Breaking News

ಖಾಲಿ ಲೇಔಟ್‌ಗಳಲ್ಲಿ ದುಶ್ಚಟ – ಮಹಿಳೆಯರಿಗೆ ಕಿರಿಕಿರಿ: ಯುವಕರಿಗೆ ಪೊಲೀಸರ ಕಠಿಣ ಎಚ್ಚರಿಕೆ

Spread the love

ವಿಜಯಪುರ ನಗರದ ಖಾಲಿ ಲೇಔಟ್‌ಗಳಲ್ಲಿ ಸಂಜೆಯಾದೊಡನೆ ದುಶ್ಚಟಗಳಲ್ಲಿ ತೊಡಗಿಕೊಂಡು ಮಹಿಳೆಯರಿಗೆ ಕಿರಿಕಿರಿ ನೀಡುತ್ತಿದ್ದ ಯುವಕರ ವಿರುದ್ಧ ಗಾಂಧಿಚೌಕ್ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ನಗರದ ವಿವಿಧ ಲೇಔಟ್‌ಗಳಲ್ಲಿ ಪ್ರತಿದಿನ ಸಂಜೆ ವೇಳೆಯಲ್ಲಿ ಕೆಲ ಯುವಕರು ಗುಂಪುಗೂಡಿ ಸಿಗರೇಟ್ ಹಾಗೂ ಮದ್ಯ ಸೇವನೆ ಮಾಡುವುದು, ವಾಕಿಂಗ್‌ಗೆ ಬರುವ ಮಹಿಳೆಯರಿಗೆ ಕಿರಿಕಿರಿ ನೀಡುವುದು ಸೇರಿದಂತೆ ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ, ದುಶ್ಚಟಗಳಲ್ಲಿ ತೊಡಗಿದ್ದ ಕೆಲವರನ್ನು ಠಾಣೆಗೆ ಕರೆಸಿ ಕಠಿಣ ಎಚ್ಚರಿಕೆ ನೀಡಿದರು.
ಇನ್ನೊಮ್ಮೆ ಇಂತಹ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ನಗರ ಡಿವೈಎಸ್ಪಿ ನಾಗರಾಜ ಡಿ ಹಾಗೂ ಸಿಪಿಐ ಪ್ರದೀಪ ತಳಕೇರಿ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