Breaking News

ಗದಗದ ಮುಕ್ತಿಮಂದಿರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ

Spread the love

ಗದಗ: ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್  ಮುಂದಿನ ಸಿಎಂ ಆಗುತ್ತಾರೆ ಎಂಬ ಚರ್ಚೆ ಹಲವು ದಿನಗಳಿಂದ ನಡೆಯುತ್ತಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ಬಂದ ಕಂಟಕ ದೂರ ಮಾಡಲು ಡಿಕೆಶಿ ತಮ್ಮ ಆರಾಧ್ಯ ದೈವ ಲಕ್ಷ್ಮೇಶ್ವರದ   ಮುಕ್ತಿಮಂದಿರ ಮಠ ಲಿಂಗೈಕ್ಯ ವೀರಗಂಗಾಧರ್ ಜಗದ್ಗುರುಗಳಿಗೆ (ಅಜ್ಜಯ್ಯ) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಠದಲ್ಲಿ ಯಾರಿಗೂ ಅವಕಾಶ ನೀಡದೇ ಒಂದು ಗಂಟೆಗಳ ಕಾಲ ಜಪ-ತಪ ಮಾಡುವ ಮೂಲಕ ಪ್ರಾರ್ಥನೆ ಮಾಡಿದ್ದಾರೆ.

ಜಗದ್ಗುರಗಳ ಗದ್ದುಗೆಗೆ ವಿಶೇಷ ಅಭಿಷೇಕ ಮಾಡಿ, ಜಪ ತಪ ನೆರವೇರಿಸಿದರು. ಬಳಿಕ ಅಷ್ಟೋತ್ತರ, ಬಿಲ್ವಪತ್ರೆ ಅರ್ಪಣೆ ನಂತರ ಮಹಾ ಮಂಗಳಾರತಿ ನೆರವೇರಿಸಿದರು. ಈ ವೇಳೆ ನನಗೆ ಸಿಗಬೇಕಾದ ಸ್ಥಾನಮಾನ ಸಿಗಲಿ ಎಂದು ಸಿಎಂ ಸ್ಥಾನದ ಬಗ್ಗೆ ಸಂಕಲ್ಪ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಆಗುವ ಬಗ್ಗೆ ಭವಿಷ್ಯದ ಬಗ್ಗೆ ನೋಣವಿನಕೆರೆ ಶ್ರೀಗಳ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ನಾನು ಇಲ್ಲಿ ಕುಳಿತಿದ್ದೇನೆ. ಆ ಶಕ್ತಿ ನನಗೆ ಗೊತ್ತಿದೆ. ನಾನು ಏನೂ ಮಾತಾಡೋದಿಲ್ಲ. ಕಾಲ ಉತ್ತರ ಕೊಡುತ್ತದೆ. ಇದು ವಿಶೇಷವಾದ ಪವಿತ್ರವಾದ ಸ್ಥಳವಾಗಿದೆ. ಇದು ವೀರಗಂಗಾಧರ ಶ್ರೀಗಳ ಲಿಂಗೈಕ್ಯ ಸ್ಥಳವಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದರು.

ಡಿಕೆಶಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರದ ವೇಳೆ ಲಿಂಗೈಕ್ಯ ಬಾಳೆಹೊನ್ನೂರು ರಂಬಾಪುರಿ ಶ್ರೀ ವೀರಗಂಗಾಧರ ಶಿವಾಚಾರ್ಯ ಜಗದ್ಗುರು (ಅಜ್ಜಯ್ಯ) ಅವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಡಿಕೆಶಿ ವೀರಗಂಗಾಧರ್ ಶಿವಾಚಾರ್ಯ ಜಗದ್ಗುರುಗಳ ಪರಮ ಭಕ್ತರಾಗಿದ್ದಾರೆ. ಕಂಟಕ, ಸಂಕಷ್ಟ ಬಂದಾಗ ಅವರಿಗೆ ನೆನಪಾಗೋದು, ಮುಕ್ತಿಮಂದಿರ ವೀರಗಂಗಾಧರ ಶಿವಾಚಾರ್ಯಮಹಾಸ್ವಾಮಿಗಳು. ಹೀಗಾಗಿ ಇಂದು ಸಹ ಮುಕ್ತಿಮಂದಿರಕ್ಕೆ ದಿಢೀರ್ ಭೇಟಿ ನೀಡಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ‌

ಮುಕ್ತಿಮಂದಿರದ ವಿಮಲರೇಣುಕಾ ಶಿವಾಚಾರ್ಯರು, ಅರ್ಚಕರು ಹಾಗೂ ಕೆಲವು ಮುಖಂಡರು ಮಾತ್ರ ಈ ಪೂಜೆಯಲ್ಲಿ ಪಾಲ್ಗೊಂಡಿದ್ದರು. ತ್ರೀಕೋಟಿ ಲಿಂಗ ಸ್ಥಾಪನೆ ಸಂಕಲ್ಪ ಮಾಡಿದ್ದರು. ಭಕ್ತರು ಇಷ್ಟಾಶಕ್ತಿ ಸಾರ ಲಿಂಗ ಪ್ರತಿಷ್ಠಾನ ಮಾಡಿದ್ದಾರೆ. ನಾನು ಕೂಡ ಜವಾಬ್ದಾರಿ ತಗೆದುಕೊಂಡಿದ್ದೇನೆ. ಸರ್ಕಾರದ ವತಿಯಿಂದ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದರು. ಅವರ ಪುತ್ರ ಆಕಾಶ್‌ ಸಹ ಈ ವೇಳೆ ಜೊತೆಯಲ್ಲಿದ್ದರು.


Spread the love

About Laxminews 24x7

Check Also

ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ

Spread the love ಲಿಂಗಾಯತ ಸಂಘಟನೆ ವತಿಯಿಂದ ವಚನ ಸಂಗೀತ ಕಾರ್ಯಕ್ರಮ – ಭಾವನೆಗಳಿಗೆ ಜೀವ ತುಂಬುವ ಶಕ್ತಿ ಸಂಗೀತಕ್ಕಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