Breaking News

Uncategorized

ಅಪ್ರಾಪ್ತ ವಾಹನ ಚಲಾವಣೆಗೆ ತಾಯಿಗೆ ದಂಡ

ಚಿಕ್ಕೋಡಿ : ಬಾಲಕನಿಗೆ ದ್ವಿಚಕ್ರ ವಾಹನ ಓಡಿಸಲು ಅವಕಾಶ ನೀಡಿದ ನಿಪ್ಪಾಣಿ ಪಟ್ಟಣದ ನಿವಾಸಿ ಸುಪ್ರಿಯಾ ವಿಠಲ ಬಾಗೆ ಅವರಿಗೆ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯ ಶುಕ್ರವಾರ 25 ಸಾವಿರ ರೂ.ದಂಡ ವಿಧಿಸಿದೆ. ಈಚೆಗೆ ಬಾಲಕನನ್ನು ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾವಣೆ ಮಾಡಿದ್ದರ ಕುರಿತು ನಿಪ್ಪಾಣಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕ ವಾಹನ ಓಡಿಸಲು ಅವಕಾಶ ನೀಡಿದ ತಾಯಿಗೆ ದಂಡ ವಿಧಿಸಿ …

Read More »

ಲೋಕಸಭೆ ಬಳಿಕ ಇಂದು ರಾಜ್ಯಸಭೆಯಲ್ಲೂ ಕೇರಳದ ಹೆಸರು ಮರುನಾಮಕರಣ ಮಸೂದೆ ಅಂಗೀಕಾರ

ನವದೆಹಲಿ: ಕೇರಳ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಮರು ನಾಮಕರಣ ಮಾಡುವ ಮಸೂದೆಯೂ ಲೋಕಸಭೆ ಬಳಿಕ ಬುಧವಾರ(ಆ. 12) ರಾಜ್ಯಸಭೆಯಲ್ಲೂ ವಿರೋಧ ಪಕ್ಷದ ಸದಸ್ಯರ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ. ಮಂಗಳವಾರ ‘ಕೇರಳ(ಹೆಸರು ಬದಲಾವಣೆ) ಮಸೂದೆ-2026’ ಅನ್ನು ಯಾವುದೇ ಚರ್ಚೆಯಿಲ್ಲದೆ ಲೋಕಸಭೆ ಅಂಗೀಕರಿಸಿತ್ತು. 2024ರಲ್ಲಿ ಕೇರಳ ವಿಧಾನಸಭೆಯು ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ನಿರ್ಣಯವನ್ನು ಅಂಗೀಕರಿಸಿತು. ರಾಜ್ಯವನ್ನು ಸಾಮಾನ್ಯವಾಗಿ ಮಲಯಾಳಂನಲ್ಲಿ ‘ಕೇರಳಂ’ ಎಂದು ಕರೆಯಲಾಗುತ್ತದೆಯಾದರೂ, ಸಂವಿಧಾನದಲ್ಲಿ …

Read More »

ಲಾರಿ-ಬೈಕ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದ ಬೆಲ್ಲದ-ಬಾಗೇವಾಡಿ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸವಾನ್ನಪ್ಪಿದ್ದಾನೆ. ಕಬ್ಬೂರು ಪಟ್ಟಣದ ಹಿರೇಕುರಬರ ತೋಟದ ನಿವಾಸಿ ಪ್ರವೀಣ ರಾಮಪ್ಪ ಹಿರೇಕುರಬರ (35) ಸಾವನ್ನಪ್ಪಿದ ಬೈಕ್ ಸವಾರ. ಮೃತ ಪ್ರವೀಣ ಅವರು ಪಟ್ಟಣದಿಂದ ಮನೆಗೆ  ಸಾಮಗ್ರಿಗಳನ್ನು ಖರೀದಿಸಿ ತಮ್ಮ ಬೈಕ್‌ನಲ್ಲಿ ತೋಟದ ಮನೆಗೆ ಹಿಂತಿರುಗುತ್ತಿದ್ದರು. ಅಪಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ.‌ ವಿಷಯ ತಿಳಿಯುತ್ತಿದ್ದಂತೆಯೇ …

Read More »

ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ: 43 ಬೈಕ್ ವಶಕ್ಕೆ

ಬೆಳಗಾವಿ: ಕಳೆದ ಒಂದು ತಿಂಗಳ ಹಿಂದೆ  ನಡೆದಿದ್ದ ಬೈಕ್ ಕಳ್ಳತನವೊಂದರ ಪ್ರಕರಣದ ಬೆನ್ನತ್ತಿದ್ದ ಕಿತ್ತೂರು ಪೋಲಿಸರು ಸದ್ಯ ಅಂತರ್ ಜಿಲ್ಲಾ ಬೈಕ್ ಕಳ್ಳನನ್ನ ಬಂಧಿಸುವಲ್ಲಿ ಯಶಸ್ವಿ ಆಗಿದ್ದು, ಕಳ್ಳನಿಂದ 30 ಲಕ್ಷ ರೂ. ಮೌಲ್ಯದ 43 ಬೈಕ್‌ಗಳು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ,ಗದಗ ಮತ್ತು ಉತ್ತರ ಕನ್ನಡ ಜಿಲ್ಲೆ ಸೇರಿ ಹಲವು ಕಡೆ ಹೀರೋ ಸ್ಪ್ಲೆಂಡರ್ ಬೈಕ್ ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳ ಕೊನೆಗೂ …

Read More »

ಬೆಳಗಾವಿ ಪಾಲಿಕೆಯ 4 ಸ್ಥಾಯಿ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ 24ನೇ ಅವಧಿಗೆ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಬುಧವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 28 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. 28 ಸದಸ್ಯರ ಸ್ಥಾನಗಳಿಗೆ 28 ನಾಮಪತ್ರಗಳ ಸಲ್ಲಿಕೆಯಾಗಿತ್ತು. ಹೆಚ್ಚುವರಿಯಾಗಿ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿರಲಿಲ್ಲ ಮತ್ತು ಯಾರೂ ನಾಮಪತ್ರಗಳನ್ನು ಹಿಂಪಡೆಯಲಿಲ್ಲ ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಹಾಗೂ ಮಹಾನಗರ ಪಾಲಿಕೆಯ ಚುನಾವಣಾ ಅಧ್ಯಕ್ಷಾಧಿಕಾರಿಗಳಾಗಿದ್ದ ಕೆ.ಎಂ. ಜಾನಕಿ ಅವರು. ಪ್ರಕ್ರಿಯೆಗಳನ್ನು ನಡೆಸಿ ಸದಸ್ಯರ ಅವಿರೋಧ ಆಯ್ಕೆಯ …

Read More »

ಮಹಿಳೆ ಅನುಮಾನಾಸ್ಪದ ಸಾವು – ಗಂಡನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ

ಹಾವೇರಿ: ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ನೇಣಿಗೆ ಶರಣಾಗಿದ್ದು, ಗಂಡನ ಮನೆಯ ಸದಸ್ಯರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಗಂಡನ ಮನೆಯ ಮುಂದೆ ಮಹಿಳೆಯ ಮೃತದೇಹ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಹಾವೇರಿ  ಜಿಲ್ಲೆ ಹಾನಗಲ್  ತಾಲೂಕಿನ ಕಾಲ್ವೇಕಲ್ಲಾಪೂರ ಗ್ರಾಮದಲ್ಲಿ ನಡೆದಿದೆ. ನೀಲಮ್ಮ ನೀರಲಗಿ (24) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ. ಕಳೆದ ಮೂರು ತಿಂಗಳ ಹಿಂದೆ ಗಂಡ ಶಿವಾನಂದ ಸಾವನ್ನಪ್ಪಿದ್ದ. ಆಸ್ತಿ ವಿಚಾರವಾಗಿ ಗಂಡನ ಮನೆಯವರು ಮಹಿಳೆಯನ್ನು ಕೊಲೆ ಮಾಡಿದ್ದಾರೆ ಎಂದು …

Read More »

ಭೀಮನ ಅಮವಾಸ್ಯೆ ದಿನವೇ ಗಂಡನ ಕಥೆ ಮುಗಿಸಿದ ಪತ್ನಿ – ಬಳಿಕ ಪೊಲೀಸರಿಗೆ ಶರಣು

ಕೋಲಾರ: ಭೀಮನ ಅಮವಾಸ್ಯೆ ದಿನ ಗಂಡನ ಪೂಜೆ ಮಾಡುವ ಬದಲು ಆತನನ್ನೇ ಪತ್ನಿ ಇಹಲೋಕಕ್ಕೆ ಕಳಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ನಡೆದಿದೆ. ಮೃತ ಪತಿ ನಾರಾಯಣಸ್ವಾಮಿ (68) ಹಾಗೂ ಹಂತಕಿ ಪತ್ನಿ ಜಗದಾಂಭ (58) ಎನ್ನಲಾಗಿದೆ. ಇಬ್ಬರ ಮಧ್ಯೆ ಅಸಮಾಧಾನ ಊಂಟಾಗಿ ಇಬ್ಬರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಆದರೆ ಕಳೆದ ಎರಡು ಮೂರು ದಿನದಿಂದ ಹಣಕ್ಕಾಗಿ ಪುಸಲಾಯಿಸಿ ಪತ್ನಿ ಪತಿಯನ್ನು ತೋಟದ ಮನೆಗೆ ಕರೆತಂದಿದ್ದಳು. ಭೀಮನ ಅಮವಾಸ್ಯೆಯ …

