ಹಾವೇರಿ: ನಿಶ್ಚಿತಾರ್ಥದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಯುವತಿಯು ರಾತ್ರೋರಾತ್ರಿ ಯುವಕನೋರ್ವನ ಜೊತೆ ಪರಾರಿಯಾಗಿ ಶಾಕ್ ನೀಡಿದ ಘಟನೆ ಹಾನಗಲ್ ತಾಲ್ಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಈ ಘಟನೆಯು ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಗ್ರಾಮದ ನಿವಾಸಿ ಶಂಕ್ರಮ್ಮ ಇಂದು (ಏ.26 ರಂದು) ನಿಶ್ಚಿತಾರ್ಥ ಕಾರ್ಯಕ್ರಮ ನಿಗದಿಯಾಗಿತ್ತು. ಕುಟುಂಬಸ್ಥರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಮೇ 11ಕ್ಕೆ ವಿವಾಹ ಮುಹೂರ್ತ ಕೂಡ ನಿಶ್ಚಯವಾಗಿತ್ತು. ಆದರೆ ನಿಶ್ಚಿತಾರ್ಥದ …
Read More »ಪ್ರೀತಿಯ ವಿದ್ಯಾರ್ಥಿಗಳೆ ನಿಮಗೆ ವಿದಾಯ ಎಂದು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಮಡಿಕೇರಿ: ಪ್ರೀತಿಯ ವಿದ್ಯಾರ್ಥಿಗಳಿಗೆ ಅಂತಿಮ ವಿದಾಯ ಹೇಳಿ ಶಿಕ್ಷಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೋಹಿಣಿ (51) ಆತ್ಮಹತ್ಯೆಗೆ ಶರಣಾದ ಶಿಕ್ಷಕಿ. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ಕೋವಿಯಿಂದ ಗುಂಡು ಹೊಡೆದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.
Read More »ಬೆಳಗಾವಿಯಲ್ಲಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ – ಮಗಳು ಓದುತ್ತಿದ್ದ ಮೊದಲ ಮಹಡಿಯೇ ಟಾರ್ಗೆಟ್
ಬೆಳಗಾವಿ: ನಗರದ ಮಂಡೋಳಿ ರಸ್ತೆಯಲ್ಲಿರುವ ವಕೀಲೆಯೊಬ್ಬರ ಮನೆ ಮೇಲೆ ಗುಂಡಿನ ದಾಳಿ ನಡೆದಿರುವ ಆತಂಕಕಾರಿ ಘಟನೆ ನಡೆದಿದೆ. ವಕೀಲೆ ಪೂಜಾ ಕಾಕತಕರ್ ಮನೆ ಮೇಲೆ ದಾಳಿ ನಡೆದಿದೆ. ಏ.25ರ ರಾತ್ರಿ 1ರಿಂದ 2 ಗಂಟೆಯ ಸುಮಾರಿನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ. ಮನೆಯ ಮೊದಲ ಮಹಡಿಯಲ್ಲಿ ಪುತ್ರಿ ಓದುತ್ತಿದ್ದಳು. ಈ ವೇಳೆ ದಾಳಿ ನಡೆದಿದೆ. ಮನೆಯ ಗ್ಲಾಸ್ ಮೇಲೆ ಫೈರಿಂಗ್ …
Read More »ಸಚಿವರ ತವರಲ್ಲೇ ಸರಾಯಿ ಸದ್ದು: ಬಯಲಾಯ್ತು ಮಂತ್ರಿ ಆಪ್ತರ ಅಸಲಿ ಮುಖವಾಡ!
