Breaking News
Home / ಜಿಲ್ಲೆ / ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್:

ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್:

Spread the love

ನಿಪ್ಪಾಣಿ – ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್ ಕೈಗೊಳ್ಳಲಾಗಿದೆ ಎಂದು ಸಿ.ಪಿ.ಐ ಸಂತೋಷ ಸತ್ಯನಾಯಿಕ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ೧೪೪ ಕಲಂ ಜಾರಿಯಲ್ಲಿದ್ದು ನಗರದಲ್ಲಿ ಅನಗತ್ಯವಾಗಿ ಓಡಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಸರಕಾರದ ಆದೇಶವನ್ನು ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಸಾರ್ವಜನಿಕರು ಇದಕ್ಕೆ ಸ್ಪಂದಿಸಿದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ‌ ಎಂದು ತಿಳಿಸಿದರು.

ನಗರದಲ್ಲಿ ಇದುವರೆಗೆ ೧೮ ಜನರು ಹೋಂಮ್ ಕ್ವಾರಂಟೈನ್ನಲ್ಲಿ ಇದ್ದು ಅವರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದ್ದು, ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ೧೯ ತಡೆಗಟ್ಟಲು ನಗರದಲ್ಲಿ ಆಟೋ ರಿಕ್ಷಾ ಮೂಲಕ ಧ್ವನಿವರ್ಧಕ ಮತ್ತಿತರ ಪರಿಕರಗಳನ್ನು ಬಳಸಿ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ಸೋಂಕಿನ ಕುರಿತು ಮುಂಜಾಗ್ರತೆವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಕುರಿತು ಸಾರ್ವಜನಿಕರಲ್ಲಿ ಮಾಹಿತಿ ನಿಡಲಾಗುತ್ತಿದೆ.

ನಿಪ್ಪಾಣಿ ನಗರದಲ್ಲಿ ನಗರ ಪೋಲಿಸ್ ಠಾಣೆ ಹಾಗೂ ಬಸವೇಶ್ವರ ಪೋಲಿಸ್ ಠಾಣೆ ವತಿಯಿಂದ ಈಗಾಗಲೇ ೨೪*೭ ನಗರದಲ್ಲಿ ಪೆಟ್ರೋಲಿಂಗ್ ವಾಹನ ಗಸ್ತು ತಿರುಗುತ್ತಿವೆ. ರಾತ್ರಿ ವೇಳೆಯಲ್ಲಿ ನಗರದಲ್ಲಿ ಹೆಚ್ಚಿನ ಅಲರ್ಟ ಘೋಷಿಸಿದ್ದು ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲಿ ಇರಲು ಸೂಚನೆ ನೀಡುತ್ತಿದ್ದೇವೆ. ವಾಯು ವಿಹಾರಕ್ಕಾಗಿ ಮನೆಯಿಂದ ಹೊರ ಬಂದರೆ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಾರ್ವಜನಿಕರ ಅನೂಕುಲಕ್ಕಾಗಿ ದಿನಬಳಕೆಗೆ ಅಗತ್ಯ ವಿರುವ ಹಣ್ಣು ಹಾಗೂ ತರಕಾರಿ ಮತ್ತಿತ್ತರ ವಸ್ತುಗಳನ್ನು ಮಾರಾಟ ಮಾಡಲು ನಗರದಲ್ಲಿ ಈಗಾಗಲೇ ಕೆಲವು ವ್ಯಕ್ತಿ ಗಳನ್ನು ಗುರುತಿಸಿದ್ದು ಅವರಿಗೆ ಮಾರಾಟ ಮಾಡಲು ಬೆಳಿಗ್ಗೆ ೬ ರಿಂದ ೮ ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿಯು ಸಾರ್ವಜನಿಕರು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ನಿಪ್ಪಾಣಿ ನಗರದ ಹೊರವಲಯದಲ್ಲಿ ೨ ಚೆಕ್ ಪೋಸ್ಟ್ ನಿರ್ಮಿಸಿದ್ದು ಒಂದು ನಗರದ ಹೊರವಲಯದಲ್ಲಿರುವ ದೇವಚಂದ ಕಾಲೇಜ ಬಳಿ ಹಾಗೂ ಕೊಗನಳ್ಳಿಯ ರಾಷ್ಟ್ರೀಯ ಹೆದ್ದಾರಿ ೪ ರ ಟೋಲ್ ಗೇಟ್ ಬಳಿಯಲ್ಲಿರುವ ಚೆಕ್ ಪೋಸ್ಟನಲ್ಲಿ ಗ್ರಾಮೀಣ ಪೋಲಿಸ ಠಾಣೆಯ ಸಿಬ್ಬಂದಿಗಳು ೨೪*೭ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಹಾಗೂ ಕರ್ನಾಟಕ ರಾಜ್ಯದಿಂದ ಮಹಾರಾಷ್ಟ್ರ ರಾಜ್ಯಕ್ಕೆ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು ಅತೀ ಅವಶ್ಯಕತೆ ಇರುವಂತಹ ಸೇವೆಗಳಾದ ಅಂಬ್ಯುಲೆನ್ಸ ಸೇವೆ, ಸಾರ್ವಜನಿಕರಿಗೆ ಅವಶ್ಯಕವಿರುವ ಸರಕುಗಳು ಹಾಗೂ ಹಾಲಿನ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ‌‌. ಇದರ ಜೊತೆಗೆ‌ ಸಾರ್ವಜನಿಕರು ಸೂಕ್ತ ಆಸ್ಪತ್ರೆಯ ದಾಖಲೆಗಳನ್ನು ತೊರಿಸಿದ್ದಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿಪ್ಪಾಣಿ ನಗರ ಪೋಲಿಸ್ ಠಾಣೆಯ ಪಿ.ಎಸ್.ಐ ಕುಮಾರ ಹಡಕರ, ಗ್ರಾಮೀಣ ಪೋಲಿಸ್ ಠಾಣೆಯು ಪಿ.ಎಸ್.ಐ ಬಾಳಪ್ಪ ತಳವಾರ, ಬಸವೇಶ್ವರ ಪೋಲಿಸ್ ಠಾಣೆಯ ಪಿ.ಎಸ್.ಐ ಸುಬ್ಬಾಪುರ ಮಠ ಹಾಗೂ ಪೋಲಿಸ್ ಇಲಾಖೆಯ ಸಿಬ್ಬಂದಿಯು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

Spread the loveಸವದತ್ತಿ: ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.   …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