ನವದೆಹಲಿ: ಕೊರೊನಾ ವೈರಸ್ ನ ನಡುವೆಯೇ ಕೋಳಿ ಜ್ವರ ಇದೀಗ ವ್ಯಾಪಕ ಭಯ ಹುಟ್ಟಿಸಿದೆ. ಹಿಮಾಚಲ ಪ್ರದೇಶದ ಅನೇಕ ಭಾಗದಲ್ಲಿ ಪೌಲ್ಟ್ರಿ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 2 ಲಕ್ಷ ಕೋಳಿ ಮತ್ತು ವಲಸೆ ಹಕ್ಕಿಗಳು ಸಾವನ್ನಪ್ಪಿದ ನಂತರ ಅಧಿಕಾರಿಗಳು ತೀವ್ರ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಂಡಿದ್ದಾರೆ. ಭೋಪಾಲ್ ಮೂಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ …
Read More »ಗೋಹತ್ಯೆ ನಿಷೇಧ ಕಾಯ್ದೆ: ರಾಜ್ಯ ಸರಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಬೆಂಗಳೂರು. ಸುಗ್ರೀವಾಜ್ಞೆಯ ಪ್ರಕಾರ ರಾಜ್ಯದಲ್ಲಿ ಜಾನುವಾರು ಸಾಗಾಣಿಕೆ, ಹತ್ಯೆಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ, ಹತ್ಯೆಗಾಗಿ ಜಾನುವಾರು ಮಾರಾಟ, ಖರೀದಿ ಮೇಲೆ ಸಹ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ, ಹತ್ಯೆಗಾಗಿ ಮಾರಾಟ ಮಾಡಿದರೆ ಆ ಜಾನುವಾರುಗಳನ್ನು ಜಪ್ತಿ ಮಾಡಲಾಗುವುದು. ನಿಯಮ ಉಲ್ಲಂಘಿಸಿದರೆ ಮೂರು ವರ್ಷದಿಂದ ಏಳು ವರ್ಷ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಲಾಗಿದೆ. ಅಲ್ಲದೆ 50 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ದಂಡ ಸಹ ವಿಧಿಸಲಾಗುವುದು. ಆದರೆ, ಕೃಷಿ …
Read More »ಪ್ರತಿಭಟನೆ ನಿರತ ರೈತರಿಂದ ಟ್ರ್ಯಾಕ್ಟರ್ ಜಾಥ ನಾಳೆಗೆ ಮುಂದೂಡಿಕೆ
ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಜ.06 ರಂದು ನಿಗದಿಪಡಿಸಿದ್ದ ಟ್ರ್ಯಾಕ್ಟರ್ ಜಾಥವನ್ನು ಜ.07 ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ರೈತರ ಒಕ್ಕೂಟಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಹವಾಮಾನ ವೈಪರಿತ್ಯದ ಕಾರಣದಿಂದಾಗಿ ಟ್ರ್ಯಾಕ್ಟರ್ ಜಾಥಾವನ್ನು ಜ.07 ಕ್ಕೆ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ತಮ್ಮ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ. ಜ.07 ರಂದು ಟ್ರ್ಯಾಕ್ಟರ್ …
Read More »BIG NEWS: ಜಿಪಂ, ಗ್ರಾಪಂ ಸಾಕು – ತಾಲೂಕು ಪಂಚಾಯಿತಿ ರದ್ದು ಮಾಡಲು ಬೇಡಿಕೆ
