ಘಟಪ್ರಭಾ: ಬೈಕ್ ಗಳನ್ನು ಕಳುವು ಮಾಡುತ್ತಿದ್ದ ಆರೋಪಿಯೊಬ್ಬನ್ನು ಘಟಪ್ರಭಾ ಪೊಲೀಸರು ಬಂಧಿಸಿದ್ದಾರೆ. ಇಷ್ಟಕ್ಕೂ ಈತನ ಬಳಿಯಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರಿ ಒಂದೆರಡು ಬೈಕ್ ಗಳಲ್ಲ. ಬರೊಬ್ಬರಿ 11 ಬೈಕ್ ಗಳು ! ಪೊಲೀಸರು ಈತನನ್ನು ವಿಚಾರಣೆಗೆ ಗುರಿಪಡಿಸಿದ್ದು ಘಟಪ್ರಭಾ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Read More »ನವದೆಹಲಿ: ಭ್ರಷ್ಟ ಸಚಿವರಿಗೆ ಕೇಜ್ರಿವಾಲ್ ಬೆಂಬಲ ನೀಡುತ್ತಿದ್ದಾರೆ ಎಂದ ಅನುರಾಗ್ ಠಾಕೂರ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಭ್ರಷ್ಟ ಸಚಿವರನ್ನು ಪೋಷಿಸುತ್ತಿದ್ದಾರೆ ಎಂದು ಆರೋಪಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ಕೇಜ್ರಿವಾಲ್ ಅವರಿಗೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ. ಕೇಜ್ರಿವಾಲ್ ಅವರ ಭ್ರಷ್ಟ ಸಚಿವರು ಕೂಡ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು. ಕೇಜ್ರಿವಾಲ್ ಸರ್ಕಾರವು ಮದ್ಯ ಮಾಫಿಯಾಕ್ಕೆ ಲಾಭಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಅನುರಾಗ್ ಠಾಕೂರ್, ಈ ಪ್ರಕರಣದಲ್ಲಿ ಬಿಜೆಪಿ …
Read More »ಬೆಳಗಾವಿ: ಹೆರಿಗೆ ವೇಳೆ ಮಗು ಸಾವು; ಬಿಮ್ಸ್ ಆಸ್ಪತ್ರೆಯಲ್ಲಿ ಸಂಬಂಧಿಗಳ ಪ್ರತಿಭಟನೆ
ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬದವರು ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಹೊನ್ನಿಹಾಳ ಗ್ರಾಮದ ಸುನೀತಾ ಎಂಬ ಗರ್ಭಿಣಿಯನ್ನು ವಾರದ ಹಿಂದೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿನ ವೈದ್ಯರು ಅವಳತ್ತ ಲಕ್ಷ್ಯವನ್ನೇ ನೀಡಿಲ್ಲ. ಸಿಜೇರಿಯನ್ ಮಾಡಿ ಎಂದು ಅಂಗಲಾಚಿದರೂ ವೈದ್ಯರು ಕೇಳಿಲ್ಲ ಎಂಬುದು ಕುಟುಂಬದವರ ಆರೋಪ. “ಸ್ಕ್ಯಾನಿಂಗ್ ಕೂಡ ಹೊರಗಿನಿಂದ ಮಾಡಿಸಿಕೊಂಡು ಬರಲು …
Read More »ನೇಸರಗಿ: ಅಕ್ರಮ ಸಾಗಾಟವಾಗುತ್ತಿದ್ದ ಪಡಿತರ ಅಕ್ಕಿ ವಶ
ಬೈಲಹೊಂಗಲ: ನೇಸರಗಿಯಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಅಂದಾಜು 76076 ರೂ. ಮೌಲ್ಯದ ಪಡಿತರ ಅಕ್ಕಿಯ 71 ಬ್ಯಾಗ್ ಗಳನ್ನು ಬೊಲೆರೊ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬೊಲೆರೊ ಪಿಕ್ ಅಪ್ ವಾಹನವನ್ನು ಜಪ್ತಿ ಮಾಡಿ ಕಾನೂನು ಕ್ರಮ ಮುಂದುವರಿಸಲಾಗಿದೆ
