Breaking News

ರಾಜ್ಯ

ಆಮ್ಲಜನಕವನ್ನು ಎಲ್ಲಿಂದಲಾದರೂ ತಂದು ಸರಬರಾಜು ಮಾಡಿ ; ಸರ್ಕಾರಕ್ಕೆ ಕೋರ್ಟ್‌ ತಾಕೀತು

ನವದೆಹಲಿ, : ಆಮ್ಲಜನಕವನ್ನು ಭಿಕ್ಷೆ ಬೇಡುತ್ತೀರೋ, ಸಾಲಕ್ಕೆ ತರುತ್ತೀರೋ, ಕದ್ದು ತರುತ್ತೀರೋ ತನ್ನಿ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ. ದೇಶದ ಜನರು ಆಕ್ಸಿಜನ್ ಸಿಗದೆ ಸಾಯುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಿಜಕ್ಕೂ ಖೇದದ ಸಂಗತಿ. ಜನರ ಜೀವಕ್ಕೆ ಬೆಲೆ ಇಲ್ಲವೆ? ನೀವು ದೊಡ್ಡ ದುರಂತದತ್ತ ಸಾಗುತ್ತಿದ್ದೀರಿ ಎಂದು ನ್ಯಾಯಾಧೀಶರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಆಮ್ಲಜನಕವನ್ನು ಕೈಗಾರಿಕೆಗಳಿಗೆ ಬಳಸಲು ಅವಕಾಶ ನೀಡಿರುವುದಕ್ಕೆ ಆಕ್ರೋಶಗೊಂಡಿರುವ ದೆಹಲಿ ಹೈಕೋರ್ಟ್ …

Read More »

ಶೇ.23ರಷ್ಟು ಡೋಸ್ ಲಸಿಕೆಯನ್ನು ವ್ಯರ್ಥವಾಗಿ ಹಾಳು ಮಾಡಲಾಗಿದೆ

ನವದೆಹಲಿ, : ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾದ ಜನವರಿ ತಿಂಗಳಿನಿಂದ ಇಂದಿನವರೆಗೂ ಶೇ.23ರಷ್ಟು ಡೋಸ್ ಲಸಿಕೆಯನ್ನು ವ್ಯರ್ಥವಾಗಿ ಹಾಳು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ವರದಿಯಿಂದ ತಿಳಿದು ಬಂದಿದೆ. ತಮಿಳುನಾಡಿನಲ್ಲಿ ಅತಿಹೆಚ್ಚು ಕೊವಿಡ್-19 ಸೋಂಕಿನ ಲಸಿಕೆಯನ್ನು ವ್ಯರ್ಥ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡಿನಲ್ಲಿ ಶೇ.12, ಹರಿಯಾಣ ಶೇ.9.74, ಪಂಜಾಬ್ ಶೇ.8.12 ಮಣಿಪುರ ಶೇ.7.8 ಮತ್ತು ತೆಲಂಗಾಣ ಶೇ.7.55ರಷ್ಟು ಲಸಿಕೆಯನ್ನು ವ್ಯರ್ಥವಾಗಿ ಖರ್ಚು ಮಾಡಲಾಗಿದೆ ಎಂದು …

Read More »

ಸಿಪಿಐಎಂ ಮುಖಂಡ ಸೀತಾರಂ ಯೆಚೂರಿ ಪುತ್ರ ಕೊರೊನಾಕ್ಕೆ ಬಲಿ

ಗುರುಗ್ರಾಮ, : ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಪುತ್ರ ಆಶೀಶ್ ಯೆಚೂರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಆಶೀಶ್ ಅವರಿಗೆ 34 ವರ್ಷವಾಗಿತ್ತು.ಕಳೆದ ಎರಡು ವಾರಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಆಶೀಶ್ ಕೆಲದಿನಗಳಲ್ಲಿ ಚೇತರಿಕೆ ಹೊಂದುವ ನಿರೀಕ್ಷೆಯಿತ್ತು. ಆದರೆ, ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 5.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತವಲಯ ತಿಳಿಸಿದೆ. ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ …

Read More »

