Breaking News

ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಹಣ ದೋಚಿದ ಸೈಬರ್‌ ವಂಚಕರು!

Spread the love

ಚಿಕ್ಕಮಗಳೂರು: ಚಿನ್ನ ಅಡವಿಟ್ಟು ಪಡೆದ ಸಾಲ ಬ್ಯಾಂಕ್‌ ಖಾತೆಗೆ ಜಮೆಯಾದ ಒಂದೇ ಕ್ಷಣದಲ್ಲಿ ಸೈಬರ್‌ ವಂಚಕರು ಹಣ ಎಗರಿಸಿದ ಪ್ರಕರಣ ಚಿಕ್ಕಮಗಳೂರಲ್ಲಿ ನಡೆದಿದೆ.

ನಗರದ ವಕೀಲರೊಬ್ಬರು ಬ್ಯಾಂಕ್‌ನಲ್ಲಿ ಚಿನ್ನ ಅಡವಿಟ್ಟು 4.14 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಪಡೆದು ಬ್ಯಾಂಕ್‌ನಿಂದ ಹೊರಬರುವ ಮುನ್ನವೇ ಅವರ ಖಾತೆಯಿಂದ 99,584 ರೂ. ಹಣವನ್ನು ಸೈಬರ್‌ ವಂಚಕರು ಎಗರಿಸಿದ್ದಾರೆ. ಓಟಿಪಿ ಬಂದಿಲ್ಲ, ಎಪಿಕೆ ಲಿಂಕ್ ಕೂಡ ಬಂದಿಲ್ಲ ಹಣ ಮಾತ್ರ ಕಳ್ಳರ ಪಾಲಾಗಿದೆ.

ಅಮೆಜಾನ್ ಪೇ ಮೂಲಕ ವಂಚಕರು ಹಣ ಎಗರಿಸಿದ್ದಾರೆ. ಹಣ ಕಳೆದುಕೊಂಡ ವಕೀಲ ಚಿಕ್ಕಮಗಳೂರು ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.  


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