Breaking News

ರಾಜ್ಯ

ಕಾಲೇಜು ವಿದ್ಯಾರ್ಥಿಗಳಿದ್ದ ಬಸ್​​​, ಟ್ರ್ಯಾಕ್ಟರ್​​ ಅಪಘಾತ

ಕೋಲಾರ: ವಿದ್ಯಾರ್ಥಿಗಳಿದ್ದ ಕಾಲೇಜು ಬಸ್‌ ಹಾಗೂ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತದ ರಭಸಕ್ಕೆ ಟ್ರಾಕ್ಟರ್ ಎರಡು ಭಾಗಗಳಾಗಿದೆ. ತಾಲೂಕಿನ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಟ್ರ್ಯಾಕ್ಟರ್ ಚಾಲಕರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೋಲಾರದ ವಿಜಯ ಚೇತನ ಪಿಯು ಕಾಲೇಜಿಗೆ ಸೇರಿದ ಖಾಸಗೀ ಬಸ್ ಇದಾಗಿದ್ದು, ಬಸ್ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.     …

Read More »

ಲೈಂಗಿಕ ಸಂಪರ್ಕಕ್ಕೆ ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿರಾತಕ: ಮಹಿಳೆ ಸಾವು

ಲೈಂಗಿಕ ಸಂಪರ್ಕಕ್ಕೆ ವಿರೋಧಿಸಿದ್ದಕ್ಕೆ ವ್ಯಕ್ತಿಯೊಬ್ಬ ರಾತ್ರಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾಳೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಮಧ್ಯರಾತ್ರಿ ವಿವಾಹಿತ ಮಹಿಳೆ ಬಾಲಮ್ಮ ತೀವ್ರ ಗಾಯಗೊಂಡಿದ್ದು, ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಆರೋಪಿ ಗಂಗಾಪ್ಪ ನಾಪತ್ತೆಯಾಗಿದ್ದಾನೆ. ಗ್ರಾಮದ ಆರೋಪಿ ಗಂಗಪ್ಪ ಹಲವು ದಿನಗಳಿಂದ ಅಕ್ರಮ ಸಂಬಂಧಕ್ಕಾಗಿ ಮಹಿಳೆ ಮೇಲೆ ಹಿಂದೆ ಬಿದ್ದಿದ್ದ. ಆದರೆ ಈತನ ಮಾತಿಗೆ ಒಪ್ಪದ ಹಿನ್ನೆಲೆಯಲ್ಲಿ ಸೇಡು …

Read More »

ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಿರ್ದೇಶಕರು ಇವರೇ?

ಬೈಕೋನೂರ್: ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾವೊಂದರ ಚಿತ್ರೀಕರಣಕ್ಕೆ ರೋಸ್ಕೋಸ್ಮೀಸ್ ಅನುಮತಿ ನೀಡಿದೆ. ನಟಿ ಯೂಲಿಯಾ ಪೆರೆಸಿಲ್ಡ್, ನಿರ್ದೇಶಕ ಕ್ಲಿಮ್ ಶಿಪೆಂಕೊ ಮತ್ತು ಗಗನಯಾತ್ರಿ ಆಂಟನ್ ಶಕಾಪ್ಲೆರೋವ್ ಮಂಗಳವಾರ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿದ್ದಾರೆ ಎಂದು ರಷ್ಯಾದ ರಾಜ್ಯ ಬಾಹ್ಯಾಕಾಶ ನಿಗಮ ರೋಸ್ಕೋಸ್ಮೋಸ್ ತಿಳಿಸಿದೆ. ಮುಖ್ಯ ಮತ್ತು ಬ್ಯಾಕಪ್ ಸಿಬ್ಬಂದಿಯನ್ನು ಅನುಮೋದಿಸಲಾಗಿದೆ. ರೋಸ್ಕೋಸ್ಮೋಸ್ ಮತ್ತು ರಷ್ಯಾದ ಚಾನೆಲ್ ಒನ್ ಕಳೆದ ನವೆಂಬರ್‌ನಲ್ಲಿ ಬಾಹ್ಯಾಕಾಶದಲ್ಲಿ ಚಲನಚಿತ್ರವನ್ನು ನಿರ್ಮಿಸುವ ಯೋಜನೆಯನ್ನು ಅನಾವರಣಗೊಳಿಸಿತು. ನಟಿ …

Read More »

ಮಕ್ಕಳ ಮಾರಾಟ ಪ್ರಕರಣ : ಆಶಾಕಾರ್ಯಕರ್ತೆ ಬಂಧನ

ಕೋಲಾರ: ರಾಜ್ಯದಲ್ಲಿ ದಿನದಿಂದದಿನಕ್ಕೆ ಮಕ್ಕಳ ಮಾರಾಟ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಸ್ವತ: ಆಶಾ ಕಾರ್ಯಕರ್ತೆಯರೇ ಮಕ್ಕಳ ಮಾರಾಟ ಜಾಲದ ಹಿಂದೆ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೋಲಾರದಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರು ಹಾಗೂ ಮಗು ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.   ಕೋಲಾರದ ಕೆಜಿಎಫ್ ತಾಲೂಕಿನ ಪಂತನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನೀಲಮ್ಮ ಹಾಗೂ ಬಾಬು ದಂಪತಿ ಮಗುವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. …

