ಬೆಂಗಳೂರು : ಯಡಿಯೂರಪ್ಪ ಅವರಿಗೆ ಸಂಸದೀಯ ಮಂಡಳಿಯಲ್ಲಿ ಸ್ಥಾನ ಸಿಕ್ಕಿರುವುದು ಕೇಳಿ ಸಂತೋಷ ಆಗಿದೆ, ಅವರಿಗೆ ಅಭಿನಂದನೆಗಳು ಎಂದು ಮಾಜಿ ಕೇಂದ್ರ ಸಚಿವ, ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ನಮ್ಮ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರು ಅನೇಕ ಕೊಡುಗೆ ನೀಡಿದ್ದಾರೆ.ಸಮರ್ಥ ವಾಗಿ ಬಿಜೆಪಿ ಪಕ್ಷವನ್ನ ನಿಭಾಯಿಸಿದ್ದರು.ಯಡಿಯೂರಪ್ಪ ಅವರಿಗೆ ಶುಭಾಶಯಗಳು ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರೋದಕ್ಕೆ ನಾವು ತಲೆ …
Read More »ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯು ಮೇಲ್ದರ್ಜೆಗೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಾಣಗೊಂಡಿದೆ
ಚಿಕ್ಕೋಡಿ: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು ನಿರ್ಮಾಣಗೊಂಡಿದ್ದು. ಅಪಘಾತಕ್ಕೆ ಆಹ್ವಾನ ನೀಡುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಯು ಮೇಲ್ದರ್ಜೆಗೊಂಡು ರಾಷ್ಟ್ರೀಯ ಹೆದ್ದಾರಿಯಾಗಿ ನಿರ್ಮಾಣಗೊಂಡಿದೆ ಇದು ಚಿಕ್ಕೋಡಿ ನಗರದಲ್ಲಿ ಹಾದು ಹೋಗಿದೆ. ನಗರದ ಬಸವೇಶ್ವರ ಸರ್ಕಲ್ ದಿಂದ ಬಿ.ಕೆ.ಕಾಲೇಜಿನವರಿಗೆ ರಸ್ತೆಯಲ್ಲಿ ಹಲವು ಭಾರಿ ಗಾತ್ರದ ಗುಂಡಿ ಬಿದ್ದಿವೆ. ಸರಕು ತುಂಬಿಕೊಂಡ ನೂರಾರು ಭಾರಿ ವಾಹನಗಳು, ಬಸ್ ಹಾಗೂ ಲಘು ವಾಹನಗಳು ಈ …
Read More ». ರಾಜ್ ಕುಮಾರ್ ಅವರ ಕುಟುಂಬಸ್ಥರು ಭೇಟಿ ಮಾಡಿ ಸಿಎಂ ಬೊಮ್ಮಾಯಿ
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ವರನಟ ಡಾ. ರಾಜ್ ಕುಮಾರ್ ಅವರ ಕುಟುಂಬಸ್ಥರು ಭೇಟಿ ಮಾಡಿ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಥಳಗಳನ್ನು ಅಭಿವೃದ್ಧಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಸಿಎಂ ಅಧಿಕೃತ ನಿವಾಸ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮನೆಗೆ ಭೇಟಿ ನೀಡಿದ ರಾಜ್ ಕುಟುಂಬದ ಸದಸ್ಯರಾದ ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿಪುನೀತ್ …
Read More »ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಬಿ ಎಸ್ ಯಡಿಯೂರಪ್ಪ ನೇಮಕಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಂತಸ
ಬೆಂಗಳೂರು: ನಿಕಟ ಪೂರ್ವ ಮುಖ್ಯಮಂತ್ರಿ ಹಾಗೂ ರೈತ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಭಾರತೀಯ ಜನತಾ ಪಾರ್ಟಿ ಸಂಸದೀಯ ಮಂಡಳಿ ಸಭೆಯ ಸದಸ್ಯರಾಗಿರುವುದಕ್ಕೆ ಅತೀವ ಸಂತೋಷವಾಗಿದೆ. ಬಿಜೆಪಿಯ ಅತ್ಯಂತ ಉನ್ನತ ಎನಿಸಿರುವ ಸಂಸದೀಯ ಮಂಡಳಿಗೆ ಅವರನ್ನು ನೇಮಕ ಮಾಡುವ ಮೂಲಕ ಪಕ್ಷ ಅವರಿಗೆ ಅತಿ ದೊಡ್ಡ ಗೌರವದ ಸ್ಥಾನ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ನೇಮಕಾತಿ ಆದೇಶ ಹೊರ ಬರುತ್ತಿದ್ದಂತೆಯೆ ಸಿಎಂ …
Read More »ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ.
