ಬಾಗಲಕೋಟೆ): ಜನಸಂಖ್ಯಾಧಾರಿತವಾಗಿ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಸಿಗಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಕೇಂದ್ರ ಸರ್ಕಾರ ಕೊಟ್ಟರೂ ರಾಜ್ಯ ಸರ್ಕಾರ ಕೊಟ್ಟಿಲ್ಲ. ನಮ್ಮ ಸರ್ಕಾರ ಬಂದ ಬಳಿಕ ಈಗ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಕುರುಬರು ಎಸ್ಟಿ ಸೇರ್ಪಡೆಗಾಗಿ ಹೋರಾಟ ಮಾಡ್ತಿದ್ದಾರೆ. ಅಂತಿಮ ತೀರ್ಮಾನ ಏನು ತೆಗೆದುಕೊಳ್ತಾರೆ ನೋಡೋಣ. ವಾಲ್ಮೀಕಿ ಸಮಾಜಕ್ಕೆ ಜನಸಂಖ್ಯಾಧಾರಿತ ಮೀಸಲಾತಿ ಕೊಡಬೇಕೆನ್ನುವುದು ನನ್ನ ಒತ್ತಾಯ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ …
Read More »ಪಕ್ಷ ಸಂಘಟನೆ: ಜನವರಿ 6 ರಿಂದ ‘ಕೈ’ ನಾಯಕರ ಸಭೆ
ಬೆಂಗಳೂರು: ತಳಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ಜೊತೆಗೆ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟು ಪಂಚಾಯಿತಿ, ವಾರ್ಡ್, ಬೂತ್ ಸಮಿತಿಗಳ ರಚನೆ ಕುರಿತು ಸ್ಥಳೀಯಮಟ್ಟದಲ್ಲಿ ಪಕ್ಷದ ನಾಯಕರ ಜೊತೆ ಸಮಾಲೋಚನೆ ನಡೆಸಲು ರಾಜ್ಯದ ನಾಲ್ಕು ವಿಭಾಗಗಳಲ್ಲಿ (ಮೈಸೂರು, ಬೆಂಗಳೂರು, ಬೆಳಗಾವಿ, ಕಲಬುರ್ಗಿ) ಜ. 6ರಿಂದ ಸಭೆಗಳನ್ನು ಆಯೋಜಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರ್ಧರಿಸಿದ್ದಾರೆ. ಜ 6ರಂದು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿರುವ ಸಾಗರ ಆಡಿಟೋರಿಯಂನಲ್ಲಿ ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ಮೈಸೂರು ವಿಭಾಗ, …
Read More »ಬೆಂಗಳೂರಿಗರೇ ಎಚ್ಚರ..! ನಗರದಲ್ಲಿ ‘ತೀವ್ರ ಚಳಿ’ಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ರೇ, ಹೀಗೆ ಆಗ್ಬಹುದು.!
