Breaking News

ಎತ್ತಿನಗಾಡಿ ಚಲೋ ಆಯ್ತು, ಸೈಕಲ್ ಜಾಥಾ ಆಯ್ತು, ಇದೀಗ ಕಾಂಗ್ರೆಸ್​ನಿಂದ ಟಾಂಗಾ ಜಾಥಾ!

Spread the love

ಬೆಂಗಳೂರು: ಬೆಲೆ ಏರಿಕೆಯನ್ನೇ ಅಸ್ತ್ರವಾಗಿ ಬಳಸಿಕೊಂಡ ಕೈ ನಾಯಕರು, ಮೇಲಿಂದ ಮೇಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಎತ್ತಿನಗಾಡಿ ಚಲೋ, ಸೈಕಲ್ ಜಾಥಾ ಬಳಿಕ, ಇದೀಗ ಕಾಂಗ್ರೆಸ್​ನಿಂದ ಟಾಂಗಾ ಜಾಥಾ ನಡೆಯುತ್ತಿದೆ. ಮೂರನೇ ಬಾರಿ ವಿಧಾನಸೌಧಕ್ಕೆ ಟಾಂಗದಲ್ಲಿ ಬರುವ ಮೂಲಕ ವಿನೂತನ ಹೋರಾಟಕ್ಕೆ ಕೈ ನಾಯಕರು ಮುಂದಾಗಿದ್ದಾರೆ. ವಿಪಕ್ಷ ನಾಯಕ‌ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಜಾಥಾ ನಡೆಯುತ್ತಿದೆ.

ಟಾಂಗ ಜಾಥಾ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೆಪಿಸಿಸಿ ಕಛೇರಿ ಬಳಿ ಟಾಂಗಾಗಳು ಬಂದಿದ್ದು, ಕೆಪಿಸಿಸಿ ಕಚೇರಿಯಿಂದ ಟಾಂಗಾಗಳ ಮೂಲಕ‌ ಕೈ ನಾಯಕರು ವಿಧಾನಸೌಧ ತಲುಪಲಿದ್ದಾರೆ. ಕಾಂಗ್ರೆಸ್ ಜಾಥಾದಲ್ಲಿ 50ಕ್ಕೂ ಹೆಚ್ಚು ಟಾಂಗಾಗಳು ಭಾಗಿಯಾಗಲಿವೆ.

ಕೆಪಿಸಿಸಿ ಮುಂಬಾಗ ಸ್ಲೊ ಮೂವಿಂಗ್ ಟ್ರಾಫಿಕ್
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ಹಿನ್ನೆಲೆ ಕೆಪಿಸಿಸಿ ಬಳಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗಮಿಸಿದ್ದಾರೆ. ಇನ್ನು ಪ್ರತಿಭಟನೆಯಿಂದಾಗಿ ಕೆಪಿಸಿಸಿ ಮುಂಬಾಗ ಸ್ಲೊ ಮೂವಿಂಗ್ ಟ್ರಾಫಿಕ್ ಸೃಷ್ಟಿಯಾಗಿದೆ. ಸಂಚಾರಿ ಪೊಲೀಸರಿಂದ ಟ್ರಾಫಿಕ್ ಸಮಸ್ಯೆ ಸರಿಪಡಿಸುವ ಕಾರ್ಯ ನಡೆಯುತ್ತಿದೆ.


Spread the love

About Laxminews 24x7

Check Also

ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ.

Spread the love ರಮೇಶ್ ಜಾರಕಿಹೊಳಿ ಅವರಿಂದ ಇಂಗ್ಲೆಂಡ್‌ನಲ್ಲಿರುವ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಭೇಟಿ. ವಿದೇಶ ಪ್ರವಾಸದಲ್ಲಿರುವ ಜನನಾಯಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