Breaking News

ಬೆಳಗಾವಿ: ಹೆರಿಗೆ ವೇಳೆ ಮಗು ಸಾವು; ಬಿಮ್ಸ್ ಆಸ್ಪತ್ರೆಯಲ್ಲಿ ಸಂಬಂಧಿಗಳ ಪ್ರತಿಭಟನೆ

Spread the love

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬದವರು ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

 

ಹೊನ್ನಿಹಾಳ ಗ್ರಾಮದ ಸುನೀತಾ ಎಂಬ ಗರ್ಭಿಣಿಯನ್ನು ವಾರದ ಹಿಂದೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿನ ವೈದ್ಯರು ಅವಳತ್ತ ಲಕ್ಷ್ಯವನ್ನೇ ನೀಡಿಲ್ಲ. ಸಿಜೇರಿಯನ್ ಮಾಡಿ ಎಂದು ಅಂಗಲಾಚಿದರೂ ವೈದ್ಯರು ಕೇಳಿಲ್ಲ ಎಂಬುದು ಕುಟುಂಬದವರ ಆರೋಪ.

 

 

 

“ಸ್ಕ್ಯಾನಿಂಗ್ ಕೂಡ ಹೊರಗಿನಿಂದ ಮಾಡಿಸಿಕೊಂಡು ಬರಲು ಹೇಳಿದರು. ನಾರ್ಮಲ್ ಹೆರಿಗೆಯಾಗುವ ವಿಶ್ವಾಸದಲ್ಲಿ ನಾವಿದ್ದೆವು. ಆದರೆ ವೈದ್ಯರ ನಿರ್ಲಕ್ಷ್ಯದಿಂದ ದುರಂತವೇ ಆಗಿದೆ. ಸರಕಾರ ನೀಡುವ ಸೌಲಭ್ಯ ಇದೇನಾ?” ಎಂದು ಮಹಿಳೆಯ ಸಂಬಂಧಿಗಳು ಆಕ್ರೋಶದಿಂದ ಕೂಗಾಡಿದರು.

 

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾಲಕರನ್ನು ಸಮಾಧಾನಪಡಿಸಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