ಬೆಂಗಳೂರು : ರಾಜ್ಯದ ರಾಜಧಾನಿಯಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ನಗರದಲ್ಲಿ ಡಿಸೆಂಬರ್ 24ರ ನಂತ್ರ ತೀವ್ರ ಉಸಿರಾಟದ ತೊಂದೆರೆಯಂತ ಕಾಯಿಲೆ ಕೂಡ ಹೆಚ್ಚಾಗಿದೆಯಂತೆ. ಇದರಿಂದಾಗಿ ತೀವ್ರ ಉಸಿರಾಟದ ತೊಂದೆರೆಗೆ ಒಳಾಗುತ್ತಿರುವ ರಾಜಧಾನಿಯ ಅನೇಕರು ಐಸಿಯುಗೆ ದಾಖಲಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಚಳಿಯ ಬಗ್ಗೆ ಅಸಡ್ಡೆ ಮಾಡಬೇಡಿ. ಎಚ್ಚರಿಗೆ ವಹಿಸೋದು ಮರೆಯಬೇಡಿ. ಹೌದು. ಈ ಬಗ್ಗೆ ನಗರದ ಮಣಿಪಾಲ್ ಹಾಸ್ಪತ್ರೆಯ ತೀವ್ರ ನಿಗಾ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಸುನೀಲ್ …
Read More »ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಸುಗ್ರೀವಾಜ್ಞೆ ಮೂಲಕ ಜಾರಿ : ರಾಜ್ಯ ಬಿಜೆಪಿ ಘಟಕದಿಂದ ಮಾಹಿತಿ
ಬೆಂಗಳೂರು : ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020 ಕಾಯ್ದೆಯನ್ನು ಕೊನೆಗೂ ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಮುಂದಾಗಿದ್ದು, ಮಸೂದೆಯನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಬಿಜೆಪಿ ಘಟಕ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ಜಾರಿಗೊಳಿಸಿದ್ದಾರೆ. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನುಗಳನ್ನು ಕೂಡ ಜಾರಿಗೆ ತರಲಿದ್ದೇವೆ …
Read More »ಡಿ.ವಿ.ಸದಾನಂದಗೌಡ ಆಸ್ಪತ್ರೆಗೆ
ಚಿತ್ರದುರ್ಗ: ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅನಾರೋಗ್ಯಕ್ಕೀಡಾಗಿದ್ದು, ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಗರ್ ಲೋ ಆದ ಕಾರಣ ಡಿ.ವಿ.ಸದಾನಂದಗೌಡ ಅವರನ್ನು ಚಿತ್ರದುರ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲು ನಿರ್ಧರಿಸಲಾಗಿದೆ. ಆಂಬುಲೆನ್ಸ್ ನಲ್ಲಿ ಝಿರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆತರು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ
Read More »ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲೋದು ನಮ್ಮ ಗುರಿ : ಬಿಎಸ್ವೈ
ಶಿವಮೊಗ್ಗ, ಜ.3- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಪಡೆಯುವುದೇ ನಮ್ಮ ಗುರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿನ ಬಿಜೆಪಿ ಅಭೂತಪೂರ್ವ ಯಶಸ್ಸು ಸದ್ಯದಲ್ಲೇ ನಡೆಯುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ಮುಂದುವರಿಯಬೇಕೆಂದು ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಫಲಿತಾಂಶ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉಲ್ಲಾಸ, ಸಮಾಧಾನ ಮತ್ತು ತೃಪ್ತಿ ತಂದಿದೆ ಎಂದರು. ಹಠ, ಛಲ …
Read More »ಪ್ರಧಾನಿ ಮೋದಿಗೆ ಡಾಕ್ಟರೇಟ್ ಕೊಟ್ಟಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಸೋಲೋದಕ್ಕೆ ಓಟ್ ಕೊಡಿಸಿದರಲ್ಲ ಅದಕ್ಕೇ ಮೋದಿಗೆ ಅವಾರ್ಡ್ ಕೊಟ್ಟಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. ರಾಮಲಿಂಗಾ ರೆಡ್ಡಿ
ಬೆಂಗಳೂರು (ಜನವರಿ 03); ಬಿಜೆಪಿ ಈ ಹಿಂದೆ ‘ಮನು’ವಾದವನ್ನು ಅನುಸರಣೆ ಮಾಡುತ್ತಿತ್ತು. ಆದರೆ, ಇದಿಗ ಬಿಜೆಪಿ ನಾಯಕರು ‘ಮನಿ’ವಾದವನ್ನು ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿ ನಡೆಯುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ರಾಜ್ಯದ ಎಲ್ಲಾ ಬಿಜೆಪಿ ನಾಯಕರೂ ಡೋಂಗಿಗಳೇ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಅಮೆರಿಕ ಮೂಲದ ಸಂಸ್ಥೆಯೊಂದು ಡಾಕ್ಟರೇಟ್ ಗೌರವ ಘೋಷಿಸಿತ್ತು. ಈ ಕುರಿತು ಅಪಹಾಸ್ಯ …
Read More »ಸರಿಗಮಪ ಚೆನ್ನಪ್ಪ ಹುದ್ದಾರ್ ಎಲ್ಲಿ ಕಾಣೆಯಾಗಿದ್ದಾರೆ?