ಬೆಂಗಳೂರು: ತಾಲೂಕು ಪಂಚಾಯಿತಿಯನ್ನು ರದ್ದುಗೊಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಶಾಸಕರು ನಡೆಸಿದ ಸಭೆಯಲ್ಲಿ ಇಂತಹುದೊಂದು ಪ್ರಸ್ತಾಪ ಕೇಳಿಬಂದಿದ್ದು, ರಾಜ್ಯದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥೆ ರದ್ದುಗೊಳಿಸಲು ಕಾನೂನು ತಿದ್ದುಪಡಿ ತರುವಂತೆ ಸಲಹೆ ನೀಡಲಾಗಿದೆ ಎಂದು ಹೇಳಲಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಹೀಗೆ ಮೂರು ಸ್ತರದ ವ್ಯವಸ್ಥೆಗಳಿದ್ದರೂ ತಾಲೂಕು ಪಂಚಾಯಿತಿಗೆ ಯಾವುದೇ ಅನುದಾನ ಮತ್ತು ನಿರ್ದಿಷ್ಟ ಕೆಲಸ ಇಲ್ಲದಂತಾಗಿದೆ. ಅನಗತ್ಯವಾಗಿರುವ …
Read More »ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆ ಸುಪ್ರೀಂ ಅಸ್ತು
ನವದೆಹಲಿ, ಜ.5- ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‍ವರೆಗೆ 3 ಕಿ.ಮೀ. ವಿಸ್ತಾರವಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ತಾ ಯೋಜನೆಗೆ ಇದ್ದ ತಡೆಯನ್ನು ಸರ್ವೋಚ್ಛ ನ್ಯಾಯಾಲಯ ತೆರವುಗೊಳಿಸಿದೆ. ಪರಿಸರ ಅನುಮತಿ ಮತ್ತು ಭೂ ಬಳಕೆಯಲ್ಲಿನ ಅಧಿಸೂಚನೆಯನ್ನು ಸುಪ್ರೀಂ ಕೋರ್ಟು ಬಹುಮತದ ತೀರ್ಪಿನ ಮೂಲಕ ವಿಸ್ತಾ ಯೋಜನೆ ಚಾಲನೆಗೊಳ್ಳಲು ದಾರಿ ಮಾಡಿಕೊಟ್ಟಿದೆ. 2019ರ ಸೆಪ್ಟೆಂಬರ್‍ನಲ್ಲಿ ಘೋಷಿಸಲಾದ ಸೆಂಟ್ರಲ್ ವಿಸ್ತಾ ಪುನರುಜ್ಜೀವನ ಯೋಜನೆ 900 ರಿಂದ 1,200 ಸಂಸದರಿಗೆ ಆಸನ ಕಲ್ಪಿಸುವ ಸಾಮಥ್ರ್ಯವನ್ನು …
Read More »ಟೋಲ್ ಪ್ಲಾಜಾಗಳಲ್ಲಿ ಹಗಲು ದರೋಡೆ : ಜನರ ಆಕ್ರೋಶ
ಹಿರಿಯೂರು ,- ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಟೋಲ್ ಪ್ಲಾಜಗಳಲ್ಲಿ ಖಾಸಗಿ ಕಂಪನಿ ಹೆಸರಿನಲ್ಲಿ ಏಜೆನ್ಸಿಗಳು ವಾಹನಗಳ ಮಾಲೀಕರಿಂದ ಡಬಲ್ ಚಾರ್ಜ್ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ ಎಂದು ಚಾಲಕರು ಹಾಗೂ ವಾಹನಗಳ ಮಾಲೀಕರು ಆರೋಪಿಸಿದ್ದಾರೆ. ತಾಲೂಕಿನ ಗುಯಿಲಾಳು ಮತ್ತು ಶಿರಾ ತಾಲೂಕಿನ ಕಳ್ಳಂಬೆಳ್ಳ ಸಮೀಪದ ಖಾಸಗಿ ಕಂಪನಿ ನಿರ್ವಹಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಈ ಎರಡು ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಗೆ ಫಾಸ್ಟ್ಯಾಗ್ ಮಾಡಿಸಿಲ್ಲ ಎಂಬ ನೆಪವೊಡ್ಡಿ ಡಬಲ್ ಶುಲ್ಕ …
Read More »ಹಲವು ದಾಖಲೆಗಳಿಗೆ ಸಾಕ್ಷಿಯಾಗಲಿದೆ ಇಂಡೋ- ಆಸೀಸ್ `ಸಿಡ್ನಿ’ಟೆಸ್ಟ್
ಸಿಡ್ನಿ, ಜ.5- ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯೆಂದರೆ ಅಲ್ಲಿ ದಾಖಲೆಗಳಿಗೇನೂ ಭರವಿಲ್ಲ, ಈಗ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಪ್ರಮುಖ ದಾಖಲೆಗಳು ಮಾಡಲು ಆಟಗಾರರು ಸಜ್ಜಾಗಿ ದ್ದಾರೆ. ಮೊದಲೆರಡು ಟೆಸ್ಟ್‍ಗಳಿಂದ ತಂಡದಿಂದ ದೂರ ಉಳಿದಿದ್ದ ಸ್ಟಾರ್ ಆಟಗಾರರಾದ ಭಾರತದ ರೋಹಿತ್ ಶರ್ಮಾ ಹಾಗೂ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಅವರು ಸಿಡ್ನಿ ಟೆಸ್ಟ್‍ನಲ್ಲಿ ಆಡುವ ಮೂಲಕ ಕೇಂದ್ರಬಿಂದುವಾಗಿದ್ದು ಅವರು ಕೂಡ ದಾಖಲೆ ಬರೆಯಲು ಉತ್ಸುಕದಲ್ಲಿದ್ದಾರೆ. 6 ಸಾವಿರ ಟೆಸ್ಟ್‍ನತ್ತ …
