Breaking News

ಕಾಂಗ್ರೆಸ್​ ಹೈಕಮಾಂಡ್​​ನಿಂದ ಬಿಗ್​ ಶಾಕ್; ಸಿಎಂ ಇಬ್ರಾಹಿಂ ನಿರೀಕ್ಷೆ ನೀರುಪಾಲು..!

Spread the love

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಎಸ್‌.ಆರ್ ಪಾಟೀಲ್‌ ಅವರ ನಿವೃತ್ತಿಯಿಂದ ತೆರವಾದ ಪರಿಷತ್‌ ವಿಪಕ್ಷ ನಾಯಕ ಸ್ಥಾನಕ್ಕೆ, ಬಿ.ಕೆ ಹರಿಪ್ರಸಾದ್‌ ನೇಮಕವಾಗಿದೆ.

ಇದರ ಜತೆಗೆ, ಎಂ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನಕ್ಕೆ ಪ್ರಕಾಶ್‌ ಸಿಂಗ್‌ ರಾಠೋಡ್‌ ಅವರನ್ನು ಆಯ್ಕೆ ಮಾಡಲಾಗಿದೆ. ಕೆ. ಗೋವಿಂದ ರಾಜ್‌ ಅವರನ್ನು ವಿಧಾನ ಪರಿಷತ್‌ನ ಉಪ ನಾಯಕನಾಗಿ ಆಯ್ಕೆ ಮಾಡಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.

ಅಚ್ಚರಿ ಎಂದ್ರೆ, ವಿಧಾನಸಭೆ ಮತ್ತು ಪರಿಷತ್​​ಗೆ ಇಬ್ಬರು ಹಿಂದುಳಿದ ವರ್ಗದ ನಾಯಕರಿಗೆ ವಿಪಕ್ಷ ಸ್ಥಾನ ಕಲ್ಪಿಸಲಾಗಿದೆ. ಇನ್ನು, ಇದೇ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ.ಎಂ.ಇಬ್ರಾಹಿಂ ನಿರೀಕ್ಷೆ ನೀರುಪಾಲಾಗಿದೆ.

 


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