Breaking News

Uncategorized

ರಿಪಬ್ಲಿಕ್ ಟಿವಿಗೆ ಬ್ರಿಟನ್ ದಂಡ: ಬ್ರಿಟಿಷರನ್ನು 280 ಬಾರಿ ಕ್ಷಮೆ ಕೋರಿ ಸಾವರ್ಕರ್ ದಾಖಲೆ ಮುರಿದು ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾದ ಅರ್ನಾಬ್ ಗೋ ಸ್ವಾಮಿ

ಹೊಸದಿಲ್ಲಿ: ಬ್ರಿಟನ್ ನ ಟಿವಿ ನಿಯಂತ್ರಣ ಪ್ರಾಧಿಕಾರ ಆಫ್ ಕಾಮ್ 20 ಲಕ್ಷ ರೂ. ದಂಡ ವಿಧಿಸಿದ ಬಳಿಕ 280 ಬಾರಿ ಕ್ಷಮೆ ಕೋರುವ ಮೂಲಕ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಸಾರ್ವಜನಿಕರಿಂದ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭ ಬ್ರಿಟಿಷ್ ಸರಕಾರಕ್ಕೆ ಹಲವು ಬಾರಿ ಕ್ಷಮೆ ಕೋರುವ ಮೂಲಕ ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಹಿಂದುತ್ವವಾದಿ ಸಾವರ್ಕರ್ ಅವರಿಗೆ ಗೋಸ್ವಾಮಿಯನ್ನು ಹೋಲಿಸಿರುವ ಜನರು ಕ್ಷಮೆ ಯಾಚನೆಯಲ್ಲಿ ಸಾರ್ವಕರ್ …

Read More »

9 ಎಕರೆಯಷ್ಟು ಕಬ್ಬು ಬೆಂಕಿಗಾಹುತಿ

ಬೆಳಗಾವಿ; 9 ಎಕರೆಯಷ್ಟು ಕಬ್ಬು ಬೆಳೆ ಬೆಂಕಿಗಾಹುತಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ತಲ್ಲೂರು ಗ್ರಾಮದಲ್ಲಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬು ಬೆಳೆಗೆ ಬೆಂಕಿ ಬಿದ್ದಿದ್ದು, 9 ಎಕರೆಯಷ್ಟು ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ. ಶಿವನಗೌಡ ಪಾಟೀಲ್ ಎಂಬುವವರಿಗೆ ಸೇರಿದ 6 ಎಕರೆ, ಮಾಬು ಸುಭಾವಿ ಎಂಬುವವರಿಗೆ ಸೇರಿದ 2 ಎಕರೆ ಹಾಗೂ ದಸಕೀರಸಾಬ್ ಎಂಬುವವರಿಗೆ ಸೇರಿದ 1 ಎಕರೆ ಕಬ್ಬು ಬೆಳೆ ನಾಶವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ …

Read More »

ಮಂಜಿನಗರಿಯಲ್ಲಿ ಪ್ರವಾಸೋದ್ಯಮ ಪ್ರೋತ್ಸಾಹಿಸಲು ಒಂದು ವಾರ ಹೆಲಿಟೂರಿಸಂ

ಕೊಡಗು: ಮಂಜಿನನಗರಿ ಮಡಿಕೇರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿನ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ತನ್ನದೇ ವಿಶಿಷ್ಠ ಸಂಪ್ರದಾಯಗಳಿಂದ ಎಲ್ಲರ ಗಮನ ಸೆಳೆಯುವ ಜಿಲ್ಲೆಯಲ್ಲಿ  ಎತ್ತ ನೋಡಿದರೂ ಕಾನನಗಳ ಹೊದ್ದು ಗಗನ ಚುಂಬಿಸುವ ಬೆಟ್ಟ ಗುಡ್ಡಗಳು, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳ ಕಾಣಸಿಗುತ್ತವೆ.   ಇಂತಹ ಸುಂದರ ತಾಣದಲ್ಲಿ ಪ್ರವಾಸಿಗರಿಗೂ  ಸುತ್ತಾಡುವುದು ಎಂದರೆ  ತುಂಬಾನೇ ಮಜಾ. ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾದ ಭೀಕರ ಭೂಕುಸಿತ ಇಡೀ ಜಿಲ್ಲೆಯನ್ನು ತತ್ತರಿಸುವಂತೆ …

Read More »

ಕಣ್ಣುಮುಚ್ಚಿ ಕುಳಿತ ಸಾಲಾಪುರ ಗ್ರಾಮ ಪಂಚಾಯತಿ ಅಧಿಕಾರಿಗಳು.

