Breaking News

ರಾಜ್ಯ

ಹೊಸ ನೇಮಕಾತಿಗೆ ರಾಜ್ಯ ಸರ್ಕಾರ ಬ್ರೇಕ್; ಅನೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸರ್ಕಾರ ನೇಮಕಾತಿಗೆ ಬ್ರೇಕ್ ಹಾಕಿದ ನಂತರ ಜನರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳು ಸೇರಿದಂತೆ ಹಲವಾರು ಇಲಾಖೆಗಳು ಮಂಜೂರಾದ ಅರ್ಧದಷ್ಟು ನೌಕರರೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ. ಆರ್ಥಿಕ ಚಟುವಟಿಕೆಗಳು ನಿಧಾನಗತಿಯಲ್ಲಿ ಸುಧಾರಣೆಯಾಗುವುದರೊಂದಿಗೆ ಸರ್ಕಾರ ನೇಮಕಾತಿ ಪ್ರಕ್ರಿಯೆಯನ್ನು ಪುನರ್ ಆರಂಭಿಸುವ ಸಾಧ್ಯತೆಯಿದೆ. ಕೋವಿಡ್-19 ಸಾಂಕ್ರಾಮಿಕ ಪ್ರಾರಂಭವಾದಾಗಿನಿಂದ ಆರೋಗ್ಯ ಮತ್ತಿತರ ಅವಶ್ಯಕ ಸೇವೆಗಳ ಇಲಾಖೆಗಳನ್ನು ಹೊರತುಪಡಿಸಿದರೆ. ಉಳಿದ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. …

Read More »

‘ಮಹಾ’ ಪ್ರವಾಹದಲ್ಲಿ ಕೊಚ್ಚಿ ಹೋದ ಬಸ್ -ಪ್ರಯಾಣಿಕರಿಂದ ರಕ್ಷಣೆಗೆ ಮೊರೆ

ಮುಂಬೈ: ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದರ ಜಲಾವೃತವಾಗಿದ್ದ ಸೇತುವೆ ದಾಟುತ್ತಿದ್ದ ಬಸ್ ವೊಂದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ನಡೆದಿದೆ.ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡದವರು ಆಗಮಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಬಸ್ ನಲ್ಲಿದ್ದ 9ಕ್ಕೂ ಹೆಚ್ಚಿನ‌ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಕಳೆದ ನಾಲ್ಕುದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಆಗುತ್ತಿದೆ. ಮಳೆಯ ರಭಸಕ್ಕೆ ಮಹಾರಾಷ್ಟ್ರದ ಯವತಬಾಳ ಜಿಲ್ಲೆಯ ಉಮರಖೇಡ ಪಟ್ಟಣದ ಸಮೀಪ ಹಳ್ಳವೊಂದು ತುಂಬಿ ಹರಿಯುತ್ತಿದೆ. ತುಂಬಿ …

Read More »

ಹಾನಗಲ್ ಹಾಗೂ ಸಿಂಧಗಿ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ: ಸಿ ಎಂ ಬೊಮ್ಮಾಯಿ

ಬೆಂಗಳೂರು: ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ಉಪಚುನಾವಣೆ ಎದುರಿಸಲಿದ್ದು, ಹಾನಗಲ್ ಹಾಗೂ ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಉಪ ಚುನಾವಣೆ ಕುರಿತು ಚರ್ಚೆ ನಡೆಸಲಾಗಿದ್ದು, ಅಭ್ಯರ್ಥಿಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು. ಇನ್ನು ಉದಾಸಿ ಹಾನಗಲ್ ನಲ್ಲಿ 6 …

Read More »

ಸಿಂದಗಿ ವಿಧಾನಸಭೆ ಬೈಎಲೆಕ್ಷನ್​ಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್​

