Breaking News

Uncategorized

ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು

ಕುಂದಾನಗರಿಯಲ್ಲಿ ಮೊಳಗಿದ ಕಪೂರ್ ಕುಟುಂಬದ ಎವರ್‌ಗ್ರೀನ್ ಗೀತೆಗಳು: ಕಲಾವಿದರ ಸುಶ್ರಾವ್ಯ ಗಾಯನಕ್ಕೆ ಬೆಳಗಾವಿ ಫಿದಾ ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಾರ್ಯಕ್ರಮ ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ ಸಹಯೋಗದಲ್ಲಿ “ಸ್ಪಂದನ ಮೆಲೋಡಿಸ್’ನ ವತಿಯಿಂದ ಜಾನೆ ಕಹಾ ಗಯೇ ವೋ ದಿನ್ ಕಪೂರ್ ಕುಟುಂಬದ ಚಲನಚಿತ್ರಗಳ ಗೀತೆಗಳ ಗಾಯನ ಸ್ಪರ್ಧೆ ನಡೆಯಿತು. ಬೆಳಗಾವಿಯ ಲಿಂಗಾಯಿತ ಮಹಿಳಾ ಸಮಾಜ ಮತ್ತು ಕನ್ನಡ ಭವನದ …

Read More »

ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಹೃದಯಾಘಾತದಿಂದ ನಿಧನ

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ವಾಸವಿದ್ದ 43 ವರ್ಷದ ಜೆಎಂಎಫ್‌ಸಿ ನ್ಯಾಯಾಧೀಶೆ ಕಾಂತಮ್ಮ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಕಳೆದ ಒಂದು ವರ್ಷದಿಂದ ಮಧುಗಿರಿಯಲ್ಲಿ ನ್ಯಾಯಾಧೀಶೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಂಚೆದೊಡ್ಡಿ ಗ್ರಾಮದವರಾದ ಕಾಂತಮ್ಮ ಅವರ ಅಕಾಲಿಕ ನಿಧನವು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

Read More »

ಲೋಳಸೂರಿನ ಶಿವಾನಂದ ಡೋಣಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ

​ಬೆಳಗಾವಿ: ಸಮಾಜದ ಸ್ವಾಸ್ಥ್ಯ ಕೆಡಿಸುವ ಕ್ರೂರ ಕೃತ್ಯವೆಸಗಿದ ಆರೋಪಿಯೊಬ್ಬನಿಗೆ ಬೆಳಗಾವಿಯ ಫಾಸ್ಟ್‌ ಟ್ರ್ಯಾಕ್ ಪೋಕ್ಸೋ ನ್ಯಾಯಾಲಯವು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿ ಶಿವಾನಂದ ಬಸವರಾಜ ಡೋಣಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ​ಘಟನೆಯ ಹಿನ್ನೆಲೆ: ಗೋಕಾಕ ತಾಲೂಕಿನ ಲೋಳಸೂರ ಗ್ರಾಮದ ನಿವಾಸಿಯಾದ ಆರೋಪಿಯು, 2025ರಲ್ಲಿ ಬಾಲಕಿಯ ಮೇಲೆ ಪ್ರೀತಿಯ ನಾಟಕವಾಡಿ ಆಕೆಯನ್ನು ಅಪಹರಿಸಿದ್ದನು. ಬಳ್ಳಾರಿಗೆ ಕರೆದೊಯ್ದು ಬಾಲಕಿಯ …

Read More »

ಕೌಟುಂಬಿಕ ಕಲಹ: ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು: ನಾದಿನಿಯ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ದಂಪತಿ ನಡುವೆ ಉಂಟಾದ ಕಲಹವೊಂದು ತಾರಕಕ್ಕೇರಿ, ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ತಾಲೂಕಿನ ಮೋಟಗಾನಹಳ್ಳಿಯಲ್ಲಿ ನಡೆದಿದೆ. ಮೋಟಗಾನಹಳ್ಳಿಯ ನಿವಾಸಿ ವಿನಯ್ ಎಂಬುವವರ ಪತ್ನಿ ಜೀವಿತಾ (26) ಮೃತಪಟ್ಟ ದುರ್ದೈವಿ. ಸುಮಾರು 6 ವರ್ಷಗಳ ಹಿಂದೆ ವಿನಯ್ ಮತ್ತು ಜೀವಿತಾ ಅವರ ವಿವಾಹ ನಡೆದಿತ್ತು. ವಿನಯ್ ಬಟ್ಟೆ ಕೈಮಗ್ಗ ನಡೆಸುತ್ತಾ ಜೀವನ ಸಾಗಿಸುತ್ತಿದ್ದರು. ಈ ದಂಪತಿಗೆ ಎರಡು ವರ್ಷದ ಒಂದು …

Read More »

ವಿವಾಹಿತೆ ಮಹಿಳೆಯ ಬ್ಲಾಕ್ ಮೇಲ್ ಗೆ ಸಿಲುಕಿ ಯುವಕ ಆತ್ಮಹತ್ಯೆ..!?

