ಬರದ ಹೊಡೆತಕ್ಕೆ ಅನ್ನದಾತ ಕಂಗಾಲು; ಪರಿಹಾರದ ಭರವಸೆ ನೀಡಿದ ಸಚಿವ ಎಂ.ಬಿ. ಪಾಟೀಲ ವಿಜಯಪುರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಯಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಈ ನಡುವೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ರೈತರ ಜಮೀನುಗಳಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದಾರೆ. ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸುವುದಾಗಿ …
Read More »ನೆಹರು ಕಾಲದಿಂದ ನಾಗೇಂದ್ರ ಕಾಲದವರೆಗೆ ಕಾಂಗ್ರೆಸ್’ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ
ನೆಹರು ಕಾಲದಿಂದ ನಾಗೇಂದ್ರ ಕಾಲದವರೆಗೆ ಕಾಂಗ್ರೆಸ್’ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಸಚಿವ ನಾಗೇಂದ್ರ ಅವರನ್ನು ಮತ್ತೆ ಮಂತ್ರಿ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ನೆಹರು ಕಾಲದಿಂದ ಆರಂಭವಾದ ಭ್ರಷ್ಟಾಚಾರ ಇಂದು ರಾಹುಲ್ ಮತ್ತು ಪ್ರಿಯಾಂಕಾ ಕಾಲದವರೆಗೂ ನದಿಯಂತೆ ಹರಿಯುತ್ತಿದೆ ಎಂದು ಅವರು ಆರೋಪಿಸಿದರು. ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ …
Read More »ಯಳ್ಳೂರು ಕೇಬಲ್ ಕಾರ್ ಯೋಜನೆ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಅಭಯ್ ಪಾಟೀಲ್ ಮನವಿ
ಯಳ್ಳೂರು ಕೇಬಲ್ ಕಾರ್ ಯೋಜನೆ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಅಭಯ್ ಪಾಟೀಲ್ ಮನವಿ ಬೆಳಗಾವಿಯ ಬಹುನಿರೀಕ್ಷಿತ ಯಳ್ಳೂರು ಕೇಬಲ್ ಕಾರ್ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ …
Read More »ಜನಸೇವೆ ನಮ್ಮ ಸಂಕಲ್ಪ – ಸರ್ವರ ಸಬಲೀಕರಣ ನಮ್ಮ ಗುರಿ.
ಸಬಲೀಕರಣದ ಹೆಜ್ಜೆಯಾಗಿ ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಣೆ ಗೋಕಾಕ ನಗರದ ಗೃಹ ಕಚೇರಿಯಲ್ಲಿ ಇಂದು ನಮ್ಮ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವಿಶೇಷಚೇತನರಿಗಾಗಿ ಶಾಸಕರ ಅನುದಾನದಡಿ ಮಂಜೂರಾದ 33 ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ವಿತರಿಸಿದರು ವಿಶೇಷಚೇತನರ ಸ್ವಾವಲಂಬನೆ, ಸುಗಮ ಸಂಚಾರ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಪುಟ್ಟ ನೆರವು ಮಹತ್ವದ ಹೆಜ್ಜೆಯಾಗಿದೆ. ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಮತ್ತು ಸ್ವಾವಲಂಬನೆಯ ಬದುಕು ದೊರೆಯಬೇಕು …
Read More »ವಾಶಿಂನಲ್ಲಿ 7 ತಿಂಗಳ ಗರ್ಭಿಣಿ ಪತ್ನಿ ಸಾವು: ಸೇನಾ ಯೋಧನ ವಿರುದ್ಧ ಕೊಲೆ ಆರೋಪ
ವಾಶಿಂನಲ್ಲಿ 7 ತಿಂಗಳ ಗರ್ಭಿಣಿ ಪತ್ನಿ ಸಾವು: ಸೇನಾ ಯೋಧನ ವಿರುದ್ಧ ಕೊಲೆ ಆರೋಪ ಮಹಾರಾಷ್ಟ್ರದ ವಾಶಿಂ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಏಳು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆರೋಪ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧನ ವಿರುದ್ಧ ಕೇಳಿಬಂದಿದೆ. ಪೊಲೀಸರ ಪ್ರಕಾರ, ಕಾರಂಜಾ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 28 ವರ್ಷದ ಸೇನಾ ಯೋಧ ಜ್ಞಾನೇಶ್ವರ ಮಡ್ನೆ ವಿರುದ್ಧ ಪ್ರಕರಣ ದಾಖಲಾಗಿದೆ. …
Read More »ಎರಡನೇ ದಿನವೂ ಮುಂದುವರೆದ ನೀಲಣ್ಣವರ ಇಡಿ ತಪಾಸಣೆ!!!
