Breaking News
Home / ಜಿಲ್ಲೆ / ಧಾರವಾಡ / ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ವರ್ಗಾವಣೆ,ನಿತೇಶ್ ಪಾಟೀಲ್ ಅವರು ಇವತ್ತು ಅಧಿಕಾರ

ಕಾರ್ಯನಿರ್ವಹಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್ವರ್ಗಾವಣೆ,ನಿತೇಶ್ ಪಾಟೀಲ್ ಅವರು ಇವತ್ತು ಅಧಿಕಾರ

Spread the love

ಧಾರವಾಡ: ಕೊರೊನಾ ಸಂದರ್ಭದಲ್ಲಿ ಧಾರವಾಡ ಜಿಲ್ಲಾಧಿಕಾರಿಗಳ ವರ್ಗಾವಣೆಯಾಗಿದೆ. ದೀಪಾ ಚೋಳನ್ ಅವರು ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲಾಧಿಕಾರಿಗಳಾಗಿದ್ದರು. ರಾಜ್ಯ ಸರ್ಕಾರ ದೀಪಾ ಚೋಳನ್ ಅವರನ್ನು ಸರ್ವ ಶಿಕ್ಷಣ ಅಭಿಯಾದ ಯೋಜನಾ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದೆ.

ಧಾರವಾಡ ನೂತನ ಜಿಲ್ಲಾಧಿಕಾರಿಗಳಾಗಿ ನಿತೇಶ್ ಪಾಟೀಲ್ ಅವರು ಇವತ್ತು ಅಧಿಕಾರ ವಹಿಸಿಕೊಂಡರು. ಇತ್ತ ಕೊರೊನಾ ದಿನೇ ದಿನೇ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಸೋಂಕು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನು ನಾವು ತಡೆಯುವ ಕೆಲಸ ಮಾಡಲಿದ್ದೇವೆ ಎಂದು ನೂತನ ಜಿಲ್ಲಾಧಿಕಾರಿ ಹೇಳಿದರು.

ಧಾರವಾಡ ಜಿಲ್ಲೆಯ ಅಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಇಲ್ಲಿಯ ಜನರು ಕೂಡಾ ಅಧಿಕಾರಿಗಳ ಕಾರ್ಯಕ್ಕೆ ಸಹಕಾರಿಯಾಗಿದ್ದು, ಅಧಿಕಾರಿಗಳ ಜೊತೆ ಸಭೆ ಮಾಡಿ ಮಾಹಿತಿ ಪಡೆದು ಕೊರೊನಾ ತಡೆಯುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಮತ್ತೊಂದು ಕಡೆ ದೀಪಾ ಚೋಳನ್ ಅವರನ್ನ ವರ್ಗಾವಣೆ ಮಾಡಿದ್ದಕ್ಕೆ ಧಾರವಾಡ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ ಘಟನೆ ನಡೆಯಿತು.ಧಾರವಾಡ, ಪಬ್ಲಿಕ್ ಟಿವಿ, ಕೊರೊನಾ, ದೀಪಾ ಚೋಳನ್, ನಿತೇಶ ಪಾಟೀಲ


Spread the love

About Laxminews 24x7

Check Also

ಉತ್ತರ ಕನ್ನಡದ ಮಹಿಳೆಯಿಂದ ಅಂಗಾಂಗ ದಾನ; ಧಾರವಾಡದಿಂದ ಬೆಂಗಳೂರಿಗೆ ಮಹಿಳೆಯ ಲಿವರ್ ಏರ್​ಲಿಫ್ಟ್

Spread the loveಧಾರವಾಡ: ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಲಿವರ್​ನ್ನು ಏರ್‌ಲಿಫ್ಟ್ ಧಾರವಾಡದ ಎಸ್​ಡಿಎಂ ಆಸ್ಪತ್ರೆಯಿಂದ ಬೆಂಗಳೂರಿಗೆ ಮೂಲಕ ರವಾನಿಸಲಾಗಿದೆ. ಲೀವರ್​ನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