Breaking News

ಬೆಳಗಾವಿಯಲ್ಲಿ ಪಟಾಕಿ ಸಿಡಿದು ಮನೆಗೆ ಬೆಂಕಿ: ಡೆಕೋರೇಷನ್ ವಸ್ತುಗಳು ಸುಟ್ಟು ಭಸ್ಮ

Spread the love

ಬೆಳಗಾವಿ: ಪಟಾಕಿ ಸಿಡಿದ ಪರಿಣಾಮ ಮನೆಯೊಂದಕ್ಕೆ ಬೆಂಕಿ ತಗುಲಿ, ಮನೆಯಲ್ಲಿದ್ದ ಅಲಂಕಾರಿಕ ವಸ್ತುಗಳು ಸುಟ್ಟು ಕರಕಲಾದ ಘಟನೆ ರಾಯಬಾಗ ಪಟ್ಟಣದ ದತ್ತ ಮಂದಿರದ ಸಮೀಪ ಸಂಭವಿಸಿದೆ.

ಪಟಾಕಿ ಸಿಡಿದ ಬೆನ್ನಲ್ಲೇ ಸಮೀಪದ ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ವ್ಯಾಪಿಸಿದೆ. ಮನೆಯಲ್ಲಿದ್ದ ಡೆಕೋರೇಷನ್‌ಗೆ ಬಳಸುವ ವಿವಿಧ ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯ ತೀವ್ರತೆಗೆ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮನೆಗೂ ಹಾನಿಯಾಗಿದೆ.

ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದ ದೃಶ್ಯದಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳಲು ಪಟಾಕಿ ಸಿಡಿದಿರುವುದೇ ಕಾರಣ ಎನ್ನಲಾಗಿದ್ದು, ಘಟನೆಯಿಂದ ಉಂಟಾಗಿರುವ ಒಟ್ಟು ನಷ್ಟದ ಪ್ರಮಾಣ ಹಾಗೂ ಇತರೆ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.


Spread the love

About Laxminews 24x7

Check Also

ಎಥೆನಾಲ್ ವಿಚಾರದಲ್ಲಿ ದೊಡ್ಡ ಫ್ರಾಡ್ ನಡೆದಿದೆ: ಸಚಿವ ಸಂತೋಷ್ ಲಾಡ್

Spread the loveಬೆಂಗಳೂರು: ಎಥೆನಾಲ್‌ ವಿಚಾರದಲ್ಲಿ ದೊಡ್ಡ ಫ್ರಾಡ್‌ ನಡೆದಿದೆ ಎಂದು ಸಚಿವ ಸಂತೋಷ್‌ ಲಾಡ್‌ ಗಂಭೀರ ಆರೋಪ ಮಾಡಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