸೂರಿನಲ್ಲಿ  ಮಾತನಾಡಿದ ಅವರು, ನಾನು ಸಿಎಂ ಬದಲಾಗುತ್ತಾರೆ ಅಂತಾನೂ ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರರು ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಆದರೂ ಕೊಡಲಿ. ಇಲ್ಲ ಬದಲಾವಣೆ ಮಾಡುತ್ತೇವೆ ಎಂಬುದಾದರೂ ಹೇಳಲಿ. ಎರಡು ಬಿಟ್ಟು ಬರಿ ಗೊಂದಲವೇ ಇದ್ರೆ ಅದು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಅತಿ ಬೇಗ ಜಾಗರೂಕವಾಗಿ ನಿರ್ಧಾರ ಕೈಗೊಳ್ಳಲಿ. ನಿರ್ಧಾರ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಡಿಕೆ ಶಿವಕುಮಾರ್‌ಗೆ ಆಸೆ ಇರುವುದು ಸಹಜ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