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ 6 ಗಂಟೆಗೆ ಮದ್ಯದ ಮಳೆ! 🍻 ಸಣ್ಣದುದಾರರಿಗೆ ಹಪ್ತಾ ಕಾಟ, ಮಂತ್ರಿ ಬೆಂಬಲಿಗರಿಗೆ ರಾಜಾತಿಥ್ಯ? ಅಚ್ಚರಿಯ ವಿಷಯ ಅಂದ್ರೆ, ಈ ಅಕ್ರಮದಲ್ಲಿ ಪತ್ರಕರ್ತನೂ ಭಾಗಿ! ಮಾಧ್ಯಮ ರಂಗಕ್ಕೆ ಅಂಟಿದ ಈ ಸರಾಯಿ ಕಳಂಕದ ಕರಾಳ ಸತ್ಯವನ್ನು ‘ಅಸಲಿ ಸುದ್ದಿ’ ತಂಡ ರಿಯಾಲಿಟಿ ಚೆಕ್ ನಡೆಸಿ ಬಯಲಿಗೆಳೆದಿದೆ. ಸಚಿವರ ಕೃಪಾಕಟಾಕ್ಷ ಯಾರ ಮೇಲಿದೆ? ಹಪ್ತಾ ಹಣ ಎಲ್ಲಿಗೆ ತಲುಪುತ್ತಿದೆ? ಸಚಿವರ ಜಿಲ್ಲೆಯ ಈ …
Read More »ʻಕೈʼಗೆ ಶಕ್ತಿ ತುಂಬಿದ ಅಹಿಂದ: ಸಚಿವ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ: ಅಹಿಂದ ಸಂಘಟನೆಯು ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಟ್ಟಿದ್ದು, ಮುಂದೆಯೂ ಶೋಷಿತ ವರ್ಗಗಳ ಹಿತರಕ್ಷಣೆ ಮಾಡುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಗೋಕುಲ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಅಹಿಂದ ಕರ್ನಾಟಕ ಹೋರಾಟ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಅಹಿಂದ 25 ಹೋರಾಟ ಸಾಧನೆ, ಸಂಕಲ್ಪ ಕುರಿತಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ’ ವನ್ನು ಉದ್ಘಾಟಿಸಿ ಅವರು ಮಾತನಾಡಿ, ಅಹಿಂದ …
Read More »ಉಗಾರ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿ – ಲಗಮವ್ವ ದೇವಿಯ ಭವ್ಯ ಜಾತ್ರೆ: ಸ್ವಚ್ಛತೆಯ ಮೂಲಕ ಭಕ್ತಿ ಮೆರೆದ ‘ಉಗಾರ ಸ್ವಚ್ಛತಾ ಅಭಿಯಾನ’ ತಂಡ!
ಉಗಾರ ಪಟ್ಟಣದಲ್ಲಿ ಶ್ರೀ ಲಕ್ಷ್ಮೀದೇವಿ – ಲಗಮವ್ವ ದೇವಿಯ ಭವ್ಯ ಜಾತ್ರೆ: ಸ್ವಚ್ಛತೆಯ ಮೂಲಕ ಭಕ್ತಿ ಮೆರೆದ ‘ಉಗಾರ ಸ್ವಚ್ಛತಾ ಅಭಿಯಾನ’ ತಂಡ! ಉಗಾರ ಪಟ್ಟಣದಲ್ಲಿ ಅದ್ಧೂರಿಯಾಗಿ ಜರುಗಿದ ದೇವಿಯ ಜಾತ್ರೆ. ದೇವಿಗೆ ಹರಕೆ ತೀರಿಸಲು ದೀರ್ಘ ನಮಸ್ಕಾರ ಹಾಕಿದ ಸಾವಿರಾರು ಭಕ್ತರು. ಕೃಷ್ಣಾ ನದಿ ತೀರದಲ್ಲಿ ಸತತ ಸ್ವಚ್ಛತಾ ಕಾರ್ಯ ನಡೆಸಿದ ಸಂಘಟನೆ. ಜಾತ್ರೆಯ ವಿಶೇಷ ಆಕರ್ಷಣೆಯಾಗಿ ಗಮನ ಸೆಳೆದ ಜಾನುವಾರು ಸಂತೆ. ಭಕ್ತರ ಸಂಕಷ್ಟಗಳನ್ನು ದೂರಮಾಡಿ ಮನದ …
Read More »ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು: ಪೋಷಕರೇ ಮಕ್ಕಳ ಮೇಲೆ ನಿಗಾ ಇರಲಿ!
