ಕೊಪ್ಪಳ: ನಗರದಲ್ಲಿ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ತುಂಬು ಗರ್ಭಿಣಿಯು ಆಸ್ಪತ್ರೆಗೆ ತೆರಳಲು ಪರದಾಡಿದ ಪ್ರಸಂಗ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ನರೇಗಲ್ ಗ್ರಾಮದ ಲಕ್ಷ್ಮೀ ಪೂಜಾರ ಅವರು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ಚೆಕಪ್ ಗೆ ಹೋಗಬೇಕಿತ್ತು. ಆದರೆ ಪೊಲೀಸರು ಎಲ್ಲ ವಾಹನಗಳನ್ನ ಹಿಡಿದು ಜಪ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ಎಲ್ಲ ವಾಹನ ಚಾಲಕರು ಪೊಲೀಸರಿಗೆ ಹೆದರಿ ಗರ್ಭಿಣಿಯನ್ನ ಆಸ್ಪತ್ರೆಗೆ ಕರೆ ತರಲು ನಿರಾಕರಿಸಿದ್ದರು. ಇದರಿಂದ ಗ್ರಾಮದಿಂದ 7 …
Read More »10 ಸಾವಿರ ರೂ. ಪರಿಹಾರ ನೀಡಲು ನಾವು ದುಡ್ಡು ಪ್ರಿಂಟ್ ಮಾಡ್ತೀವಾ?: ಸಚಿವ ಈಶ್ವರಪ್ಪ
ಶಿವಮೊಗ್ಗ: ದುಡಿಯುವ ವರ್ಗಕ್ಕೆ 10 ಸಾವಿರ ರೂ. ಪರಹಾರ ನೀಡಬೇಕೆಂಬ ವಿಪಕ್ಷಗಳ ಬೇಡಿಕೆಗೆ ಗರಂ ಆದ ಸಚಿವ ಕೆ.ಎಸ್.ಈಶ್ವರಪ್ಪ “ಪ್ರಿಂಟ್ ಮಾಡ್ತೀವಾ” ಎಂದು ವಿವಾದಾತ್ಮಕ ಹೇಳಿಕೆ ನೀಡಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ, ಕುಮಾರಸ್ವಾಮಿ 14 ದಿನ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ನೀವು ಬಾಯಿಗ ಬೀಗ ಹಾಕಿಕೊಂಡರೆ ಲಾಕ್‌ಡೌನ್ ಯಶಸ್ವಿಯಾಗುತ್ತದೆ. ಅದಾದ ಮೇಲೆ ನಾವು, ನೀವು ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳೋಣ ಎಂದರು. ರಾಜ್ಯದ ಜನ …
Read More »‘ಪ್ರಚಾರ ಮಂತ್ರಿ’ ಮೋದಿ; ಪ್ರಧಾನಿ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ), ‘ಪ್ರಚಾರ ಮಂತ್ರಿ’ ಎಂದು ವ್ಯಂಗ್ಯವಾಡಿದೆ. ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಬಂಗಾಳದ ಚುನಾವಣೆಗೆ ಹತ್ತಿಪ್ಪತ್ತು ಪ್ರಚಾರ ಸಭೆ ನಡೆಸಿದ ‘ಪ್ರಚಾರ ಮಂತ್ರಿ’ ಮೋದಿಯವರು ಇದುವರೆಗೂ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ನೋಡಲಿಲ್ಲ, ಆಕ್ಸಿಜನ್ ಪೂರೈಕೆ ಪರಿಸ್ಥಿತಿಯ ಅವಲೋಕನ ಸಭೆ ನಡೆಸಲಿಲ್ಲ, ವೈದ್ಯಕೀಯ ತಜ್ಞರ, ವಿಜ್ಞಾನಿಗಳ ಸಭೆ ನಡೆಸಲಿಲ್ಲ, ಪತ್ರಿಕಾಗೋಷ್ಠಿ ನಡೆಸಿ …
Read More »ಕೆಲಸವೇ ಇಲ್ಲ: ಇಲ್ಲಿದ್ದು ಏನ್ಮಾಡೋದು… ಮುಂದುವರಿದ ಕಾರ್ಮಿಕರ ವಲಸೆ