ನೆಲಮಂಗಲ ಟೌನ್ ವಾಜರಹಳ್ಳಿಯಲ್ಲಿ ಘಟನೆ 28 ವರ್ಷದ ಯುವಕ ದಿಲೀಪ್ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಜಿಮ್ ಟ್ರೈನರ್ ಆಗಿದ್ದ ದಿಲೀಪ್ ಗೆ ಜಿಮ್ ನಲ್ಲಿ 42 ವರ್ಷದ ಯೋಗಿತಾ ಪರಿಚಯ ಆಗಿದ್ದಳು. ಮದುವೆ ಆಗಿದ್ದರೂ ದಿಲೀಪ್ ಜೊತೆ ಸಂಬಂಧ ಬೆಳೆಸಿ ಮಹಿಳೆ ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿಬಂದಿದೆ. ದಿಲೀಪ್ ಸಾ*ವಿಗೆ ಯೋಗಿತಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಿಲೀಪ್ ಮಹಿಳೆಗೆ ಕರೆ ಮಾಡಿ ಮನೆಯ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ರಾತ್ರಿ …

Read More »

ಬೆಳಗಾವಿ ನ್ಯಾಯಾಲದ ಮುಂದೆ ಮಾಧ್ಯಮಗಳ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಎಫ್ಐಆರ್

ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಆರೋಪಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ಆರೋಪಿಗಳು ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿವಿಧ ಪ್ರಕರಣದ ಆರೋಪಿಗಳಾದ ಮುತ್ಯಾನಟ್ಟಿ ಮೂಲದ ಬಸವರಾಜ ದಡ್ಡಿ, ಬಸವಣ್ಣಿ ನಾಯಕ್, ನವೀನ್ ದಡ್ಡಿ ಹಾಗೂ ಲಕ್ಷ್ಮೀಣ ದಡ್ಡಿ ವಿರುದ್ಧ ಬೆಳಗಾವಿಯ …

Read More »

ನದಾಫ್‌ ಜೊತೆ ಪ್ರೀತಿ – ಮನೆಯಲ್ಲೇ ಭೂಮಿಕಾ ಆತ್ಮಹತ್ಯೆ.!

ಬಾಗಲಕೋಟೆ: ಮುಸ್ಲಿಮ್‌ ಯುವಕನನ್ನು ಪ್ರೀತಿ ಮಾಡುತ್ತಿದ್ದ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆಯ ಸೆಕ್ಟರ್ ನಂಬರ್ 48ರಲ್ಲಿ ನಡೆದಿದೆ. ಭೂಮಿಕಾ ತಿಪ್ಪಣ್ಣವರ್ (19) ಆತ್ಮಹತ್ಯೆಗೆ ಶರಣಾದ ಯುವತಿ. ಭೂಮಿಕಾ (Bhumika) ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಟಯರ್‌ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ ಭೂಮಿಕಾ ಮತ್ತು ಟಾಂಟಾಂ ಚಾಲಕ ಡೊಂಗ್ರಿಸಾಬ್ ನದಾಫ್‌ ಮಧ್ಯೆ ಕಳೆದ 2 ವರ್ಷಗಳಿಂದ ಪ್ರೀತಿಯಿತ್ತು. ಭೂಮಿಕಾ ಪೋಷಕರು ನದಾಫ್‌ಗೆ ಸಾಕಷ್ಟು ಬಾರಿ ಮನೆ ಬಂದು ಮಾತನಾಡಬೇಡ …

Read More »

ಡಿಸಿಸಿ ಬ್ಯಾಂಕ್ ನಿರ್ಧಾರಕ್ಕೆ ಶಶಿಕಾಂತ ಗುರೂಜಿ ಕೆಂಗಣ್ಣು: ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಕೋಟಿ ಕೋಟಿ ಸಾಲ ನೀಡಲು ರೈತ ಮುಖಂಡರ ವಿರೋಧ!

