Breaking News

ಹುಕ್ಕೇರಿ ಕರವೇ ಕಾರ್ಯಕರ್ತರಿಂದ. ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆಗೆ ಅರಿವು

Spread the love

ಹುಕ್ಕೇರಿ ಕರವೇ ಕಾರ್ಯಕರ್ತರಿಂದ. ಕನ್ನಡ ನಾಮ ಫಲಕ ಕಡ್ಡಾಯ ಅಳವಡಿಕೆಗೆ ಅರಿವು ಮೂಡಿಸಿದ ರಕ್ಷಿ ಗುಡ್ ಶೇಫೆರ್ಡ ಇಂಗ್ಲಿಷ್ ಮಾಧ್ಯಮ ಶಾಲೆಗೆ.
ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ಘಟಕದಿಂದ ಇಂದು ಹುಕ್ಕೇರಿ ಪಟ್ಟಣದ ಸಮೀಪದಲ್ಲಿರುವ ಗುಡ್ ಶೇಫೆರ್ಡ ಇಂಗ್ಲಿಷ್ ಮಾಧ್ಯಮ ರಕ್ಷಿ (CBSC) ಶಾಲೆಗೆ ಭೇಟಿ ನೀಡಿ ಪ್ರವೇಶ ದ್ವಾರಕ್ಕೆ ದೊಡ್ಡದಾಗಿ ಇಂಗ್ಲಿಷ್ ನಲ್ಲಿ ಶಾಲೆಯ ಹೆಸರನ್ನು ಹಾಕಿದ್ದನ್ನು ಖಂಡಿಸಿ ತಕರಾರು ಮಾಡಿ ಕನ್ನಡದಲ್ಲಿ 60% ದೊಡ್ಡದಾಗಿ ಕನ್ನಡ ನಾಮಫಲಕವನ್ನು ಹಾಕಬೇಕು ಎಂದು ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು. ಹಾಗೂ ನೂತನವಾಗಿ ಅದೇ ರಸ್ತೆಯ ಬದಿಯಲ್ಲಿ ಹೋಟೆಲ್ ಮಾಲೀಕನು ದೊಡ್ಡದಾಗಿ ಇಂಗ್ಲಿಷ್ ನಲ್ಲಿ ಉಡುಪಿ ಹೋಟೆಲ ಎಂದು ಬರೆದಿದ್ದನ್ನು ಖಂಡಿಸಿ ಹೋಟೆಲ್ ಮಾಲೀಕನಿಗೆ ಕನ್ನಡದಲ್ಲಿ ಹೆಸರನ್ನು ಬರೆಯುವಂತೆ ಒತ್ತಾಯಿಸಿ 4 ದಿನಗಳು ಕಾಲ ಅವಕಾಶವನ್ನು ನೀಡಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಗುಡ್ ಶೇಫೆರ್ಡ ಇಂಗ್ಲಿಷ್ ಮಾಧ್ಯಮ ರಕ್ಷಿ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಹೋಟೆಲ್ ಮಾಲೀಕರು ಕನ್ನಡದಲ್ಲಿ ನಾಮಫಲಕವನ್ನು ಹಾಕುತ್ತೇವೆ ಎಂದು ಭರವಸೆಯನ್ನು
ಕರ್ನಾಟಕ ರಕ್ಷಣಾ ವೇದಿಕೆ ಹುಕ್ಕೇರಿ ಘಟಕದವರಿಗೆ ಮಾಡಿದರು.
ಈ ಸಮಯದಲ್ಲಿ ಹುಕ್ಕೇರಿ ನಗರ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