Read More »ಜೂನ್ 1ರಿಂದ ಜುಲೈ 18ರವರೆಗೆ ಸುರಿದ ಮಳೆಯಲ್ಲಿ 775 ಮನೆಗಳಿಗೆ ಹಾನಿ
ಬೆಳಗಾವಿ: ಬೆಳಗಾವಿಯಲ್ಲಿ ಭಾರೀ ಮಳೆಯಾಗಿದ್ದು, ಕಳೆದ ಎರಡು ವಾರಗಳಿಂದ ಸುರಿದ ನಿರಂತರ ಮಳೆಗೆ ಜಿಲ್ಲೆಯ ಜನ ತತ್ತರಿಸಿದ್ದಾರೆ. ಜೂನ್ 1ರಿಂದ ಜುಲೈ 18ರವರೆಗೆ ಸುರಿದ ಮಳೆಯಲ್ಲಿ 775 ಮನೆಗಳಿಗೆ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಮೂರು ಮನೆಗಳು ಸಂಪೂರ್ಣ ನೆಲಸಮವಾಗಿದೆ. ಸವದತ್ತಿಯಲ್ಲಿ 191, ಬೈಲಹೊಂಗಲದಲ್ಲಿ 112, ಕಿತ್ತೂರಿನಲ್ಲಿ 99, ರಾಮದುರ್ಗದಲ್ಲಿ 92, ಚಿಕ್ಕೋಡಿಯಲ್ಲಿ 89, ಬೆಳಗಾವಿಯಲ್ಲಿ 42 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದು, ಮಳೆ …
Read More »LOC ಮೆಹಂದಾರ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಚಾನಕ್ಕಾಗಿ ಗ್ರೆನೇಡ್ ಕೆಳಕ್ಕೆ ಬಿದ್ದು ಸ್ಫೋಟಗೊಂಡಿದೆ.
ಜಮ್ಮು ಮತ್ತು ಕಾಶ್ಮೀರ(ಜು.18): ಆಕಸ್ಮಿಕವಾಗಿ ಗ್ರೆನೇಡ್ಸ ಸ್ಫೋಟಗೊಂಡ ಕಾರಣ ಗಡಿ ರಕ್ಷಣಾ ಕರ್ತವ್ಯದಲ್ಲಿ ನಿರತರಾಗಿದ್ದ ಭಾರತೀಯ ಸೇನಯ ಕ್ಯಾಪ್ಟನ್ ಹಾಗೂ ಕಿರಿಯ ಕಮಿಷನ್ಡ್ ಆಫೀಸರ್ ನಿಧನರಾಗಿದ್ದಾರೆ. ಜಮ್ಮ ಮತ್ತು ಕಾಶ್ಮೀರದ ಪೂಂಚ್ ವಲಯದಲ್ಲಿ ಈ ಘಟನೆ ನಡೆದಿದೆ. LOC ಮೆಹಂದಾರ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಚಾನಕ್ಕಾಗಿ ಗ್ರೆನೇಡ್ ಕೆಳಕ್ಕೆ ಬಿದ್ದು ಸ್ಫೋಟಗೊಂಡಿದೆ. ಪರಿಣಾಮ ಕ್ಯಾಪ್ಟನ್ ಆನಂದ್ ಹಾಗೂ ನೈಬ್ ಸುಬೇದಾರ್ ಭಗವಾನ್ ಸಿಂಗ್ ಮೃತಪಟ್ಟಿದ್ದಾರೆ. ಮೆಹಂದಾರ್ ಸೆಕ್ಟರ್‌ನಲ್ಲಿ ಸೇನಾ ಟ್ರೋಪ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದ್ದ …
Read More »ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ
ಬಿಬಿಎಂಪಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಬಲು ಚುರುಕಾಗಿದ್ದಾರೆ. ಸಿಲಿಕಾನ್ ಸಿಟಿಯ ಗದ್ದುಗೆ ಏರಲು ಬಿಜೆಪಿ ತಾಲೀಮು ನಡೆಸುತ್ತಿದೆ. ರಾಜಧಾನಿಯಲ್ಲಿ ಸಿಎಂ ಮಿಂಚಿನ ಸಂಚಾರ ನಡೆಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕು ಸ್ಥಾಪನೆ ನೆರವೇರಿಸಿದರು. ರಾಜ್‌ಕುಮಾರ್ ರಸ್ತೆಯ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ವೃತ್ತದಲ್ಲಿ ಬಸವಧಾಮ ಉದ್ಯಾನವನದಲ್ಲಿ ಸ್ಥಾಪಿಸಲಾಗಿರುವ ಬಸವಣ್ಣ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಸಿದ್ಧಗಂಗಾ ಮಠದ …