ಧಾರವಾಡ, ಆಗಸ್ಟ್, 12: ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಿನ್ನಡೆ ಅನುಭವಿಸಿದ ಧಾರವಾಡ ರಂಗಾಯಣ ಮತ್ತೆ ಕಾರ್ಯಪ್ರವೃತ್ತವಾಗಿದೆ. 18ನೇ ಶತಮಾನದ ರಾಣಿಯರ ಚಿತ್ರಣವನ್ನು ರಂಗಭೂಮಿ ಮೇಲೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ ಕನ್ನಡ ನಾಟಕವನ್ನು ಪ್ರದರ್ಶಿಸುವ ಬೃಹತ್ ಯೋಜನೆಯಲ್ಲಿ ರಂಗಾಯಣ ತಂಡ ಕೆಲಸ ಮಾಡುತ್ತಿದೆ. ನಾಟಕವು ಸ್ವಾತಂತ್ರ್ಯ ಹೋರಾಟ ಮತ್ತು ಚೆನ್ನಮ್ಮನ ಆಡಳಿತದ ದೃಶ್ಯಗಳನ್ನು ಮರುಸೃಷ್ಟಿಸುತ್ತದೆ. ನಿಜವಾದ ಕುದುರೆ, ಆನೆಗಳು ಹಾಗೂ ಸೈನಿಕರನ್ನು ವೀಕ್ಷಕರ ಕಣ್ಣೆದುರು …
Read More »ಪರಿಶ್ರಮದಿಂದ ಓದಿ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಸುನೀಲ ಪಾಟೀಲ
ಬೆಳಗಾವಿ:ವಿದ್ಯಾರ್ಥಿಗಳ ಉಜ್ವಲ ಬದುಕು ಮತ್ತು ಭವಿಷ್ಯವನ್ನು ರೂಪಿಸುವ ಎಸ್ಸೆಸ್ಸೆಲ್ಸಿ ಎಂಬ ಪ್ರಮುಖ ಘಟ್ಟ ದಾಟಬೇಕಾದರೆ ಪರಿಶ್ರಮದಿಂದ ಓದಿ ಜ್ಞಾನ ಮಟ್ಟ ಹೆಚ್ಚಿಸಿಕೊಳ್ಳಬೇಕು ಎಂದು ಮಾಳಮಾರುತಿ ಠಾಣೆ ಇನ್ಸಪೆಕ್ಟರ್ ಸುನೀಲ ಪಾಟೀಲ ಅಭಿಪ್ರಾಯಪಟ್ಟರು. ನಗರದ ವಂಟಮೂರಿ ಕಾಲೋನಿ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಂಗಳವಾರ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಿಸಿ ಅವರು ಮಾತನಾಡಿದರು. ನಿಮ್ಮ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಎಂಬ ತಳಪಾಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಆಗ ಮುಂದಿನ ಎಲ್ಲ ಸ್ಪರ್ಧೆ, ಸವಾಲುಗಳನ್ನು ಸಮರ್ಥವಾಗಿ ಎದುರಿಸಿ …
Read More »ಬೆಳಗಾವಿಯ ಇಬ್ಬರು ಸೇರಿ ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ
ನವದೆಹಲಿ: ರಾಜ್ಯದ 7 ಜನ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆ ನೀಡಿ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸಚಿನ್ ಘೋರ್ಪಡೆ, ವಿಕ್ರಂ ಅಮಟೆ, ಸಂಜೀತ್ ವಿ.ಜೆ., ರಾಮ ಲಕ್ಷ್ಮಣಸಾ ಅರಸಿದ್ದಿ, ಬಾಬಾಸಾಬ ನೇಮಗೌಡ, ಗೋಪಾಲ ಎಂ. ಬ್ಯಾಕೋಡ್ ಹಾಗೂ ಮಹಾನಿಂಗ ನಂದಗಾವಿ ಅವರು ಸರಕಾರದ ಆದೇಶದನ್ವಯ ಐಪಿಎಸ್ ಕರ್ನಾಟಕ ಕೆಡರ್ ಅಧಿಕಾರಿಗಳಾಗಿ ಮೇಲ್ದರ್ಜೆಗೇರಿದವರು. ಈ ಎಲ್ಲ ಅಧಿಕಾರಿಗಳು ರಾಜ್ಯದ ಪೊಲೀಸ್ ಇಲಾಖೆಯಲ್ಲಿ ನಾನಾ ಹುದ್ದೆಗಳನ್ನು ಖಾಲಿ …