Read More »

ಪ್ರಕಾಶ್ ರಾಜ್ 4 ವರ್ಷದಿಂದ ವಿಳಾಸದಲ್ಲಿ ನೆಲೆಸಿಲ್ಲ, ಎಸ್‌ಐಆರ್‌ ಆರೋಪ ಸತ್ಯಕ್ಕೆ ದೂರ: ಕೇಂದ್ರ ನಗರ ಪಾಲಿಕೆ ಸ್ಪಷ್ಟನೆ

ಬೆಂಗಳೂರು: ಮತದಾರರ ಪಟ್ಟಿಯಿಂದ  ತಮ್ಮ ಹೆಸರು ಕೈಬಿಡಲಾಗಿದೆ ಎಂದು ವಿಡಿಯೋ ಮೂಲಕ ಆರೋಪ ಮಾಡಿದ್ದ ನಟ ಪ್ರಕಾಶ್ ರಾಜ್ ಅವರ ಹೇಳಿಕೆಯನ್ನು ಬೆಂಗಳೂರು ಕೇಂದ್ರ ನಗರ ಪಾಲಿಕೆ ತಳ್ಳಿಹಾಕಿದ್ದು, ಆರೋಪಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ. ಪ್ರಕಾಶ್‌ ರಾಜ್‌ ಅವರ ಆರೋಪವನ್ನು ಆಯುಕ್ತ ಜಗದೀಶ್ ಅವರು ಸುದೀರ್ಘ ಪರಿಶೀಲನೆ ನಡೆಸಿ ಹೇಳಿಕೆ ನೀಡಿದ್ದಾರೆ. ಪ್ರಕಾಶ್ ರಾಜ್ ಅವರು ತಮ್ಮ ನೋಂದಾಯಿತ ವಿಳಾಸದಲ್ಲಿ ವಾಸವಾಗಿರದ ಕಾರಣ …

Read More »

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಸ್ಟ್ರೈಕ್‌ – ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಸಂಚಾರ ಸ್ಥಗಿತ?

ಬೆಂಗಳೂರು: ಕತ್ರಿಗುಪ್ಪೆಯ ಕಾಮಾಕ್ಯ ಎಲೆಕ್ಟ್ರಿಕಲ್ ಡಿಪೋ 13ರಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಚಾಲಕರ ಪ್ರತಿಭಟನೆ ನಡೆಸಿದ್ದಾರೆ. ಇದರ ಪರಿಣಾಮ 100ಕ್ಕೂ ಹೆಚ್ಚು ಬಿಎಂಟಿಸಿ  ಇವಿ ಬಸ್‌ಗಳ ಕಾರ್ಯಚರಣೆ ಸ್ಥಗಿತಗೊಂಡಿತ್ತು. ಮಾತುಕತೆ ಬಳಿಕ ಬಸ್‌ ಸೇವೆ ಪುನರಾರಂಭಗೊಂಡಿದೆ.ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಚಾಲಕರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಬೇರೆ ಡಿಪೋಗಳಲ್ಲಿ ಚಾಲಕರಿಗೆ ದಿನಕ್ಕೆ 950 ರೂ. ನೀಡಲಾಗುತ್ತಿದೆ. ಆದರೆ ನಮಗೆ 850 ರೂ. ನಿಗದಿ ಮಾಡಲಾಗಿದೆ. ಹೀಗಾಗಿ ನಮಗೂ 950 …

Read More »

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ – ಜೈಲಾಧಿಕಾರಿ ಸಸ್ಪೆಂಡ್, SPಗೆ ಶೋಕಾಸ್ ನೋಟಿಸ್

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ  ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಕೇಸ್ ಸಂಬಂಧ ಜೈಲಧಿಕಾರಿಯನ್ನು ಸಸ್ಪೆಂಡ್ ಮಾಡಿ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅನ್ನು ಸಸ್ಪೆಂಡ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಖೈದಿಗಳು ಧರಿಸುವ ಬಿಳಿ ಬಟ್ಟೆ ಧರಿಸ್ತಿರಲಿಲ್ಲ. ಇದೀಗ ಅಂಡ್ರಾಯ್ಡ್ ಮೊಬೈಲ್ ಸಹ ಸಿಕ್ಕಿದೆ. ಹೀಗಾಗಿ ಕರ್ತವ್ಯ ಲೋಪದ ಕಾರಣ ಕೇಳಿ ಜೈಲು …

Read More »