  ಕಳೆದ ಒಂದು ವರ್ಷದಿಂದ ದಾ ಸಾಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ 3 ನೇ ವಾರ್ಡಿನಲ್ಲಿ ರಸ್ತೆಯ ಮೇಲೆ ಚರಂಡಿಯ ನೀರು ಮೊಣಕಾಲು ತನಕ ನಿಂತು ಗಬ್ಬುನಾರುತ್ತಿದೆ. ಇದರಿಂದ ಸೊಳ್ಳೆಗಳು ಹಾಗೂ ಕೀಟನಾಶಕಗಳು ಉತ್ಪತ್ತಿಯಾಗಿ ಸಾರ್ವಜನಿಕರಿಗೆ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ. ಈ ಹಿಂದೆ ಸಾರ್ವಜನಿಕರು ಗ್ರಾಮ ಪಂಚಾಯತಿಗೆ ರಸ್ತೆಯ ಮೇಲೆ ನಿಂತ ನೀರನ್ನು ಸರಿಯಾಗಿ ಚರಂಡಿ ಮಾಡಿ ಎಂದು ಗ್ರಾಮ ಪಂಚಾಯತಿ ಯವರಿಗೆ ಹೇಳಿದರೂ ಕೂಡ …

Read More »

ಡಿ.25 ರಿಂದ ಜ.10 ರವರೆಗೆ ರೈತರ ಕೃಷಿ ಜಮೀನುಗಳಿಗೆ 6.80 ಟಿಎಮ್‍ಸಿ ನೀರು ಬಿಡುಗಡೆ- ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಜಿಎಲ್‍ಬಿಸಿಗೆ 2400, ಜಿಆರ್‍ಬಿಸಿಗೆ 2000, ಸಿಬಿಸಿ ಕಾಲುವೆಗೆ 550 ಕ್ಯೂಸೆಕ್ಸ್ ನೀರು ಬಿಡುಗಡೆ

ಗೋಕಾಕ : ಹಿಡಕಲ್ ಜಲಾಶಯದಿಂದ ಡಿಸೆಂಬರ್ 25 ರಿಂದ 15 ದಿನಗಳವರೆಗೆ ರೈತರ ಕೃಷಿ ಜಮೀನುಗಳಿಗೆ ನೀರು ಹಾಯಿಸಲು 6.80 ಟಿಎಂಸಿ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿದ್ದು, ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಹಿಡಕಲ್ ಜಲಾಶಯದಿಂದ ನೀರನ್ನು ಬಿಡುಗಡೆ …

Read More »

ಪದೇ ಪದೇ ತಮ್ಮ ನಿರ್ಧಾರವನ್ನ ಬದಲಿಸುತ್ತಿರುವ B.S.Y..ಇಂದಿನಿಂದ ಅಲ್ಲ, ನಾಳೆಯಿಂದ ಜಾರಿ; ರಾತ್ರಿ 11ರ ಬಳಿಕ ಎಲ್ಲಾ ಸೇವೆ ಬಂದ್

ಬೆಂಗಳೂರು (ಡಿ. 23): ಬ್ರಿಟನ್​ನ ಹೊಸ ರೂಪಾಂತರದ ಕೊರೋನಾ ವೈರಸ್​ ಆತಂಕದ ಹಿನ್ನಲೆ ರಾಜ್ಯದಲ್ಲಿ ಇಂದಿನಿಂದ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿತ್ತು. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಇಂದು ಮಧ್ಯಾಹ್ನ  ಆದೇಶಿಸಿತ್ತು. ಆದರೆ, ವರ್ಷಾಂತ್ಯದಲ್ಲಿ ಈ ರೀತಿ ಕರ್ಫ್ಯೂ ಜಾರಿ ಮಾಡುವುದರಿಂದ ಬಾರ್​ ಅಂಡ್​ ರೆಸ್ಟೋರೆಂಟ್​, ಓಲಾ, ಉಬರ್​ ಸೇರಿದಂತೆ ಅನೇಕ ಉದ್ಯಮಗಳಿಗೆ ನಷ್ಟವಾಗಲಿದೆ ಎಂಬ ವಿರೋಧ ಎಲ್ಲೆಡೆ ವ್ಯಕ್ತವಾಗಿತ್ತು. ಈ ನೈಟ್​ ಕರ್ಫ್ಯೂನಿಂದಾಗಿ …

Read More »

ವರ್ತೂರು ಕಿಡ್ನಾಪ್ ಕೇಸ್: ಇಬ್ಬರು ವಿದ್ಯಾರ್ಥಿಗಳು ಸೇರಿ 6 ಜನರ ಬಂಧನ

ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ಕಾರಿನಲ್ಲಿ ಅಪಹರಿಸಿ 30 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಬೆಂಗಳೂರಿನ ಆರು ಮಂದಿಯನ್ನು ಬಂಧಿಸುವಲ್ಲಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.   ಮೂಲತಃ ತಮಿಳುನಾಡಿನ ಬೆಂಗಳೂರಿನ ವಿನಾಯಕನಗರದಲ್ಲಿ ವಾಸಿಸುತ್ತಿರುವ ಕವಿರಾಜ್ (43), ಬೆಳ್ಳಂದೂರು-ಸರ್ಜಾಪುರ ರಸ್ತೆಯ ಅರಳೂರು ನಿವಾಸಿ, ಬಿಕಾಂ ವಿದ್ಯಾರ್ಥಿಗಳಾದ ಲಿಖಿತ್ (20), ಉಲ್ಲಾಸ್ (21), …