ಸರಿಗಮಪ ಚೆನ್ನಪ್ಪ ಹುದ್ದಾರ್ ಎಲ್ಲಿ ಕಾಣೆಯಾಗಿದ್ದಾರೆ? ಜೀ ಕನ್ನಡ ಸಿರಿಗಮಪ ಸೀಸನ್ 11ರ ವಿಜೇತ ಚನ್ನಪ್ಪ ಹುದ್ದಾರ್ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಂತರ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ ಎಂಬುದು ನೆಟ್ಟಿಗರ ಆರೋಪ. ಚನ್ನಪ್ಪ ಏನು ಮಾಡುತ್ತಿದ್ದಾರೆ ಎಂಬುದಕ್ಕೆ ಕ್ಲಾರಿಟಿ ಇಲ್ಲಿದೆ ನೋಡಿ. ಚೆನ್ನಪ್ಪ ಹುದ್ದಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನೆಲೆ ಗಾಯಕ. ಇವರು ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಕಾರ್ಯಕ್ರಮದ 11 ನೇ ಸೀಸನ್ ನ ವಿಜೇತರು. ಈ …
Read More »ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ
ಮುಂಬೈ: ಯುವಕನೋರ್ವ ಹಲ್ಲುಜ್ಜುತ್ತಾ ಟೂಥ್ ಬ್ರಶ್ ನುಂಗಿರುವ ವಿಚಿತ್ರ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ವಿಜಯ್ ಜನಾರ್ಧನ್ ಬ್ರಶ್ ನುಂಗಿದ ಯುವಕ. ಡಿಸೆಂಬರ್ 26ರಂದು ಬೆಳಗ್ಗೆ ಹಲ್ಲುಜ್ಜುವಾಗ ಬ್ರಶ್ ನುಂಗಿದ್ದಾನೆ. ಕೆಲ ಸಮಯದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡಾಗ ವಿಜಯ್ ನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಕ್ಸ್ ರೇ ಮಾಡಿದಾಗ ಅವರಿಗೂ ಗೊತ್ತಾಗಿಲ್ಲ. ಸಿಟಿ ಸ್ಕ್ಯಾನ್ ಮಾಡಿದಾಗ ಟೂಥ್‍ಬ್ರಶ್ ಕಂಡಿದ್ದು, ತಡಮಾಡದೇ ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಜೀವ …
Read More »ಸಚಿವ ಜಗದೀಶ್ ಶೆಟ್ಟರ್ ಭಾರಿ ಅಪಾಯವೊಂದರಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
ಹುಬ್ಬಳ್ಳಿ – ಮಾಜಿ ಮುಖ್ಯಮಂತ್ರಿ, ಹಾಲಿ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಭಾರಿ ಅಪಾಯವೊಂದರಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ. ಹುಬ್ಬಳ್ಳಿಯಲ್ಲಿ ವಿವಿಧ ಕಾಮಗಾರಿಗಳ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ರೈಲ್ವೆ ಕೆಳ ಸೇತುವೆ ಕಾಮಗಾರಿ ವೀಕ್ಷಿಸಲು ಜಗದೀಶ ಶೆಟ್ಟರ್ ತೆರಳಿದ್ದರು. ಅವರು ವೀಕ್ಷಣೆ ಮಾಡಿ ಹೊರಬಂದ ತಕ್ಷಣ ಅಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಜಗದೀಶ್ ಶೆಟ್ಟರ್ ಹಾಗೂ ಅವರ ಜೊತೆಯಲ್ಲಿದ್ದವರೆಲ್ಲ ಸ್ವಲ್ಪದರಲ್ಲಿ ಈ ಅವಘಡದಿಂದ ಪಾರಾಗಿದ್ದಾರೆ. …
Read More »
Laxmi News 24×7