ಡಿಸಿಸಿ ಬ್ಯಾಂಕ್ ರೈತರ ಬ್ಯಾಂಕ್ ಆಗಿದ್ದು, ನಷ್ಟದಲ್ಲಿರುವ ಸಕ್ಕರೆ ಕಾರ್ಖಾನೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ನೀಡುತ್ತಿರುವುದು ಖಂಡನೀಯ ಎಂದು ರೈತ ಮುಖಂಡ ಶಶಿಕಾಂತ ಗುರೂಜಿ ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗಮ ಸಕ್ಕರೆ ಕಾರ್ಖಾನೆಗೆ 27 ಕೋಟಿ ಸಾಲ ಮಂಜೂರು ಮಾಡುವುದಾಗಿ ಡಿಸಿಸಿ ಬ್ಯಾಂಕ್ ಸಭೆಯಲ್ಲಿ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನಿರ್ಧಾರ ಕೈಗೊಂಡಿರುವುದನ್ನು ಟೀಕಿಸಿದರು. ಇದೇ ವೇಳೆ ಬೆಳಗಾಂ ಶುಗರ್ಸ್ ಸಂಸ್ಥೆಯೂ 16 ಕೋಟಿ …

Read More »

ಬಸವ ಜಯಂತಿ ಉತ್ಸವ ಪ್ರಯುಕ್ತ 19 ರಂದು “ಸಮಾನತೆಗಾಗಿ” ಬೃಹತ್ ಬೈಕ್ ರ್ಯಾಲಿ

ಬೆಳಗಾವಿ: ಬಸವ ಜಯಂತಿ ನಿಮಿತ್ತ ಇದೆ ರವಿವಾರ ದಿನಾಂಕ 19 ರಂದು ಬೃಹತ್ ಬೈಕ್ ರ್ಯಾಲಿಯನ್ನು ಬೆಳಗಾವಿ ಮಹಾನಗರದಲ್ಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ-2026 ಸಮಿತಿಯ ಸಂಚಾಲಕ ಬಸವರಾಜ ರೊಟ್ಟಿ ಹೇಳಿದರು. ಪತ್ರಿಕಾ ಪರಿಷತ್ತಿನಲ್ಲಿ ಮಾತನಾಡಿದ ಅವರಿಂದು ಬೆಳಗಿನ 8:00 ಗಂಟೆಗೆ ಶಹಾಪೂರ ಗೋವಾವೇಸ ಬಸವೇಶ್ವರ ಸರ್ಕಲ್ ದಿಂದ ಆರಂಭವಾಗುವ ಈ ರ್ಯಾಲಿಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬೈಕ್ ಗಳು ಮತ್ತು ಕಾರುಗಳು ಭಾಗಿಯಾಗಲಿವೆ. ಬಸವಣ್ಣನವರು ಸಾರಿದ …

Read More »

ಜಗತ್ತಿನ ಹಸಿವು ತಣಿಸುವ ಅನ್ನದಾತನಿಗೆ ಸರ್ಕಾರದ ಅಸಡ್ಡೆ; ಹೋರಾಟಕ್ಕಿಳಿದ ರೈತ ಸಂಘ

ಬಿಸಿಲು ಮಳೆ ಎನ್ನದೇ ತನ್ನ ಜಮೀನಿನಲ್ಲಿ ಶ್ರಮವಹಿಸಿ ಜಗತ್ತಿನ ಹಸಿವು ತಣಿಸುವ ಕಾಯಕ ಅನ್ನದಾತನದ್ದು.‌ ಆದ್ರೆ ಅನ್ನದಾತನಿಗೆ ಅದೇಕೊ ಕಷ್ಟಗಳ ಸರಮಾಲೆ ತಪ್ಪಿದ್ದಲ್ಲಾ. ತನಗೆ ಏನೇ ಬೇಕಾದ್ರೂ ರೈತ ತಾನು ಹೋರಾಟ ಮಾಡಿಯೇ ಪಡೆಯಬೇಕಾಗಿರೋದು ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಮತ್ತೆ ರೈತರ ವಿವಿಧ ಸಮಸ್ಯೆ ಈಡೇರಿಸಲು ರೈತ ಸಂಘದಿಂದ ಅಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್. ಹೌದು…ರೈತರಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು …

Read More »