ಬೆಂಗಳೂರು: ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ, ಕಾಂಗ್ರೆಸ್​ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ. ಅಶೋಕ್ ‌ಮನಗೂಳಿ‌ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಘೋಷಣೆ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಈಶ್ವರ್​ ಖಂಡ್ರೆ, ಹಾನಗಲ್ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ. ಈ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಹಾನಗಲ್​​​ನಲ್ಲಿ ಮನೋಹರ್ ತಹಶಿಲ್ದಾರ್, ಶ್ರೀನಿವಾಸ್ ಮಾನೆ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಷ್ಟೇ …

Read More »

ಶಕ್ತಿ ಇರೋರ ಮೇಲೆ ಅಟ್ಯಾಕ್​ ಮಾಡೋದು ಜಾಸ್ತಿ, ಐ ವಿಲ್ ಫೇಸ್ ದೆಮ್ ಎಂದ ಸಿದ್ದರಾಮಯ್ಯ

ಬಾಗಲಕೋಟೆ: ಅಧಿವೇಶನದಲ್ಲಿ ಜಾತಿ ಸಮೀಕ್ಷೆ ಚರ್ಚೆ ಮಾಡಿಲ್ಲ. ಆದರೆ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಸ್ಪಷ್ಟನೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಜಾರಿ ಸಮೀಕ್ಷೆ ವಿರುದ್ಧ ಚರ್ಚೆ ಮಾಡಲು ಸದನದಲ್ಲಿ ನೋಟಿಸ್ ಕೊಟ್ಟಿದೆ, ಅದು ಚರ್ಚೆಗೆ ಬರಲಿಲ್ಲ. ಅನೇಕ ವಿಚಾರಗಳ ಬಗ್ಗೆ ನೋಟಿಸ್ ಕೊಟ್ಟಿದ್ದೆ ಬರಲಿಲ್ಲ. …

Read More »

ಥಿಯೇಟರ್​ನಲ್ಲಿ ಸ್ಟಾರ್​ವಾರ್​ ಶುರು​: ಪ್ರಭಾಸ್​​​, ಯಶ್​ಗೆ ಪೈಪೋಟಿ ನೀಡಲಿದೆಯಾ ಬಾಲಿವುಡ್​ ಸಿನಿಮಾ

ದೇಶದೆಲ್ಲೆಡೆ ಕೋವಿಡ್​ ಸೋಂಕು ಕಡಿಮೆಯಾಗಿದ್ದು, ದೈನಂದಿನ ಜೀವನಕ್ಕೆ ಜನಸಾಮಾನ್ಯರು ಈಗಾಗಲೇ ಮರಳಿದ್ದಾರೆ. ಸರ್ಕಾರ ಕೂಡ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಕೆ ಮಾಡುವ ಮೂಲಕ ಎಲ್ಲಾ ಉದ್ಯಮಗಳ ವಹಿವಾಟಿಗೆ ಅವಕಾಶ ನೀಡಲಾಗಿದೆ. ಇದೇ ವೇಳೆ ಸಿನಿ ಉದ್ಯಮ ಬಹುದಿನಗಳಿಂದ ಎದುರು ನೋಡುತ್ತಿದ್ದ ಚಿತ್ರರಂಗ ತೆರೆಯಲು ಕೂಡ ಈಗಾಗಲೇ ಮಹಾರಾಷ್ಟ್ರದಲ್ಲಿ ಅನುಮತಿ ನೀಡಿದ್ದು, ಕರ್ನಾಟಕದಲ್ಲಿ ಕೂಡ ಈ ಬಗ್ಗೆ ಶೀಘ್ರದಲ್ಲೇ ಹಸಿರು ನಿಶಾನೆ ಸಿಗಲಿದೆ. ಇದೇ ಹಿನ್ನಲೆ ಥಿಯೇಟರ್​ ರಿಲೀಸ್​ಗೆ ಕಾಯುತ್ತಿದ್ದ ಬಿಗ್​ …

Read More »

ಒಣಗಿಸಿದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಹನೂರು: ಒಣಗಿಸಿದ್ದ ಜಿಂಕೆ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹಲಗಾಪುರ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕಳ್ಳಿದೊಡ್ಡಿ ಗ್ರಾಮದ ರಾಮಾಚಾರಿ (64) ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಗಾಣಿಗಮಂಗಲ ಗ್ರಾಮದ ಸಣ್ಣಪ್ಪ ಪರಾರಿಯಾಗಿದ್ದಾನೆ. ಸಣ್ಣಪ್ಪ ಕಾವೇರಿ ವನ್ಯಜೀವಿ ವಿಭಾಗಕ್ಕೆ ಸೇರಿದ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಜಿಂಕೆಯನ್ನು ಭೇಟೆಯಾಡಿ ಅದರ ಮಾಂಸವನ್ನು ಒಣಗಿಸಿ ರಾಮಾಚಾರಿ ಎಂಬಾತನಿಗೆ ನೀಡಿದ್ದಾನೆ. ಬೈಕ್‍ನಲ್ಲಿ ಮಾಂಸ ಸಾಗಿಸುತ್ತಿದ್ದ ಖಚಿತ ಮಾಹಿತಿ …

Read More »

ಬೆಳಗಾವಿ ಜನರ ಪ್ರೀತಿಗೆ ಬಿ.ಸಿ.ಪಾಟೀಲ್ ಸಂತಸ -“ರೈತರೊಂದಿಗೊಂದು ದಿನ” ಬಗ್ಗೆ ಕೌರವನ ಮಾತು

ಬೆಳಗಾವಿ: ಬೆಳಗಾವಿ ಜಿಲ್ಲೆಯ ರೈತರು ಜನರು ತೋರಿಸಿದ ಪ್ರೀತಿ ಸಂಸ್ಕೃತಿ ಹಳ್ಳಿ ಪದ್ಧತಿ ಕಂಡು ಸಂತಸವಾಗಿದೆ. ಇಲ್ಲಿ ಬಂದು “ರೈತರೊಂದಿಗೊಂದು ದಿನ”ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಸಾರ್ಥಕವಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬಿವಶಿ ಗ್ರಾಮದಲ್ಲಿ ನಡೆದ 11ನೇ ರೈತರೊಂದಿಗೊಂದು ದಿನ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಮಾತನಾಡಿದ ಅವರು, ಕೃಷಿಯಲ್ಲಿ ಅಭಿವೃದ್ದಿಯಾದರೂ ಕೃಷಿಕರು ಅಭಿವೃದ್ದಿಯಾಗುತ್ತಿಲ್ಲ. ಹೀಗಾಗಿ ಇದಕ್ಕೆ ಕಾರಣ ಹುಡುಕಿ ಪರಿಹಾರ …

Read More »

ಮಹರ್ಷಿ ವಾಲ್ಮೀಕಿ ಜಯಂತಿ ವೇದಿಕೆಗೆ ಜಾರಕಿಹೊಳಿ ಬ್ರದರ್ಸ ತಂದೆ-ತಾಯಿ ಹೆಸರಿಡಿ

ಅಕ್ಟೋಬರ್ 10ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಡಾ.ವಿಕ್ರಮ್ ಆಮ್ಟೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ ಸೇರಿದಂತೆ ಹಲವು ಅಧಿಕಾರಿಗಳು, ಎಸ್‍ಸಿ, ಎಸ್‍ಟಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಸುರೇಶ ಗವನ್ನವರ …

Read More »

ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ವಿಚಾರ ಬಹಿರಂಗ ಪಡಿಸಿದ ರವಿ ಡಿ. ಚನ್ನಣ್ಣನವರ್

ದಕ್ಷ, ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಇತ್ತೀಚಿಗೆ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಸಿನಿಮಾ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದ ರವಿ ಚನ್ನಣ್ಣನವರ್ ಆ ಸಮಯದಲ್ಲಿ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕಿ ಅಚ್ಚರಿ ಮೂಡಿಸಿದರು. ರವಿ ಡಿ ಚನ್ನಣ್ಣನವರ್ ಅವರ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ಇಂಟ್ರಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದರು. ಅನೇಕರಿಗೆ ಮಾದರಿಯಾಗಿರುವ ರವಿ ಡಿ ಚನ್ನಣ್ಣನವರ್ ಒಂದು …

Read More »