Read More »ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ
ಮುಂಬೈ: ಶಿವಸೇನಾ ಮುಖಂಡರೊಬ್ಬರು ಖಾಸಗಿ ಅಡುಗೆ ವ್ಯವಸ್ಥಾಪಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮಹಾರಾಷ್ಟ್ರದ ತಮ್ಮ ಕ್ಷೇತ್ರವಾದ ಹಿಂಗೋಲಿಯಲ್ಲಿ ಕಾರ್ಮಿಕರಿಗೆ ಕಳಪೆ ಗುಣಮಟ್ಟದ ಮಧ್ಯಾಹ್ನದ ಊಟ ಬಡಿಸಿದ ಕಾರಣಕ್ಕೆ ಶಿವಸೇನೆಯ ಬಂಡಾಯ ಶಾಸಕ ಸಂತೋಷ್ ಬಂಗಾರ್ ಅವರು ಅಡುಗೆ ವ್ಯವಸ್ಥಾಪಕನನ್ನು ನಿಂದಿಸಿ ಅವರಿಗೆ ಎಲ್ಲರ ಸಮ್ಮುಖದಲ್ಲೇ ಕಪಾಳಮೋಕ್ಷ ಮಾಡಿದರು. ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಮನಾರ್ಹವೆಂದರೆ, ಬಂಗಾರ್ ಅವರು ಈ ಘಟನೆಗೆ ಕೆಲವೇ ನಿಮಿಷ ಮೊದಲು ವಿಧಾನಸಭೆಯಲ್ಲಿ ಮುಖ್ಯಮಂತ್ರಿ …
Read More »ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ. ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ ಮಾರ್ಗವಾಗಿ ನಾಗನೂರುವರೆಗೆ ರ್ಯಾಲಿ.
ಗೋಕಾಕ: ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿಂದ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‍ಎಸ್‍ಎಫ್‍ದಲ್ಲಿ ಚಾಲನೆ ನೀಡಲಾಯಿತು. ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಅವರು ಈ ರ್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ನೂರಾರು ರೈತರು …
Read More »ಧರ್ಮಟ್ಟಿಯಲ್ಲಿ ಕಾಣಿಸಿಕೊಂಡ ಚಿರತೆ: ಎಚ್ಚರಿಕೆಯಿಂದಿರಲು ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ.
ಮೂಡಲಗಿ: ಗುರುವಾರದಂದು ತಾಲೂಕಿನ ಧರ್ಮಟ್ಟಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿದ್ದಾರೆ. ಧರ್ಮಟ್ಟಿ ಗ್ರಾಮದ ಅನಿಲ ಮಂದ್ರೋಳ್ಳಿ ಅವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಚಿಕ್ಕೋಡಿ ತಾಲೂಕಿನಿಂದ ಈ ಚಿರತೆ ಬಂದಿರಬಹುದೆಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಜಾಗೃತೆಯಿಂದ ಇರಬೇಕು. ಚಿರತೆಯನ್ನು ಹಿಡಿಯಲು ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ತಹಶೀಲದಾರ …
Read More »
Laxmi News 24×7