Read More »ಈಗ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ‘ಭದ್ರತಾ ಉಸ್ತುವಾರಿ ಸಮಿತಿ’ಗಳನ್ನು ರಚಿಸಿದೆ
ಬೆಂಗಳೂರು : ನಾಡಿನ ಸೆರೆ ಹಕ್ಕಿಗಳಿಗೆ ಲಭ್ಯವಾಗುವ ರಾಜಾತಿಥ್ಯ ಸೇರಿದಂತೆ ಕಾರಾಗೃಹಗಳಲ್ಲಿ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ, ಈಗ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ‘ಭದ್ರತಾ ಉಸ್ತುವಾರಿ ಸಮಿತಿ’ಗಳನ್ನು ರಚಿಸಿದೆ. ಈ ಸಮಿತಿ ನಿಯಮಿತವಾಗಿ ಕಾರಾಗೃಹಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದು, ಆ ವೇಳೆ ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ಪತ್ತೆಯಾದರೆ ಕೂಡಲೇ ತಪ್ಪಿತಸ್ಥ ಅಧಿಕಾರಿ ಮತ್ತು …
Read More »ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ
ಮೂಡಲಗಿ: ವಡೇರಹಟ್ಟಿ ಗ್ರಾಮದಲ್ಲಿ ಶ್ರೀ ಚಂದ್ರಮ್ಮ ದೇವಿ ಸಮುದಾಯ ಭವನವನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಶಾಸಕರ ವಿಶೇಷ ಅನುದಾನ ಅಡಿಯಲ್ಲಿ ನಿರ್ಮಿಸಲಾದ ನೂತನ ಸಮುದಾಯ ಭವನವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಿ ಎಂದರು.ನಾವು ಸದಾ ನಿಮ್ಮ ಸೇವೆಗೆ ಸಿದ್ಧ, ನಾವು ನಿಮ್ಮ ಕುಟುಂಬದವರೇ ಕ್ಷೇತ್ರದಲ್ಲಿ ಯಾವುದೇ ಕಾರ್ಯ ಇದ್ದರೂ ನಿಮ್ಮೊಂದಿಗೆ ಇರುತ್ತೇವೆ ಎಂದರು.ನಂತರ ಗ್ರಾಮದ ಹಿರಿಯರು ಯುವ ನಾಯಕ …
Read More »ರಾಜ್ಯ ರೈತರಿಗೆ ಮತ್ತೊಂದು ಗುಡ್ ನ್ಯೂಸ್.
ಬೆಂಗಳೂರು: ಪ್ರಾಣಿಗಳ ರಕ್ಷಣೆಗಾಗಿ ಜುಲೈ 19ರಂದು ಬೆಳಗಾವಿ ಜಿಲ್ಲೆಗೆ 82 ‘ಪಶು ಸಂಜೀವಿನಿ’ ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಗವುದು ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಭಾನುವಾರ ಹೇಳಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪಶುಸಂಗೋಪನಾ ಇಲಾಖೆಯು ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಅನುದಾನದಲ್ಲಿ 15 ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳನ್ನು ಪ್ರಾರಂಭಿಸಿತು. ಇತರ ಪ್ರಾಣಿಗಳು ಸೇರಿದಂತೆ ಹಸುಗಳು, ಎತ್ತು, ಎಮ್ಮೆಗಳಂತಹ ಪ್ರಾಣಿಗಳಿಗೆ ಸೂಕ್ತ ಆರೋಗ್ಯ ಸೇವೆಗಳನ್ನು ಒದಗಿಸಲು ಈ …
Read More »
Laxmi News 24×7