Breaking News
Home / ಜಿಲ್ಲೆ / ದೆಹಲಿ ಫಲಿತಾಂಶ ಪಕ್ಷದ ಮೇಲೆ ಪರಿಣಾಮ ಬೀರಿಲ್ಲ: ಗೋವಿಂದ ಕಾರಜೋಳ

ದೆಹಲಿ ಫಲಿತಾಂಶ ಪಕ್ಷದ ಮೇಲೆ ಪರಿಣಾಮ ಬೀರಿಲ್ಲ: ಗೋವಿಂದ ಕಾರಜೋಳ

Spread the love

ಬಾಗಲಕೋಟೆ: ಮೀಸಲಾತಿ ವ್ಯವಸ್ಥೆ ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಅಸ್ಪೃಶ್ಯತೆಯಿಂದ ಬಳಲುವವರನ್ನು ಮೇಲೆತ್ತಲು ತೆಗೆದುಕೊಂಡ ವ್ಯವಸ್ಥೆ ಆಗಿದೆ ಅಂತ ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಮೀಸಲಾತಿ ಬಗ್ಗೆ ಕೋರ್ಟ್ ತೀರ್ಪು ವಿಚಾರವಾಗಿ ಬಾಗಲಕೋಟೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ, 2012ರಲ್ಲಿ ಉತ್ತರಾಖಂಡ್‍ನಲ್ಲಿ ತೆಗೆದುಕೊಂಡ ನಿರ್ಧಾರ ಕೋರ್ಟಿಗೆ ಹೋಯ್ತು. ಅಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ತಪ್ಪಿನಿಂದ ಇಂದು ಜಡ್ಜ್ ಮೆಂಟ್ ಬಂದಿದೆ ಎಂದು ತಿಳಿಸಿದ್ರು.

ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ಮೀಸಲಾತಿಗೆ ಧಕ್ಕೆ ತರದಂತೆ ಕಾಪಾಡಿಕೊಂಡು ಹೋಗುತ್ತೇವೆ. ಎಲ್ಲಿಯವರೆಗೆ ಅಸ್ಪೃಶ್ಯತೆ, ಅಸಮಾನತೆ ಇರುತ್ತೆ, ಅಲ್ಲಿಯವರೆಗೆ ಅಂತವರನ್ನು ಮೇಲೆತ್ತಲು ಸಂವಿಧಾನದ ಆಶಯಕ್ಕನುಗುಣವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಹಾಗೂ ಮೋದಿ ಗ್ರಾಫ್ ಇಳಿಯುತ್ತಿದೆ ಎಂಬ ಕಾಂಗ್ರೆಸ್ಸಿಗರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮೋದಿಯವರ ಗ್ರಾಫ್ ಇಳಿಯಲಿಕ್ಕೆ ಸಾಧ್ಯವಿಲ್ಲ. ದೇಶದಲ್ಲಿ ಇನ್ನೂ 20 ವರ್ಷ ಮೋದಿ ಗ್ರಾಫ್ ಇರುತ್ತೆ. ಯಾವ ಕಾರಣಕ್ಕೂ ಮೋದಿಯವರ ಗ್ರಾಫ್ ಇಳಿಯೋಕೆ ಸಾಧ್ಯವಿಲ್ಲ. ದೆಹಲಿ ಒಂದು ಊರಿಗೆ ಸೀಮಿತವಾದ ಚುನಾವಣೆ. ಅದು ಆಡಳಿತದಲ್ಲಿ ಜನಪ್ರಿಯ ಕೇವಲ ಘೋಷಣೆ ಮಾಡಿದರು. ಅದಕ್ಕೆ ಆಕರ್ಷಿತರಾಗಿ ಜನ ಮತ ಕೊಟ್ಟಿದ್ದಾರೆ. ಮತ ಕೊಟ್ಟ ಜನರಿಗೆ ಮುಂದೆ ನಿರಾಶೆಯಾಗಲಿದೆ ಎಂದರು.

ನಾವು ಯಾವುದೇ ರಾಜ್ಯದಲ್ಲಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಬೇಕು. ದುಡಿಯುವ ಕೈಗಳಿಗೆ ಅನುಕೂಲಕರ ಯೋಜನೆ ತರಬೇಕು. ಅದು ಬಿಟ್ಟು ನೀರಿಗೆ, ಬಸ್ಸಿಗೆ ಕರೆಂಟ್ ಗೆ ಬಿಲ್ ತೆಗೆದುಕೊಳ್ಳೋದಿಲ್ಲ. ಇವು ಜನಪ್ರಿಯ ಯೋಜನೆಗಳಾಗ್ತವೆ. ನಾವು ಜನರಿಂದ ಸಂಗ್ರಹ ಮಾಡಿದ ತೆರಿಗೆ ಹಣ ದೇಶಕ್ಕೆ ಆಸ್ತಿ ಆಗಬೇಕು ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.

ಈಗ ಚುನಾವಣೆ ಸಂದರ್ಭದಲ್ಲಿ ಕೆಲವರು ಹಣ ಕೊಟ್ಟು ಗೆದ್ದು ಬರುತ್ತಿರುತ್ತಾರೆ. ದೆಹಲಿಯಲ್ಲಿನ ಯೋಜನೆಗಳು ಅಸೆ ರೀತಿ ಆಗುತ್ತವೆ. ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವ ವಿಚಾರ. ನಾವು ಅಧಿಕಾರ ಎಲ್ಲೂ ಕಳೆದುಕೊಳ್ಳುತ್ತಿಲ್ಲ. ದೆಹಲಿ ನಮ್ಮ ಕೈಯಲ್ಲಿರಲಿಲ್ಲ. ದೆಹಲಿ ಆಮ್‍ಆದ್ಮಿ ಕೈಯಲ್ಲಿತ್ತು ಅವರು ಉಳಿಸಿಕೊಂಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ವೋಟ್ ಬ್ಯಾಂಕ್ ಇಂಪ್ರೂವ್ ಆಗಿದೆ ಎಂದು ಸಮರ್ಥಿಸಿಕೊಂಡರು


Spread the love

About Laxminews 24x7

Check Also

ವಿಧಾನಪರಿಷತ್ ಸದಸ್ಯರಾಗಿ ಒಂದು ವರ್ಷ ಪೂರೈಕೆ- ಸಾಧನೆ ಪಟ್ಟಿ ಬಿಡುಗಡೆ ಮಾಡಿದ ಲಖನ್ ಜಾರಕಿಹೋಳಿ

Spread the love    ಗೋಕಾಕ್- ಲಖನ್ ಜಾರಕಿಹೋಳಿ ಅವರು ವಿಧಾನಪರಿಷತ್ ಸದಸ್ಯರಾಗಿ ಒಂದು ವರ್ಷದ ಅವಧಿ ಪೂರೈಸಿದ್ದಾರೆ. ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