Read More »ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಬದ್ಧತೆ
ಬೆಳಗಾವಿ – ರಸ್ತೆ ಸೇರಿದಂತೆ ಯಾವುದೇ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಎಲ್ಲ ಕಾಮಗಾರಿಗಳೂ ಸಮರ್ಪಕವಾಗಿ ನಡೆಯಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಣ್ಣೂರ, ಉಚಗಾಂವ ಹಾಗೂ ಗೋಜಗಾ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಹೆದ್ದಾರಿ ನಿರ್ಮಾಣದ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸಿದ ಅವರು, ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚಿಸಿ, ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಸೂಚನೆಯನ್ನು ನೀಡಿದರು. ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಬದ್ಧತೆ. ನಿಗದಿತ ಗುರಿ …
Read More »ಬೆಳಗಾವಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್.
ಬೆಳಗಾವಿ – ಬೆಳಗಾವಿ ಜಿಲ್ಲೆ ಮತ್ತು ಇಡೀ ರಾಜ್ಯದಲ್ಲಿ ಈಗ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯೇ ಬಿಜೆಪಿಯಲ್ಲಿ ಪವರ್ ಫುಲ್ ಲೀಡರ್. ಬೆಳಗಾವಿ ಜಿಲ್ಲೆಯ ಎರಡು ಕಡೆ ಸೇರಿದಂತೆ ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಜನಸೇವಕ ಸಮಾವೇಶವೂ ಸೇರಿದಂತೆ ಇತ್ತೀಚಿನ ಹಲವು ಬೆಳವಣಿಗೆಗಳು ಇದಕ್ಕೆ ಪುಷ್ಠಿ ನೀಡುತ್ತವೆ. ರಮೇಶ್ ಜಾರಕಿಹೊಳಿ ಮುಂದೆ ಬಿಜೆಪಿಯ ಇತರ ನಾಯಕರೆಲ್ಲ ಈಗ ಗೌಣರಾಗುತ್ತಿದ್ದಾರೆ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ …
Read More »ಮಾಜಿ ಶಾಸಕ ಬಸವಂತರೆಡ್ಡಿ ನಿಧನ: ಸಂತಾಪ ವ್ಯಕ್ತಪಡಿಸಿದ ಸಚಿವ ರಮೇಶ್ ಜಾರಕಿಹೊಳಿ
ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೂ, ಮಾಜಿ ಶಾಸಕರೂ ಆದ ಬಸವಂತ ರೆಡ್ಡಿ ಪಾಟೀಲ್ ಮೋತಕದಲ್ಲಿ ಅವರ ನಿಧನಕ್ಕೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 1989 ಮತ್ತು 1994 ರಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ್ದ ಬಸವಂತರೆಡ್ಡಿ ಅವರು ಪ್ರಗತಿಪರ ಶಾಸಕರಾಗಿ ನಮಗೆಲ್ಲಾ ಮಾದರಿಯಾಗಿದ್ದರು ಎಂದು ಸ್ಮರಿಸುವ ಸಚಿವ ಜಾರಿಕಿಹೊಳಿ, ಯಾದಗೀರ್ ಮತ್ತು ಕಲಬುರಗಿ …
Read More »
Laxmi News 24×7