ಆಟವಾಡುತ್ತಿದ್ದಾಗ ಜೋಕಾಲಿ ಕುಣಿಕೆ ಬಿಗಿದು ಬಾಲಕಿ ಸಾವು: ಪೋಷಕರೇ ಮಕ್ಕಳ ಮೇಲೆ ನಿಗಾ ಇರಲಿ! ಶಿವಮೊಗ್ಗದಲ್ಲಿ ಅತ್ಯಂತ ನೋವಿನ ಸಂಗತಿಯೊಂದು ನಡೆದಿದೆ. ಬೇಸಿಗೆ ರಜೆಯ ಮೋಜಿನಲ್ಲಿದ್ದ ಕುಟುಂಬದಲ್ಲಿ ಇಂದು ಶೋಕ ಮಡುಗಟ್ಟಿದೆ. ಆಟವಾಡುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಸಣ್ಣ ಅಚಾತುರ್ಯ ಒಂಬತ್ತು ವರ್ಷದ ಬಾಲಕಿಯ ಪ್ರಾಣವನ್ನೇ ಬಲಿಪಡೆದಿದೆ. ಘಟನೆಯ ಹಿನ್ನೆಲೆ: ಶಿವಮೊಗ್ಗದ ವಿದ್ಯಾನಗರ ನಿವಾಸಿ ಪ್ರಣಮ್ಯ ಎಂಬ ಬಾಲಕಿ ರಜೆ ಕಳೆಯಲು ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಏಪ್ರಿಲ್ 20ರಂದು …
Read More »ಇಂದು SSLC ಫಲಿತಾಂಶ ಪ್ರಕಟ
ಬೆಂಗಳೂರು: ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಸುದ್ದಿಗೋಷ್ಠಿಯ ಬಳಿಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಕೋರ್ಟ್ ಆದೇಶದಂತೆ ಈ ಬಾರಿ ಹಿಂದಿ ಭಾಷೆಯ ಪರೀಕ್ಷೆಗೆ ಅಂಕ ನೀಡಲಾಗಿದೆ. ಮುಂದಿನ ವರ್ಷದಿಂದ ಗ್ರೇಡ್ ವ್ಯವಸ್ಥೆ ನಿಯಮ ಜಾರಿಗೆ ತೀರ್ಮಾನ ಮಾಡಲಾಗಿದೆ. ಹಿಂದಿಗೆ ಅಂಕ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗಿದೆ …
Read More »ವಿನಯ್ ಕುಲಕರ್ಣಿಗೆ ಜೀವಾವಧಿ |ತೀರ್ಪಿನಲ್ಲಿ ರಾಜಧರ್ಮದ ಪಾಠ – ಉಪನಿಷತ್ ಸಾರ ಉಲ್ಲೇಖ
ಬೆಂಗಳೂರು: ಮಾಜಿ ಸಚಿವ ವಿನಯ್ ಕುಲಕರ್ಣಿ ಮತ್ತು ತಂಡದವರು ಭಾಗಿಯಾಗಿರುವ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಉಪನಿಷತ್ ಉಲ್ಲೇಖಮಾಡಿ ಕಾನೂನನ್ನು ‘ಧರ್ಮʼಕ್ಕೆ ಹೋಲಿಸಿದ್ದಾರೆ. ನ್ಯಾಯಾಧೀಶರು ನೀಡಿರುವ 623 ಪುಟಗಳ ಸುದೀರ್ಘ ಆದೇಶದಲ್ಲಿ ರಾಜಧರ್ಮ ಎಂದರೆ ಏನು ಎನ್ನುವುದನ್ನು ವಿವರಿಸಿದ್ದಾರೆ. ಕಾನೂನು ಧರ್ಮವಾಗಿಯೂ, ಧರ್ಮವನ್ನು ರಾಜನನ್ನಾಗಿಯೂ ಸಮಾಜ ಸ್ವೀಕರಿಸುತ್ತದೆ. ಒಬ್ಬ ರಾಜನಾದವನು ಅಶಕ್ತರನ್ನು ಬಲಾಢ್ಯರಿಂದ ರಕ್ಷಿಸಬೇಕು ಎಂಬ ಉಪನಿಷತ್ತಿನ ಸಾರವನ್ನು …
Read More »ಕೋಮುಲ್ ಕಚೇರಿ ಮೇಲೆ ದಿಢೀರ್ ʻಲೋಕಾʼ ದಾಳಿ – ದಾಖಲೆಗಳ ಪರಿಶೀಲನೆ
ಕೋಲಾರ: ತಾಲೂಕಿನ ಬೆಳಗಾನಹಳ್ಳಿ ಬಳಿ ಇರುವ ಕೋಲಾರ ಹಾಲು ಒಕ್ಕೂಟ ಕಚೇರಿ ಮೇಲೆ ದಿಢೀರ್ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ಕಡತಗಳ ಪರಿಶೀಲನೆ ನಡೆಸಿದ್ದಾರೆ. ನಾಗರಾಜ್ ಎಂಬವವರು ನೀಡಿರುವ ದೂರನ್ನು ಆಧರಿಸಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಂವಿಕೆ ಗೋಲ್ಡನ್ ಡೈರಿ, ಸೋಲಾರ್ ಪ್ಲಾಂಟ್, ಐಸ್ ಕ್ರೀಂ ಘಟಕ, ಮೆಗಾ ಡೈರಿಗಳಲ್ಲಿ ಸಾಕಷ್ಟು ಅವ್ಯವಹಾರ ಸೇರಿದಂತೆ ಸೆ-2023ರಲ್ಲಿ ನಡೆದ ನೇಮಕಾತಿಯಲ್ಲೂ ಹಗರಣ ನಡೆದಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ …
Read More »
Laxmi News 24×7