ಬ್ರೇಕಿಂಗ್: ಸಿಎಂ ಬಿಎಸ್‌ವೈ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು,ಏ.22- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ವರದಿ ನೆಗೆಟಿವ್ ಬಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದಾರೆ. ಎರಡನೇ ಬಾರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಪುನಃ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಅವರಿಗೆ ನೆಗೆಟಿವ್ ಬಂದಿರುವುದರಿಂದ ಮಣಿಪಾಲ್ ಆಸ್ಪತ್ರೆಯಿಂದ ಇಂದು ಬಿಡುಗಡೆಯಾದರು. ಕಳೆದ ವಾರ ಯಡಿಯೂರಪ್ಪನವರಿಗೆ ಕೊರೊನಾ ಪಾಸಿಟವ್ ಕಾಣಿಸಿಕೊಂಡಿದ್ದರಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟಿದ್ದರು. ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕೆಲ ದಿನಗಳ ಮಟ್ಟಿಗೆ ಮನೆಯಲ್ಲೇ ಹೋಂ ಕ್ವಾರಂಟೈನ್‍ಗೆ ಒಳಗಾಗಲಿದ್ದಾರೆ ಎಂದು …

Read More »

ವಾರದ ಸಂತೆಗೆ ಪರ್ಯಾಯ ವ್ಯವಸ್ಥೆ : ಗೋಕಾಕ ವಾಲ್ಮೀಕಿ ಕ್ರೀಡಾಂಗಣಕ್ಕೆ ಸ್ಥಳಾಂತರ

ಗೋಕಾಕ : ಸಾಮಾಜಿಕ ಅಂತರ ಕಾಯ್ದುಕೊಂಡು ವಾರದ ಸಂತೆಯನ್ನು ನಡೆಸಲು ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿರುವ ಮಾರುಕಟ್ಟೆಯನ್ನು ವಾಲ್ಮೀಕಿ ಕ್ರೀಡಾಂಗಣಕ್ಕೆ  ಸ್ಥಳಾಂತರ ಮಾಡಲಾಗಿದೆ. ಮೈದಾನದಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯ ಸಿಬ್ಬಂದಿ ಗುರುತು( ಮಾರ್ಕಿಂಗ್ ) ಮಾಡಿದ್ದಾರೆ.  ಅಂಗಡಿಗಳಿಗೆ ಹಾಗೂ ಗ್ರಾಹಕರಿಗೆ ಮಾರ್ಕಿಂಗ್ ಮಾಡಲಾಗಿದ್ದು, ಆ ವ್ಯಾಪ್ತಿಯಲ್ಲೇ  ನಿಂತು ವ್ಯಾಪಾರ- ವಹಿವಾಟು ನಡೆಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಾರ್ಕಿಂಗ್ ಮಾಡಲಾಗಿದ್ದು, ಅಲ್ಲಿಯೇ ನಿಂತು ತರಕಾರಿಗಳನ್ನು ಖರೀದಿ ಮಾಡಬೇಕಾಗಿದೆ. …

Read More »

ಕಡೆಗೂ ಗೆದ್ದ ಸನ್‌ರೈಸರ್ಸ್‌, ರಾಹುಲ್ ಬಳಗಕ್ಕೆ ಹ್ಯಾಟ್ರಿಕ್ ಸೋಲು

ಚೆನ್ನೈ: ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟು ಜಯಕ್ಕಾಗಿ ಪರಿತಪಿಸುತ್ತಿದ್ದ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಐಪಿಎಲ್-14ರಲ್ಲಿ ಕಡೆಗೂ ಗೆಲುವಿನ ಹಳಿಗೇರಲು ಯಶಸ್ವಿಯಾಯಿತು. ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ 9 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿತು. ಮತ್ತೊಂದೆಡೆ, ಕನ್ನಡಿಗ ಕೆಎಲ್ ರಾಹುಲ್ ಬಳಗ ಹ್ಯಾಟ್ರಿಕ್ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕಡೇ ಸ್ಥಾನಕ್ಕೆ ಕುಸಿಯಿತು. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ, ಖಲೀಲ್ ಅಹಮದ್ …

Read More »

KKR‌ ವಿರುದ್ಧ ಧೋನಿ ಪಡೆಗೆ 18 ರನ್ನುಗಳ ಗೆಲುವು; ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ CSK