• ಶಿವಾನಂದ ನೀಲಣ್ಣವರ ಮನೆಯಲ್ಲಿ ಇಡಿ ತಪಾಸಣೆ • ಬೆಳಗಾವಿಯಲ್ಲಿ 2ನೇ ದಿನವೂ ಇಡಿ ಶೋಧ • ಶಿವಬಸವ ನಗರದ ಎಂಎಚ್ ಟವರ್‌ನಲ್ಲಿ ಪರಿಶೀಲನೆ • ಸಿಆರ್‌ಪಿಎಫ್ ಬಿಗಿ ಭದ್ರತೆಯಲ್ಲಿ ಅಧಿಕಾರಿಗಳ ಪರಿಶೀಲನೆ ಆಂಕರ್: ಬೆಳಗಾವಿಯ ಉದ್ಯಮಿ ಶಿವಾನಂದ ನೀಲಣ್ಣವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪಡಿ ಇಡಿ ಎಫ್‌ಐಆರ್ ದಾಖಲಿಸಿದ್ದು,, ನಿನ್ನೆಯಿಂದಲೇ ಪರಿಶೀಲನೆ ನಡೆಸುತ್ತಿರುವ ಇಡಿ ತಂಡವು ಇಂದು ಸಹ ಶೋಧ ಕಾರ್ಯ ಚುರುಕುಗೊಳಿಸಿದೆ. ಬೆಳಗಾವಿಯ ಶಿವಬಸವ ನಗರದಲ್ಲಿರುವ …
Read More »ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿರುವ ಬಂಗಾರಿ
ಬೆಳಗಾವಿ :ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಇದೀಗ ಬಯಲಾಗಿದ್ದು, ಮೃತನ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಅವರನ್ನು ಖಡಕಲಾಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತನನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ. …
Read More »ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು
ಜುನ್ನೆ ಬೆಳಗಾವಿ ಶಾಲೆ ನಂ. 33ರ ಆವರಣದಲ್ಲಿದ್ದ ಜೀರ್ಣಾವಸ್ಥೆಯ ನೀರಿನ ಟ್ಯಾಂಕ್ ತೆರವು: ನಿರಾಳರಾದ ವಿದ್ಯಾರ್ಥಿಗಳು-ಪೋಷಕರು • ಜುನ್ನೆ ಬೆಳಗಾವಿ ಶಾಲೆಯ ಟ್ಯಾಂಕ್ ತೆರವು • ಏಳೆಂಟು ವರ್ಷಗಳ ಹೋರಾಟಕ್ಕೆ ಸಿಕ್ಕಿತು ಜಯ • ಎಚ್ಚೆತ್ತುಕೊಂಡ ಆಡಳಿತದಿಂದ ತಕ್ಷಣದ ಕ್ರಮ ಆರಂಭ • ಹರ್ಷ ವ್ಯಕ್ತಪಡಿಸಿದ ಪೋಷಕರು ಮತ್ತು ಗ್ರಾಮಸ್ಥರು ಜುನ್ನೆ ಬೆಳಗಾವಿಯ ಮರಾಠಿ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಸಂಖ್ಯೆ 33ರ ಆವರಣದಲ್ಲಿದ್ದ ಅತ್ಯಂತ ಅಪಾಯಕಾರಿ ನೀರಿನ …
Read More »ವಡಗಾವನ ಶ್ರೀ ಮಂಗಾಯಿ ದೇವಿ ಜಾತ್ರೆ: ಕುಮಾರಿಕೆಯರಿಗೆ ಉಚಿತ ಶೈಕ್ಷಣಿಕ ಸಾಮಗ್ರಿ ವಿತರಣೆ
• ವಡಗಾವ್ ಮಂಗಾಯಿ ದೇವಿ ವಾರ್ಷಿಕ ಜಾತ್ರೆ. • ಕುಮಾರಿಕೆಯರಿಂದ ದೇವಿಗೆ ವಿಶೇಷ ಜಲಾಭಿಷೇಕ ಪೂಜೆ. • ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಪುಸ್ತಕ ವಿತರಣೆ. • ಮಂಗಳವಾರದಿಂದ ಮುಖ್ಯಾಚರಣೆ: ಸಿಸಿಟಿವಿ ಭದ್ರತೆ ಹೆಚ್ಚಳ. ವಡಗಾವನ ಗ್ರಾಮದೇವತೆ ಶ್ರೀ ಮಂಗಾಯಿ ದೇವಿಯ ವಾರ್ಷಿಕ ಜಾತ್ರೆಯ ಕೊನೆಯ ದಿನದ ಪೂಜಾ ಕೈಂಕರ್ಯಗಳು ಸಾಂಪ್ರದಾಯಿಕ ಹಾಗೂ ಭಕ್ತಿಪೂರ್ವಕ ವಾತಾವರಣದಲ್ಲಿ ನೆರವೇರಿದವು. ನೂರಾರು ವರ್ಷಗಳ ಪರಂಪರೆಯಂತೆ ಕುಮಾರಿಕೆಯರು ದೇವಿಗೆ ಜಲಾಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. …
Read More »ವರ್ಕ್ ಫ್ರಂ ಹೋಮ್ ಹೆಸರಿನಲ್ಲಿ ಕೋಟಿ ಕೋಟಿ ವಂಚನೆ ಆರೋಪ: ಖತರ್ನಾಕ್ ದಂಪತಿ ಬಂಧನ
ಚಿಕ್ಕಬಳ್ಳಾಪುರ: ಮನೆಯಿಂದಲೇ ಕೆಲಸ ಮಾಡಿ ಉತ್ತಮ ಆದಾಯ ಗಳಿಸಬಹುದು ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂಪಾಯಿ ಹಣವನ್ನು ಠೇವಣಿಯಾಗಿ ಪಡೆದು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ವರ್ಕ್ ಫ್ರಂ ಹೋಮ್’ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕರ್ಷಕ ಜಾಹೀರಾತು ಹಾಗೂ ರೀಲ್ಸ್‌ಗಳನ್ನು ಹರಿಬಿಟ್ಟು ಸಾವಿರಾರು ಜನರನ್ನು ಸೆಳೆಯುತ್ತಿದ್ದ ಆರೋಪಿಗಳಿಂದ ಭಾರೀ ಪ್ರಮಾಣದ ವಂಚನೆ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರನ್ನು ಕಿರಣ್ ಮತ್ತು ಅವರ ಪತ್ನಿ …
Read More »
Laxmi News 24×7