Breaking News

ಕಾಮಗಾರಿಗಳನ್ನು ಪರಿಶೀಲಿಸಿದ ಶಾಸಕ ಆಸಿಫ್ (ರಾಜು) ಸೇಠ್

Spread the love

ಶಾಸಕ ಆಸಿಫ್ (ರಾಜು) ಸೇಠ್, ಅಮನ್ ನಗರ 4ನೇ, 5ನೇ, 6ನೇ ಮತ್ತು 7ನೇ ಕ್ರಾಸ್‌ಗೆ ಅಂಕಿತ್ ರಾಜೇಂದ್ರ ಸೇರಿದಂತೆ ನಿಗಮದ ಅಧಿಕಾರಿಗಳು, ಹೆಸ್ಕಾಂ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಭೇಟಿ ನೀಡಿ, ಈ ಪ್ರದೇಶದಲ್ಲಿ ನಡೆಯುತ್ತಿರುವ ಚರಂಡಿ, ಬೀದಿ ದೀಪ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಶಾಸಕರು ಸ್ಥಳೀಯ ನಿವಾಸಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿದರು ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಒಳಚರಂಡಿ, ರಸ್ತೆ ಪರಿಸ್ಥಿತಿಗಳು ಮತ್ತು ಬೀದಿ ದೀಪಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು, ವಿಶೇಷವಾಗಿ ಮಳೆಗಾಲ ಮತ್ತು ರಾತ್ರಿಯ ಪ್ರಯಾಣದ ಸಮಯದಲ್ಲಿ ಸ್ಥಳೀಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ
ಎಂದು ಶಾಸಕ ಸೇಠ್ ನಾಗರಿಕರಿಗೆ ಭರವಸೆ ನೀಡಿದರು. ಪ್ರತಿ ಕುಟುಂಬದ ಸುರಕ್ಷತೆ, ಅನುಕೂಲತೆ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಸರಿಯಾದ ರಸ್ತೆಗಳು, ದಕ್ಷ ಒಳಚರಂಡಿ ವ್ಯವಸ್ಥೆಗಳು ಮತ್ತು ಸಾಕಷ್ಟು ಬೀದಿ ದೀಪಗಳು ಅತ್ಯಗತ್ಯ ಇದೆ
ಅಭಿವೃದ್ಧಿ ಕೆಲಸಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಸಾರ್ವಜನಿಕರ ಯಾವುದೇ ರೀತಿಯ ಅನಾನುಕೂಲ ವಾದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಇದೇ ಸಂದರ್ಭದಲ್ಲಿ ಶಾಸಕರು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು .
ಸ್ಥಳೀಯರು ಶಾಸಕ ಜನರ ಜೊತೆಗೆ ನೇರಸಂಪರ್ಕ ದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸ್ಥಳದಲ್ಲೇ ಸಿಗುವ ಹಾಗಾಗಿದೆ ಶಾಸಕರು ಪ್ರತಿಯೊಬ್ಬ ನಾಗರಿಕರ ಪ್ರೀತಿಯ ಪಾತ್ರರಾಗಿದ್ದಾರೆ ಎಂದು ಸ್ಥಳೀಯರು ಶಾಸಕರ ಕಾರ್ಯವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದರು


Spread the love

About Laxminews 24x7

Check Also

ರಾಜ್ಯದಲ್ಲಿ ಬರ – 177 ತಾಲೂಕುಗಳಲ್ಲಿ 46,324 ಕೋಟಿ ಬೆಳೆ ನಷ್ಟ , 7,142 ಕೋಟಿ ನೆರವಿಗೆ ಮನವಿ

Spread the loveಬೆಂಗಳೂರು: ರಾಜ್ಯದ 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನ ಬರಪೀಡಿತ  ಎಂದು ಘೋಷಿಸಲಾಗಿದ್ದು, ಬರ ಪರಿಸ್ಥಿತಿ ಹಿನ್ನೆಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