Breaking News
Home / ಜಿಲ್ಲೆ / ಗದಗ / ಕೊರೊನಾ ಕರ್ಫ್ಯೂ ನಡುವೆ ಗದಗನಲ್ಲಿ 50 ಜೋಡಿ ಸರಳ ವಿವಾಹ………….

ಕೊರೊನಾ ಕರ್ಫ್ಯೂ ನಡುವೆ ಗದಗನಲ್ಲಿ 50 ಜೋಡಿ ಸರಳ ವಿವಾಹ………….

Spread the love

ಗದಗ: ಕೊರೊನಾ ಲಾಕ್‍ಡೌನ್ ಮಧ್ಯೆ ಗದಗನಲ್ಲಿ ಇಂದು ಸುಮಾರು 50 ಜೋಡಿಗಳು ವಿವಾಹ ಮಾಡಿಕೊಂಡಿದ್ದು, ಸರಳ ವಿವಾಹದಲ್ಲಿ ಪೊಲೀಸರು ಸಹ ಭಾಗವಹಿಸಿ ಹಾರೈಸಿದ್ದಾರೆ.

ಒಂದೆಡೆ ಲಾಕ್‍ಡೌನ್ ಕರ್ಫ್ಯೂ, ಮತ್ತೊಂದೆಡೆ ಸಾಲು ಸಾಲು ವಿವಾಹಗಳು ನಡೆಯುತ್ತಿವೆ. ಶುಭ ಭಾನುವಾರ ಇರುವುದರಿಂದ ಜಿಲ್ಲೆಯಲ್ಲಿ ಇಂದು ಸುಮಾರು 50 ಜೋಡಿ ಸರಳ ವಿವಾಹ ನಡೆದಿವೆ. ವಿವಾಹ ನಡೆಯುವ ಹಳ್ಳಿ ಹಳ್ಳಿಗಳಲ್ಲಿ ಪೊಲೀಸರೇ ಮುಂದೆ ನಿಂತು ಸರಳವಾಗಿ ನಡೆಯಲು ಸಹಕಾರ ನೀಡಿದ್ದಾರೆ.

ನಗರ ಹಾಗೂ ತಾಲೂಕಿನ ಹೊಂಬಳ, ಹುಲಕೋಟಿ, ಕುರ್ತಕೋಟಿ, ಬೆಳಹೊಡ, ಚಿಕ್ಕ ಹಂದಿಗೋಳ, ಕದಡಿ, ಬಳಗಾನೂರ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಜೋಡಿಗಳು ಕೊರೊನಾದ ಲಾಕ್‍ಡೌನ್ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟಿವೆ. ಗ್ರಾಮೀಣ ಭಾಗದಲ್ಲಿ ನಡೆದ ಮದುವೆಗೆ ಗದಗ ಗ್ರಾಮೀಣ ಪಿ.ಎಸ್ ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಪೊಲೀಸ್ ಸಿಬ್ಬಂದಿ ಸಮ್ಮುಖದಲ್ಲಿ ಮದುವೆ ನಡೆದವು.

ಸರ್ಕಾರದ ನಿಯಮಗಳನ್ನು ಪಾಲಿಸಿ, ಕಡಿಮೆ ಜನಸಂಖ್ಯೆ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಧರಿಸಿ ಸಪ್ತದಿ ತುಳಿದರು. ವಧು-ವರರ ಸಂಬಂಧಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಂಡು ಅಕ್ಷತೆ ಹಾಕಿ ಆಶಿರ್ವಧಿಸಿದರು. ಕೊರೊನಾ ಅಟ್ಟಹಾಸಕ್ಕೆ ಮದುವೆ ಸಂಭ್ರಮಗಳು ಕಳೆಗುಂದಿವೆ. ಜೊತೆಗೆ ಆಡಂಬರಕ್ಕೂ ಕಡಿವಾಣ ಬೀಳುತ್ತಿದೆ.


Spread the love

About Laxminews 24x7

Check Also

ಗದಗ ಬಿಜೆಪಿ ಸಮಾವೇಶ , ಕೂಲ್‌ ಡ್ರಿಂಕ್ಸ್‌ ತಂದವ ಕಕ್ಕಾಬಿಕ್ಕಿ : ಫ್ರೀ.. ಫ್ರೀ..ಎಂದು ಮುಗಿಬಿದ್ದ ಜನ, ವ್ಯಾಪಾರಿ ಕಣ್ಣೀರು

Spread the love ಗದಗ: ಲಕ್ಷ್ಮೇಶ್ವರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿ ಜನರು ಬೇಸಿಗೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