ಮುಂಬಯಿ : ತೀವ್ರ ಕುಸಿತದ ಬಳಿಕವೂ ಚೆನ್ನೈ ತಂಡದ ಬೃಹತ್‌ ಮೊತ್ತಕ್ಕೆ ದಿಟ್ಟ ರೀತಿಯಲ್ಲಿ ಜವಾಬು ನೀಡಿದ ಕೆಕೆಆರ್‌ ಬುಧವಾರದ ಐಪಿಎಲ್‌ ಮುಖಾಮುಖೀಯಲ್ಲಿ 18 ರನ್ನುಗಳ ವೀರೋಚಿತ ಸೋಲನುಭವಿಸಿದೆ. ಆರಂಭಿಕರಾದ ಫಾ ಡು ಪ್ಲೆಸಿಸ್‌ ಮತ್ತು ಋತುರಾಜ್‌ ಗಾಯಕ್ವಾಡ್‌ ಅವರ ಶತಕದ ಜತೆಯಾಟದ ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 3 ವಿಕೆಟಿಗೆ 220 ರನ್‌ ರಾಶಿ ಹಾಕಿತು. ಕೆಕೆಆರ್‌ ಅಗ್ರ ಕ್ರಮಾಂಕದ ಘೋರ ವೈಫಲ್ಯದಿಂದ ಪವರ್‌ ಪ್ಲೇ ಒಳಗಾಗಿ 31 …

Read More »

ನಿಟ್ಟೆ :ಕಸ ಹಾಕಿದವರಿಂದಲೇ ವಿಲೇವಾರಿ : ನಿಟ್ಟೆ ಗ್ರಾ.ಪಂ. ಸದಸ್ಯೆಯ ದಿಟ್ಟತನಕ್ಕೆ ಮೆಚ್ಚುಗೆ

ಬೆಳ್ಮಣ್: ಸ್ವತ್ಛ ಭಾರತದ ಪರಿಕಲ್ಪನೆ ಕೇವಲ ಭಾಷಣ, ಬ್ಯಾನರ್‌ಗಳ ಪ್ರಚಾರಕ್ಕೆ ಸೀಮಿತವಾಗಿರದೆ ಕಾರ್ಯ ರೂಪದಲ್ಲಿಯೂ ಅಳವಡಿಕೆಯಾಗಬೇಕು ಎಂಬ ಚಿಂತನೆಯೊಂದಿಗೆ ನಿಟ್ಟೆ ಗ್ರಾ.ಪಂ. ಸ‌ದಸ್ಯೆಯೋರ್ವರು ಕಸ ಹಾಕುತ್ತಿದ್ದವರನ್ನು ಹಿಡಿದು ಅವರಿಂದಲೇ ಕಸ ವಿಲೇವಾರಿ ಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಟ್ಟೆ ಗ್ರಾ.ಪಂ. ಸದಸ್ಯೆ ರಶ್ಮಿ ಸದಾನಂದ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ವಿಲೇವಾರಿಗೊಳಿಸಿ ಪಂಚಾಯತ್‌ಗೆ ದಂಡ ಕಟ್ಟಿಸಿದ್ದಾರೆ. ಪಂಚಾಯತ್‌ ಸದಸ್ಯೆ ರಶ್ಮಿಯವರ ಈ …

Read More »

24 ಗಂಟೆಯೊಳಗೆ ‘RTPCR’ ಪರೀಕ್ಷಾ ಫಲಿತಾಂಶ ವರದಿ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಕೋವಿಡ್ 19 ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಾದರಿಗಳ ಪರೀಕ್ಷಾ ಫಲಿತಾಂಶವನ್ನು 24 ಗಂಟೆಯೊಳಗೆ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ 19 2 ನೇ ಅಲೆಯ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸೋಂಕು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಿದ ಬಳಿಕ …

Read More »

ಸುರಪುರದ ಸಬ್ ಜೈಲಿನ 24 ಕೈದಿಗಳಿಗೆ ಕೊರೊನಾ ಸೋಂಕು!

ಯಾದಗಿರಿ : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಯಾದಗಿರಿ ಜಿಲ್ಲೆಯ ಸುರಪುರ ನಗರದ ಸಬ್ ಜೈಲಿನಲ್ಲಿ 24 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಯಾದಗಿರಿ ಜಿಲ್ಲಿಯ ಸುರಪುರದ ಸಬ್ ಜೈಲ್ ನಲ್ಲಿ 24 ಕೈದಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮತ್ತಷ್ಟು ಕೈದಿಗಳು ಹಾಗೂ ಸಿಬ್ಬಂದಿಗಳ ಕೋವಿಡ್ ಟೆಸ್ಟ್ ಮಾಡಲಾಗಿದೆ. ಜೈಲಿನ 24 ಕೈದಿಗಳಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೈಲಿಗೆ ಹೊರಗಿನವರ …

Read More »