Breaking News

ರಾಜ್ಯ

ಕೊರೊನಾ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸೂಕ್ತ ಯೋಜನೆಯೂ ಇಲ್ಲ: ಸತೀಶ ಜಾರಕಿಹೊಳಿ

ಬೆಳಗಾವಿ: ಕೊರೊನಾ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸೂಕ್ತ ಯೋಜನೆಯೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆ ಹರಡುವ ಬಗ್ಗೆ ತಜ್ಞರು ಮೊದಲೇ ತಿಳಿಸಿದ್ದರು. ಹೀಗಾಗಿ, ಸರ್ಕಾರ ಆಸ್ಪತ್ರೆಗಳ ತಯಾರಿ, ಬೆಡ್ ಗಳ ವ್ಯವಸ್ಥೆ, ಆಕ್ಸಿಜನ್ ಸಿಲಿಂಡರ್ ಹಾಗೂ ಔಷಧಿಗಳ ಸಂಗ್ರಹಣೆ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಈಗ ಜನರಿಗೆ …

Read More »

I.P.L. ಸ್ಕೋರ್ ಹೇಳದಕ್ಕೆ ಗಲಾಟೆ – ಜಗಳ ಬಿಡಿಸಲು ಹೋದವನ ಮೇಲೆ ಮಾರಣಾಂತಿಕ ಹಲ್ಲೆ

ಧಾರವಾಡ: ಜಗಳ ಬಿಡಿಸಲು ಹೋದವರಿಗೆನೇ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಧಾರವಾಡ ನಗರದ ಹನುಮಂತನನಗರ ಬಡಾವಣೆಯಲ್ಲಿ ನಡೆದಿದೆ. ರೌಡಿಶೀಟರ್ ಮಂಜುನಾಥ್ ಹಿರೇಮನಿ ಹಾಗೂ ಆತನ ಸಹೋದರರಿಂದಲೇ ಈ ಹಲ್ಲೆ ನಡೆದಿದ್ದು, ಇಟ್ಟಿಗೆಗಳಿಂದ ಹಲ್ಲೆ ಮಾಡಿ ಗಾಯಗೊಳಿಸಲಾಗಿದೆ. ಐಪಿಎಲ್ ಸ್ಕೋರ್ ವಿಚಾರದಲ್ಲಿ ಅಣ್ಣಪ್ಪ ಹಾಗೂ ಲಕ್ಷ್ಮಣ್ ಎಂಬಾತನ ನಡುವೆ ಈ ಜಗಳ ಆರಂಭವಾಗಿತ್ತು. ಅಣ್ಣಪ್ಪ ಕಳೆದ ರಾತ್ರಿ ಲಕ್ಷ್ಮಣನಿಗೆ ಐಪಿಎಲ್ ಸ್ಕೋರ್ ಕೇಳಿದ್ದಾನೆ. ಆಗ ಲಕ್ಷ್ಮಣ್ ಗೊತ್ತಿಲ್ಲ ಎಂದಿದ್ದಕ್ಕೆ ಹಲ್ಲೆ ನಡೆಸಿದ್ದಾರೆ. …

Read More »

ಕೊರೊನಾ ಸಾವುಗಳಿಗೆ ಸರ್ಕಾರಗಳ ಚುನಾವಣೆ ಕಾಳಜಿಯೇ ಕಾರಣ: ಮುತಾಲಿಕ್

ಧಾರವಾಡ: ಕೊರೊನಾ ಸಾವುಗಳಿಗೆ ಸರ್ಕಾರಗಳ ಚುನಾವಣೆ ಕಾಳಜಿಯೇ ಕಾರಣ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹೇಳದೇ ಶೇ.90ರಷ್ಟು ಲಾಕ್‍ಡೌನ್ ಮಾಡಿದ್ದಾರೆ, ಜನ ಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಪ್ರಕ್ರಿಯೆ ಆಗಬೇಕು. ಎರಡನೇ ಅಲೆ ಬರುವುದು ಮೊದಲೇ ಗೊತ್ತಿತ್ತು, ಆದರೂ ಆಸ್ಪತ್ರೆ, ಆಕ್ಸಿಜನ್, ಬೆಡ್ ವ್ಯವಸ್ಥೆ ಪೂರ್ವ ಸಿದ್ಧತೆ ಮಾಡಿಲ್ಲ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತಪ್ಪು ಎದ್ದು ಕಾಣುತ್ತಿದೆ …