ಬೆಂಗಳೂರು: ಲಾಕ್‌ಡೌನ್ ಭೀತಿಯಿಂದ ಬೆಂಗಳೂರು ತೊರೆಯುತ್ತಿರುವವರ ಸಂಖ್ಯೆ ಹೆಚ್ಚಿರುವ ಕಾರಣ ಭಾನುವಾರವೂ ರೈಲು ನಿಲ್ದಾಣದ ಎದುರು ಮತ್ತು ಟೋಲ್‌ಗಳ ಬಳಿ ಭಾರಿ ಸಂಖ್ಯೆಯಲ್ಲಿ ಜನ ಮತ್ತು ವಾಹನಗಳ ಸಂದಣಿ ಕಂಡು ಬಂದಿತು. ಕಾರ್ಮಿಕರು ಕುಟುಂಬದೊಂದಿಗೆ ಗಂಟು ಮೂಟೆ ಹೊತ್ತು ನಿಲ್ದಾಣದತ್ತ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೂರದ ಊರಿಗೆ ಹೊರಟಿದ್ದ ವ್ಯಕ್ತಿಯೊಬ್ಬರು ಪ್ರಯಾಣದ ವೇಳೆ ದಾಹ ನೀಗಿಸಿಕೊಳ್ಳಲು ನೀರು ತುಂಬಿದ್ದ ದೊಡ್ಡ ಕ್ಯಾನ್‌ವೊಂದನ್ನು ಮನೆಯಿಂದಲೇ ಹೊತ್ತು ತಂದಿದ್ದರು. ಹಲವರು ದ್ವಿಚಕ್ರ ಹಾಗೂ …
Read More »ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಯಿಂದ ಲಕ್ಷ ಲಕ್ಷ ಲೂಟಿ; ಬಿಲ್ ಫೊಟೊ ವೈರಲ್
ಕೋಲಾರ: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳಿಂದ ಲಕ್ಷ ಲಕ್ಷ ಲೂಟಿ ಮಾಡುತ್ತಿದ್ದ ಪ್ರಕರಣ ಬಯಲಾಗಿದೆ. ಕೋಲಾರದ ಲಕ್ಷ್ಮೀ ಆಸ್ಪತ್ರೆಯಲ್ಲಿ 11 ದಿನಕ್ಕೆ 3.9 ಲಕ್ಷ ಬಿಲ್ ಮಾಡಿರುವುದು ಬೆಳಕಿಗೆ ಬಂದಿದೆ. ಅರವಿಂದ್ ಎಂಬ ಸೋಂಕಿತನ ಹೆಸರಲ್ಲಿ ಲಕ್ಷಗಟ್ಟಲೆ ಬಿಲ್ ಮಾಡಲಾಗಿದ್ದು, 3 ಲಕ್ಷ 90 ಸಾವಿರ ಬಿಲ್ ಮಾಡಿರುವ ರಸೀದಿ ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೋಗಿಯ ಬಿಲ್ ವೈರಲ್ ಆಗಿದ್ದು, ಸರ್ಕಾರ, ಆರೋಗ್ಯ ಸಚಿವರಿಗೆ ಜನರು ಹಿಗ್ಗಾಮುಗ್ಗಾ …
Read More »ವೆಂಟಿಲೇಟರ್ ಬೆಡ್ ಸಿಗದೇ ಮೂವರ ದುರ್ಮರಣ; ಮುಂಡರಗಿ ಆಸ್ಪತ್ರೆಯಲ್ಲಿ ದುರಂತ
ಗದಗ: ರಾಜ್ಯದಲ್ಲಿ ಮತ್ತೆ ಆಕ್ಸಿಜನ್, ವೆಂಟಿಲೇಟರ್ ಗಾಗಿ ಹಾಹಾಕಾರ ಆರಂಭವಾಗಿದೆ. ವೆಂಟಿಲೇಟರ್ ಬೆಡ್ ಇಲ್ಲದೇ ಮೂವರು ಕೊರೊನಾ ಸೋಂಕಿತರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಆಸ್ಪತ್ರೆಯಲ್ಲಿ ನಡೆದಿದೆ. ನಿನ್ನೆ ರಾತ್ರಿಯಿಂದ ಇಂದು ಬೆಳಗಿನವರೆಗೆ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ. ಮುಂಡರಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದೇ ಸೋಂಕಿತರು ಪರದಾಡುತ್ತಿದ್ದು, ನಿನ್ನೆ ರಾತ್ರಿ 55 ವರ್ಷದ ಮಹಿಳೆ ಮೃತಪಟ್ಟಿದ್ದರೆ, ಇಂದು ಬೆಳಿಗ್ಗೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ನಡುವೆ ಆಸ್ಪತ್ರೆಯಲ್ಲಿ ಇನ್ನಿಬ್ಬರು ಸೋಂಕಿತರು …
Read More »ಕೊರೊನಾಗೆ ತಂದೆ ಮಗ ಬಲಿ
ಧಾರವಾಡ: ಸೋಂಕು ಹಿನ್ನೆಲೆ ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ತಂದೆ ಮಗ ಇಬ್ಬರು ಕೊರೊನಾಗೆ ಬಲಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ತಂದೆ ರವೀಂದ್ರನಾಥ ವಸ್ತ್ರದ (74) ಮಗ ವಿಶ್ವನಾಥ ವಸ್ತ್ರದ (47) ಮೃತರಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ತಂದೆ ಮಗ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ತಂದೆ ನಿಧನರಾಗಿದ್ದರೆ. …
