ಬೆಂಗಳೂರು: ಚಿನ್ನಯ್ಯನ ಜೊತೆಗೆ ಮಾತನಾಡಿದ್ದು ನಿಜ, ಆತ ನನ್ನೊಂದಿಗೆ ತಮಿಳಿನಲ್ಲಿ ಮಾತನಾಡಿದ್ದ ಎಂದು ನಟ ಪ್ರಕಾಶ್ ರಾಜ್ ಒಪ್ಪಿಕೊಂಡರು.
ಬೆಂಗಳೂರಿನ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ತನ್ನ ಹೆಸರು ತಳುಕು ವಿಚಾರಕ್ಕೆ ಸ್ಪಷ್ಟನೆ ನೀಡಿದರು.
ಕೋರ್ಟ್ ನಲ್ಲಿ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಗಿರೀಶ್ ಮಟ್ಟಣ್ಣನವರ್ ಹೇಳಿದ ರೀತಿಯಲ್ಲಿ ಕೇಳಿದ್ರೆ ನಾನು ನಿನ್ನ ಅಪ್ಪಿಕೊಳ್ತಿನಿ ಅಂದಿದ್ದೆ ಅಂತ ಹೇಳಿದ್ದಾನೆ. ಕೇರಳದಿಂದ ಹಣ ಬಂದಿದೆ ಅಂತಲೂ ಹೇಳಿ, ನನ್ನ ಹೆಸರು ಉಲ್ಲೇಖ ಮಾಡಿದ್ದಾನೆ. ಆದ್ರೆ ನಾನು ಯಾವತ್ತೂ ಧರ್ಮಸ್ಥಳಕ್ಕೆ ಹೋಗಿಲ್ಲ, ಗಿರೀಶ್ ಮಟ್ಟನವರ್ ಅವರನ್ನ ಭೇಟಿಯಾಗಿಲ್ಲ ಎಂದು ತಿಳಿಸಿದರು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹಾಕಿದ್ದಾರೆ ಅಂತಾ ಮಾತುಗಳು ಕೇಳಿಬಂದವು. ನಾನು ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಎಸ್ಐಟಿ ರಚನೆಗೆ ಕೇಳಿದ್ದೆ. ಈ ಟೈಮಲ್ಲಿ ಒಬ್ಬ ವ್ಯಕ್ತಿ ಕರೆ ಮಾಡಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಾತಾಡಬೇಕು ಅಂದ. ನನ್ನ ಜೊತೆಗೆ ತಮಿಳಿನಲ್ಲಿ ಮಾತಾಡಿದ, ಮೊಹಂತಿ ಸರ್ ಗೆ ಕರೆ ಮಾಡಿ ಆ ವಿಚಾರವನ್ನ ಹೇಳಿದ್ದೇನೆ. ಚಿನ್ನಯ್ಯ ಮಂಡ್ಯದವನು ಅಂತಾ ಗೊತ್ತು, ಬಟ್ ಇವನು ತಮಿಳಿನಲ್ಲಿ ಮಾತಾಡಿದ್ದಾನೆ ಎಂದು ಸ್ಪಷ್ಟಪಡಿಸಿದರು.
ಚಿನ್ನಯ್ಯ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ. ನಾನು ಏನೇ ಪ್ರಶ್ನೆ ಕೇಳಿದ್ರೂ ಹಿಂದೂ ವಿರೋಧಿ ಅಂತಾರೆ. ಈ ವಿಚಾರ ಇನ್ನೂ ಕೋರ್ಟ್ ನಲ್ಲಿದೆ. ನಾನ್ ಧರ್ಮಸ್ಥಳಕ್ಕೆ ಹೋಗೇ ಇಲ್ಲ. ನಾನ್ಯಾಕೆ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಮಾಡಲಿ? ನನಗೆ ಚಿನ್ನಯ್ಯ ಫೋನ್ ಮಾಡಿದ್ದು ನಿಜ, ಆ ವಿಷಯವನ್ನ ಪ್ರಣವ್ ಮೊಹಂತಿ ಸರ್ಗೆ ಹೇಳಿದ್ದೇನೆ ಎಂದು ತಿಳಿಸಿದರು.
ಚಿನ್ನಯ್ಯ ಅಂತ ಪರಿಚಯ ಮಾಡ್ಕೊಂಡ ವ್ಯಕ್ತಿ, ನಂಗೆ ಕರೆ ಮಾಡಿ ನಿನ್ನ ಮೀಟ್ ಮಾಡಬೇಕು ಅಂದ. ಆಗ ನಾನ್ಯಾಕೆ ನಿನ್ನ ಮೀಟ್ ಮಾಡಬೇಕು, ನೀನ್ ಹೇಳಬೇಕು ಅಂತ ಇದೀಯೋ ಅದನ್ನ ರೆಕಾರ್ಡ್ ಮಾಡಿ ಕಳಸು ಅಂತ ಹೇಳಿದ್ದೆ. ಪ್ರಣವ್ ಮೋಹಂತಿ ಸರ್ ಇದಾರೆ ಅವರನ್ನ ಭೇಟಿ ಮಾಡು ಅಂದಿದ್ದೆ ಎಂದು ಸ್ಪಷ್ಟನೆ ನೀಡಿದರು.
Laxmi News 24×7