Read More »

ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ

ಬಾದಾಮಿ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರ ಸುಕ್ಷೇತ್ರ ಬಾದಾಮಿ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇ ಧಿಸಲಾಗಿದೆ. ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಐತಿಹಾಸಿಕ, ಧಾರ್ಮಿಕ ಕೇಂದ್ರ, ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಸ್ಥಾನಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಗುಂಪು ಸೇರುವುದು, ಜಾತ್ರೆ, ಉತ್ಸವ ನಿಷೇಧ ಮಾಡಲಾಗಿದೆ. …

Read More »

18 ಇಲಾಖೆ ಸಿಬಂದಿಗೆ ರಜೆ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ 18 ಇಲಾಖೆಗಳ ಅಧಿಕಾರಿ, ಸಿಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಅಲ್ಲದೆ ಅವರು ಕೇಂದ್ರ ಸ್ಥಾನ ತೊರೆಯದಂತೆ ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪ್ರಮುಖವಾದ ಆರೋಗ್ಯ, ವೈದ್ಯಕೀಯ ಶಿಕ್ಷಣ, ಒಳಾಡಳಿತ, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಆಹಾರ, ಸಾರಿಗೆ, ವಾರ್ತಾ, ಇಂಧನ, ಖಜಾನೆ, ಸಿಬಂದಿ ಮತ್ತು ಆಡಳಿತ ಸುಧಾರಣೆ, ಪಶುಸಂಗೋಪನೆ, ಕಾರ್ಮಿಕ, ಅರಣ್ಯ, ಕೃಷಿ, ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆಯು ಅಗತ್ಯ …

Read More »

ಮಹಾರಾಷ್ಟ್ರದ ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಐಸಿಯುನಲ್ಲಿದ್ದ 13 ರೋಗಿಗಳು ಸಾವು!

ಮುಂಬೈ (ಏ. 23): ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ಭಾರೀ ದುರಂತವೊಂದು ನಡೆದಿದ್ದು, ಕೋವಿಡ್-19 ಸೆಂಟರ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ 13 ಕೊರೋನಾ ರೋಗಿಗಳು ಸಜೀವ ದಹನವಾಗಿದ್ದಾರೆ. ಮಹಾರಾಷ್ಟ್ರದ ಪಲ್ಘಾರ್ ಜಿಲ್ಲೆಯ ವಾಸೈನಲ್ಲಿನ ವಿಜಯ್ ವಲ್ಲಭ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಇನ್ನೂ ಅನೇಕ ರೋಗಿಗಳಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಐಸಿಯುನಲ್ಲಿದ್ದ 13 ರೋಗಿಗಳು ಸಾವನ್ನಪ್ಪಿದ್ದು, ಉಳಿದ ಮೂರ್ನಾಲ್ಕು ಕೊರೋನಾ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. …

Read More »

ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಬಲಿ! ಆಘಾತ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಸೊಸೆ!

ಭೋಪಾಲ್​: ಕರೊನಾ ದೇಶದ ಜನರಲ್ಲಿ ಭಯ ಹುಟ್ಟಿಸಿದೆ. ಸೋಂಕು ಹರಡಿ ಕೆಲವೇ ದಿನಗಳಲ್ಲಿ ಜನರು ಪ್ರಾಣ ಬಿಡುತ್ತಿರುವ ಉದಾಹರಣೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಒಂದೇ ಕುಟುಂಬದ ಮೂವರು ಸದಸ್ಯರು ಕರೊನಾಕ್ಕೆ ಒಂದು ತಿಂಗಳ ಅವಧಿಯಲ್ಲಿ ಬಲಿಯಾಗಿದ್ದಾರೆ. ಅದನ್ನು ಕಂಡ ಮನೆಯ ಸೊಸೆ ಆಘಾತ ತಾಳಲಾರದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ದೇವಾಸ್​ ನಗರದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಬಾಲಕಿಶನ್​ ಅವರ ಪತ್ನಿ ಚಂದ್ರಕಲಾ (75) ಅವರು ಏಪ್ರಿಲ್​ 14ರಂದು …

Read More »

ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್: ಅಗತ್ಯ ವಸ್ತು, ಸೇವೆಗಳಿಗೆ ಮಾತ್ರ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಜಾರಿ ಮಾಡಲಾಗಿದೆ. ಮೇ 4 ರವರೆಗೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಮತ್ತು ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದ ಸರ್ಕಾರ ಜನತೆಗೆ ದಿಢೀರ್ ಶಾಕ್ ನೀಡಿದೆ. ಅಗತ್ಯ ವಸ್ತು, ಸೇವೆಗಳಿಗೆ ಮಾತ್ರ ಅವಕಾಶ ನೀಡಿದೆ. ಮೇ 4 ರ ವರೆಗೆ ವಾಣಿಜ್ಯ ಮಳಿಗೆ, ಅಂಗಡಿ ಮುಂಗಟ್ಟು ಬಂದ್ ಆಗಲಿವೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಮಾತ್ರ ಅಂಗಡಿ ಬಂದ್ ಮಾಡಬೇಕು ಎಂದುಕೊಂಡಿದ್ದವರಿಗೆ ಶಾಕ್ ನೀಡಿದೆ. ಅಗತ್ಯ ವಸ್ತುಗಳ …

Read More »

ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮೂಹಿಕ ವಿವಾಹ ,ವಧುವಿನ ಮನೆಗೇ ತಲುಪಲಿದೆ ವಿವಾಹ ಸಾಮಗ್ರಿ

ಧರ್ಮಸ್ಥಳ – ದಿನಾಂಕ ೨೯.೪.೨೦೨೧ ರಂದು ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಮಾಹಿಕ ವಿವಾಹ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿದ್ದು, ಕೋವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಸರಕಾರದ ಆದೇಶದಂತೆ ಈ ಕಾರ್ಯಕ್ರಮವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಇದರ ಬದಲಾಗಿ ಸಾಮೂಹಿಕ ವಿವಾಹಕ್ಕೆ ನೋಂದಾಯಿಸಿಕೊಂಡಿರುವ ಎಲ್ಲ ಜೋಡಿಗಳಿಗೂ ಕ್ಷೇತ್ರದ ವತಿಯಿಂದ ಆಶೀರ್ವಾದಪೂರ್ವಕವಾಗಿ ನೀಡಲಾಗುವ ವಿವಾಹ ಸಂಬಂಧಿ ವಸ್ತುಗಳಾದ ಧೋತಿ, ಸೀರೆ, ರವಿಕೆ ಕಣ, ಮಂಗಳಸೂತ್ರ ಮತ್ತಿತ್ಯಾದಿಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ)ಯ ಕಾರ್ಯಕರ್ತರ ಮುಖೇನ ವಧುವಿನ …

Read More »

ಬೆಳಗಾವಿ, ಗೋಕಾಕ ಸೇರಿ ಜಿಲ್ಲೆಯಾದ್ಯಂತ ಏಕಾಏಕಿ ಅಂಗಡಿಗಳು ಬಂದ್

ಬೆಳಗಾವಿ : ಜಿಲ್ಲೆಯಲ್ಲಿ ಅಗತ್ಯ ಸೇವೆ ಹೊರತು ಪಡೆಸಿ ಉಳಿದೆಲ್ಲ ಅಂಗಡಿ, ಮಳಿಗೆಗಳನ್ನು ಏಕಾಏಕಿ ಪೊಲೀಸರು ಇಂದು ಮಧ್ಯಾಹ್ನ ಬಂದ್ ಮಾಡಿಸಿದ್ದು, ವ್ಯಾಪಾರಿಗಳು, ಜನರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಿತ್ತು. ಆದರೆ ಇಂದು ಮಧ್ಯಾಹ್ನ ಮತ್ತೊಂದು ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸರ್ಕಾರದ ಈ ನಿರ್ಧಾರದಿಂದ ಜನರು, ವ್ಯಾಪಾರಿಗಳು ಫುಲ್ ಶಾಕ್ ಆಗಿದ್ದಾರೆ. ಬೆಳಗಾವಿ ನಗರ, ಗೋಕಾಕ, ಘಟಪ್ರಬಾ ಸೇರಿದಂತೆ ಜಿಲ್ಲೆಯಾದ್ಯಂತ …

Read More »