Read More »ಲಾಕ್‌ಡೌನ್ ಮಧ್ಯೆ ಇಂದಿನಿಂದ ಲಿಕ್ಕರ್ ಹೋಮ್ ಡೆಲಿವರಿಗೆಅನುಮತಿ
ಛತ್ತೀಸ್‌ಗಢದಲ್ಲಿ ಬಿಗಿಯಾದ ಲಾಕ್‌ಡೌನ್ ಜಾರಿಗೊಳಿಸಿದ್ದರೂ ಮದ್ಯ ಮಾರಾಟಕ್ಕೆ ತುಸು ಸಡಿಲ ನೀತಿ ಅನುಸರಿಸಲಾಗುತ್ತಿದೆ. ಆಹಾರ ಮತ್ತು ಅಗತ್ಯ ವಸ್ತುಗಳ ರೀತಿ ಇಂದಿನಿಂದ ಮದ್ಯದ ಹೋಮ್ ಡೆಲಿವರಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಲಾಕ್ಡೌನ್ನಿಂದ ಮನೆಯಲ್ಲೇ ಉಳಿಯುವ ಎಣ್ಣೆಪ್ರಿಯರು ಸರ್ಕಾರದ ಈ ನೀತಿಯಿಂದ ನಿಟ್ಟುಸಿರುಬಿಟ್ಟಿದ್ದಾರೆ. ಜನ ಸಂಚಾರ, ಅಂಗಡಿ ಮುಂಗಟ್ಟುಗಳು ಬಂದ್ ಮಾಡಿರುವ ಸಂದರ್ಭದಲ್ಲಿ ಲಿಕ್ಕರ್ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆನ್‌ಲೈನ್ ಮೂಲಕ ಲಿಕ್ಕರ್ ಆರ್ಡರ್ ಪಡೆದು ಹೋಮ್ ಡೆಲಿವರಿ ಕೊಡುವುದಕ್ಕೆ …
Read More »ಜನರಲ್ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವಾಗಿ ಪರಿವರ್ತನೆ: ಬೆಳಗಾವಿಯ ಶಹಾಪುರದಲ್ಲಿ ನರ್ಸ್ ಗಳ ಅಂಗಿ ಹರಿದು ದುಷ್ಕರ್ಮಿಗಳಿಂದ ಹಲ್ಲೆ
ಬೆಳಗಾವಿ: ಸಾಮಾನ್ಯ ಇತರ ರೋಗಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಬದಲಿಸಿದ್ದಕ್ಕೆ ಕೆಲವು ದುಷ್ಕರ್ಮಿಗಳು ಕರ್ತವ್ಯದಲ್ಲಿದ್ದ ನರ್ಸ್ ಗಳ ಮೇಲೆ ಹಲ್ಲೆ ಮಾಡಿ ಅವರ ಬಟ್ಟೆಗಳನ್ನು ಹರಿದ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ. ಕಳೆದ ರಾತ್ರಿ ಈ ಅಸಹಜ ಘಟನೆ ನಡೆದಿದ್ದು ದುಷ್ಕರ್ಮಿಗಳಿಂದ ಏಟು ತಿಂದು ಅಂಗಿ ಹರಿಸಿಕೊಂಡದ್ದಲ್ಲದೆ ತೀವ್ರ ವಾಗ್ವಾದ ನಡೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೊಲೀಸರಿದ್ದರು ಜನರು ಕ್ಯಾರೇ ಅನ್ನುತ್ತಿಲ್ಲ. ಸರ್ಕಾರದ ಆದೇಶ …
Read More »ಲಾಕ್ ಡೌನ್: ಸಂಚಾರಕ್ಕೆ ಕಠಿಣ ನಿರ್ಬಂಧ
ವಿಜಯಪುರ: ನಗರದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ ಸಿಬ್ಬಂದಿಯೊಂದಿಗೆ ಸ್ವತಃ ರಸ್ತೆಗಳಿದು ವಾಹನಗಳ ತಪಾಸಣೆ ನಡೆಸಿ, ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದು, ದಂಡ ವಿಧಿಸಿದರು. ವಾಹನಗಳನ್ನು ಠಾಣೆಯಲ್ಲಿ ನಿಲ್ಲಿಸಿ, ನಡೆದುಕೊಂಡು ಹೋಗುವಂತೆ ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು. ಮಹಾರಾಷ್ಟ್ರ-ಕರ್ನಾಟಕ ಗಡಿಯ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ವಿಜಯಪುರ ನಗರ …
Read More »
Laxmi News 24×7