Breaking News
Home / ಜಿಲ್ಲೆ / ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

ಇನ್ಫೋಸಿಸ್ ಫೌಂಡೇಶನ್‍ನಿಂದ 220ಕ್ಕೂ ಅಧಿಕ ಕಾರ್ಮಿಕರಿಗೆ ಆಹಾರದ ಕಿಟ್

Spread the love

ಹುಬ್ಬಳ್ಳಿ: ಸುಧಾಮೂರ್ತಿ ಅವರ ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಕಿಟ್‍ಗಳನ್ನು ಭಾನುವಾರ 220ಕ್ಕೂ ಹೆಚ್ಚು ಕಾರ್ಮಿಕರಿಗೆ ವಿತರಿಸಲಾಯಿತು.

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿನ ಕರ್ನಾಟಕ ರಾಜ್ಯ ಆಹಾರ ನಿಗಮ (ಕೆಎಸ್‍ಸಿಎಫ್‍ಸಿ) 8 ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 220ಕ್ಕೂ ಹೆಚ್ಚು ಕಾರ್ಮಿಕರು, ಲಾರಿ ಚಾಲಕರು, ಕ್ಲೀನರ್‌ಗಳಿಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ, ಇಸ್ಕಾನ್‍ನ ಸಾಯಿನಾಥ್ ವಿತರಿಸಿದರು

ಇನ್ಫೋಸಿಸ್ ಫೌಂಡೇಶನ್ ನೀಡಿರುವ ಆಹಾರ ಧಾನ್ಯಗಳ ಪ್ರತಿ ಕಿಟ್‍ನಲ್ಲಿ 5 ಕೆ.ಜಿ. ಅಕ್ಕಿ, ಅಡುಗೆ ಎಣ್ಣೆ, ತೊಗರಿಬೇಳೆ ಸೇರಿದಂತೆ ಸುಮಾರು 17 ಆಹಾರ ಪದಾರ್ಥಗಳು ಇವೆ. ಒಂದು ಕಿಟ್‍ನ ಬೆಲೆ ಸುಮಾರು 750 ರೂ. ಮೌಲ್ಯದ್ದಾಗಿದೆ.

ವೃತ್ತಿ ನಾಟಕ ಕಂಪನಿಯ ಕಲಾವಿದರಿಗೂ ಕಲಘಟಗಿಯ ಜಾತ್ರೆಯಲ್ಲಿ ಬಿಡಾರ ಹೂಡಿ ಈಗ ಲಾಕ್‍ಡೌನ್‍ನಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೂ ಈ ಆಹಾರ ಧಾನ್ಯಗಳ ಕಿಟ್ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.


Spread the love

About Laxminews 24x7

Check Also

ಗುಜರಾತ್: ಗೌತಮ್ ಅದಾನಿ ಸಮ್ಮುಖದಲ್ಲಿ ಲ್ಯಾಕ್ಟೋಫೆರಿನ್ ಘಟಕ ಉದ್ಘಾಟಿಸಿದ ಶರದ್ ಪವಾರ್

Spread the love ವಾಸ್ನಾ (ಗುಜರಾತ್): ಗುಜರಾತ್​ನಲ್ಲಿ ದೇಶದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್‌ಮ್‌ಪವರ್​ಅನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