Read More »

ಬೆಳಗಾವಿಯಲ್ಲಿ ಕೂಡ ನೈಟ್ ಕರ್ಫ್ಯೂ ಜಾರಿ, ನೋ ಓಲ್ಡ ಮ್ಯಾನ್, ನೋ ಕ್ರಿಸ್ಮಸ್, NEW YEAR ಸೆಲೆಬ್ರೇಶನ್…. ಎಲ್ಲದಕ್ಕೂ ಬ್ರೇಕ್ ಹಾಕಿದ ಸರ್ಕಾರ

ಬೆಳಗಾವಿ-ಬೆಳಗಾವಿ ಗಡಿಭಾಗ,ಮಹಾರಾಷ್ಟ್ರ ,ಗೋವಾ ,ಕರ್ನಾಟಕ ರಾಜ್ಯಗಳ ಸಂಸ್ಕೃತಿಯ ಸಂಗಮ.ಕ್ರಿಸ್ ಮಸ್ ಹಬ್ಬ ಶುರುವಾದ್ರೆ ಸಾಕು,ಇಲ್ಲಿ ಸಂಬ್ರಮ ಶುರುವಾಗುತ್ತದೆ. ಕೊರೋನಾ ರೂಪಾಂತರಗೊಂಡ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇವತ್ತಿನಿಂದ ಜನೇವರಿ 2 ರವರೆಗೆ ನೈಟ್ ಕರ್ಫ್ಯು ಜಾರಿ ಮಾಡಿದ್ದು ಕ್ರಿಸ್ ಮಸ್ ,ಹ್ಯಾಪೀ ನ್ಯು ಇಯರ್ ಸಂಬ್ರಮಕ್ಕೆ ಬ್ರೇಕ್ ಬಿದ್ದಿದೆ. ಇವತ್ತಿನಿಂದ ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ನೈಟ್ ಕರ್ಫ್ಯು ಜಾರಿಗೆ ಬರಲಿದೆ. ಹೀಗಾಗಿ ಬಾರ್ ಆ್ಯಂಡ ರೆಸ್ಟೋರೆಂಟ್,ಮತ್ತು ಹೊಟೇಲ್ …

Read More »

ರೈತ ನಾಯಕ ಚೌಧರಿ ಪ್ರಧಾನಿಗೆ ಸ್ಪೂರ್ತಿ, ರೈತರಿಗೆ ಅನ್ಯಾಯವಾಗಲು ಬಿಡಲ್ಲ : ರಾಜನಾಥ್ ಸಿಂಗ್

ನವದೆಹಲಿ,ಡಿ.23- ರೈತರ ದಿನಾಚರಣೆಯ ಹಿನ್ನೆಲೆಯಲ್ಲಿ ಭಾರತದ 5ನೇ ಪ್ರಧಾನಮಂತ್ರಿಯಾಗಿದ್ದ ಚರಣ್‍ಸಿಂಗ್ ಚೌಧರಿ ಅವರನ್ನು ಸ್ಮರಿಸಿರುವ ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್, ಚೌಧರಿ ಅವರಿಂದ ಪ್ರಭಾವಿತ(ಸ್ಪೂರ್ತಿ)ರಾಗಿರುವ ಪ್ರಧಾನಿ ನರೇಂದ್ರಮೋದಿ ಅವರು ಎಂದಿಗೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇಂದು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ರೈತ ನಾಯಕ ಹಾಗೂ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಅವರು ತಮ್ಮ ಜೀವಾತವಧಿಯವರೆಗೂ ರೈತರ ಪರ ಧ್ವನಿ ಎತ್ತಿದ್ದರು. ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ …

Read More »

ಮುಂದಿನ ವರ್ಷದಿಂದ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ.

ನವದೆಹಲಿ, ಡಿ.23- ಮುಂದಿನ ವರ್ಷದಿಂದ ಪ್ರತಿವಾರ ಗ್ಯಾಸ್ ಸಿಲಿಂಡರ್ ದರ ಪರಿಷ್ಕರಣೆ ಮಾಡಲು ತೈಲ ಕಂಪೆನಿಗಳು ನಿರ್ಧರಿಸಿವೆ. ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪರಿಷ್ಕರಣೆ ಮಾಡಲಾಗುತ್ತದೆ. ಆಯಾ ದಿನದ ಆರು ಗಂಟೆ ಬಳಿಕ ಪರಿಷ್ಕರಣೆಯಾಗುವ ದರವನ್ನು ಗ್ರಾಹಕರು ನೀಡಬೇಕಿದೆ. ಗ್ಯಾಸ್ ಸಿಲಿಂಡರ್‍ಗಳ ಬೆಲೆಯನ್ನು ಪ್ರತಿ ತಿಂಗಳಿಗೊಮ್ಮೆ ಪರಿಷ್ಕರಣೆ ಮಾಡುವ ಪದ್ಧತಿ ಜಾರಿಯಲ್ಲಿದೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದರೆ ಅದರಿಂದಾಗುವ ನಷ್ಟವನ್ನು ತೈಲ …

Read More »