Breaking News
Home / ಜಿಲ್ಲೆ / ಚಿಕ್ಕ ಬಳ್ಳಾಪುರ / ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

ಕೊರೊನಾದಿಂದ ಮೃತ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನಿಗೆ ಕ್ವಾರಂಟೈನ್

Spread the love

ಚಿಕ್ಕಬಳ್ಳಾಪುರ: ನಗರದಲ್ಲಿ ಕೊರೊನಾಗೆ ಬಲಿಯಾದ ವೃದ್ಧನಿಗೆ ಕ್ಷೌರ ಮಾಡಿದ್ದ ಕ್ಷೌರಿಕನನ್ನೂ ಇದೀಗ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಇದರ ಜೊತೆಗೆ ಈ ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡವರಿಗೆ ಈಗ ಕೊರೊನಾ ಆತಂಕ ಶುರುವಾಗಿದೆ.

ಕಳೆದ 4 ದಿನಗಳ ಹಿಂದೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದರು. ಈಗಾಗಲೇ ವೃದ್ಧನ ಮಗ ಹಾಗೂ ಮನೆಯ ಎದುರಗಡೆಯ ಇಬ್ಬರು ಯುವಕರಿಗೆ ಕೊರೊನಾ ಸೋಂಕಿರುವುದು ದೃಢವಾಗಿದೆ. ಹೀಗಾಗಿ ಇವರ ಬಳಿ ಕ್ಷೌರ ಮಾಡಿಸಿಕೊಂಡವರಿಗೂ ಕೊರೊನಾ ಭೀತಿ ಎದುರಾಗಿದೆ.

ಲಾಕ್‍ಡೌನ್ ಹಿನ್ನೆಲೆ ಏಪ್ರಿಲ್ ತಿಂಗಳ ಅಂತ್ಯದಲ್ಲಿ ವೃದ್ಧನ ಮನೆಗೆ ಹೋಗಿ ಕ್ಷೌರ ಮಾಡಿದ್ದರು. ಇದಾದ ಬಳಿಕ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಕ್ಷೌರಿಕನಿಗೆ ಕೊರೊನಾ ಭೀತಿ ಶುರುವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೃತ ಸೊಂಕಿತನ ಏರಿಯಾದಲ್ಲೇ ಕ್ಷೌರಿಕ ಅಂಗಡಿ ಇಟ್ಟುಕೊಂಡಿರುವ 65 ವರ್ಷದ ವ್ಯಕ್ತಿಯನ್ನು ಇನ್ಸ್ಟಿಟಿಟ್ಯೂಟ್ ಕ್ವಾರಂಟೈನ್ ಮಾಡಲಾಗಿದೆ. ಈತನ ಪತ್ನಿ ಹಾಗೂ ಮಗನನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಈ ಕ್ಷೌರಿಕ ಸಾವನ್ನಪ್ಪಿದ ವೃದ್ಧನಿಗೆ ಕ್ಷೌರ ಮಾಡಿ ಬಂದ ನಂತರ ಸುಮಾರು 50ಕ್ಕೂ ಹೆಚ್ಚು ಮಂದಿಗೆ ಕ್ಷೌರ ಮಾಡಿದ್ದಾರೆ ಎನ್ನಲಾಗಿದ್ದು, ಈಗ ಅವರಿಗೂ ಕೊರೊನಾ ಆತಂಕ ಶುರುವಾಗಿದೆ.

ಕ್ಷೌರಿಕನ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಜಿಲ್ಲಾಡಳಿತ ವರದಿಯ ನಿರೀಕ್ಷೆಯಲ್ಲಿದೆ. ಈ ವೃದ್ಧನ ಬಳಿ ಯಾರಾದರೂ ಕ್ಷೌರ ಮಾಡಿಸಿಕೊಂಡಿದ್ದಲ್ಲಿ ಸ್ವಯಂಪ್ರೇರಿತವಾಗಿ ಪರೀಕ್ಷೆಗೆ ಒಳಪಡುವಂತೆ ಜಿಲ್ಲಾಡಳಿತ ಹಾಗೂ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.


Spread the love

About Laxminews 24x7

Check Also

ಜವಳಿ ಪಾರ್ಕ್ ನಿಂದ 2 ಲಕ್ಷ ಉದ್ಯೋಗ: C.M ಬೊಮ್ಮಾಯಿ

Spread the loveಕಲಬುರಗಿ : ಪಿಎಂ ಮಿತ್ರ ಜವಳಿ ಪಾರ್ಕ್ 371 ಜೆ ಆದ ನಂತರ ಆಗಿರುವ ಮೆಗಾ ಯೋಜನೆ. ಒಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