Read More »

ಅಖಿಲೇಶ್ ಯಾದವ್ ನಿವಾಸದ ಹೊರಗೆ ಪ್ರತಿಭಟನಾಕಾರರಿಂದ ಪೊಲೀಸ್ ವಾಹನಕ್ಕೆ ಬೆಂಕಿ

ಲಕ್ನೋ : ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ನಿವಾಸದ ಹೊರಗೆ ಸೋಮವಾರ ಪ್ರತಿಭಟನಾಕಾರರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದರು. ಅಖಿಲೇಶ್ ಯಾದವ್ ಅವರು ಲಖಿಂಪುರ್ ಖೇರಿಗೆ ಹೋಗದಂತೆ ಪೊಲೀಸರು ತಡೆದ ನಂತರ ಅವರ ನಿವಾಸದ ಬಳಿ ಧರಣಿ ಕುಳಿತಿದ್ದ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ನಂತರ ಅಖಿಲೇಶ್ ಯಾದವ್ ಅವರನ್ನು ವಶಕ್ಕೆ ಪಡೆಯಲಾಯಿತು.   ವೀಡಿಯೊದಲ್ಲಿ, ಪೊಲೀಸರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುವುದನ್ನು …

Read More »

ಸಚಿನ್ ಗೆ ಸಂಕಷ್ಟ: ತೆರಿಗೆ ವಂಚನೆ ಆರೋಪ, ಪಂಡೋರಾ ಪೇಪರ್ಸ್ ನಲ್ಲಿ ಕ್ರಿಕೆಟ್ ದಿಗ್ಗಜನ ಹೆಸರು

ಹೊಸದಿಲ್ಲಿ: 2016ರಲ್ಲಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ನಂತೆ ಇದೀಗ ‘ಪಂಡೋರಾ ಪೇಪರ್’ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಇದರಲ್ಲಿ ಹಲವಾರು ಭಾರತೀಯ ಪ್ರಸಿದ್ಧ ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ. ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಕೂಡಾ ಪಂಡೋರಾ ಪೇಪರ್ಸ್ ನಲ್ಲಿದೆ. ದಿವಾಳಿ ಎಂದು ಘೋಷಿಸಿರುವ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಂಜುದಾರ್ ಶಾ ಪತಿ ಸೇರಿದಂತೆ ಸುಮಾರು 300 ಭಾರತೀಯರನ್ನು ಹೆಸರಿಸಲಾಗಿದೆ. ಸಚಿನ್ ತೆಂಡೂಲ್ಕರ್ …

Read More »

ಕೊಲೆಗೆಡುಕ ಸರ್ಕಾರ’ – ಟ್ವೀಟ್ ಮೂಲಕ ಹೆಚ್.ಡಿ.ಕೆ ಕಿಡಿ

ಬೆಂಗಳೂರು: ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ, ಮಕ್ಕಳ ಆತ್ಮಹತ್ಯೆಯನ್ನು ಸರ್ಕಾರ ತಡೆಯಬಹುದಿತ್ತು. ಇದು ಕೊಲೆಗಡುಕ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ, ನೆಲಮಂಗಲದಲ್ಲಿ ಸಾರಿಗೆ ನೌಕರನ ಪತ್ನಿ ಮತ್ತು ಮಕ್ಕಳ ಆತ್ಮಹತ್ಯೆ ಪ್ರಕರಣ ಹೃದಯ ವಿದ್ರಾವಕ. ಈ ಘಟನೆಯನ್ನು ಸರ್ಕಾರ ತಡೆಯಬಹುದಿತ್ತು. ಮೊದಲೇ ಆ ಕುಟುಂಬಕ್ಕೆ ಪರಿಹಾರ, ಅನುಕಂಪದ ಉದ್ಯೋಗ ನೀಡಿದ್ದಿದ್ದರೆ ಮೂರು ಅಮೂಲ್ಯ ಜೀವಗಳು ಉಳಿಯುತ್ತಿದ್ದವು ಎಂದು ಹೇಳಿದ್ದಾರೆ. …

Read More »

ಗೋಕಾಕ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಾನ್ ಶಾಪ್ ಕಳ್ಳತನ ಪ್ರಕರಣ

  ಗೋಕಾಕ ನಗರದ ಶ್ರೀ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಸವರಾಜ ಪೂಜೇರಿ ಮಾಲೀಕತ್ವದ ಪಾನ್ ಶಾಪ್ ಅಂಗಡಿ ಇಂದು ಬೆಳಿಗ್ಗೆ ಸುಮಾರು 4 ಘಂಟೆಗೆ ಕೀಲಿ ಲಾಕ್ ಮುರಿದು ಕಳ್ಳತನ ನಡೆದಿದ್ದು.ಬೆಳಿಗ್ಗೆ 5 ಘಂಟೆಗೆ ಅಂಗಡಿ ತೆಗೆಯಲು ಬಂದ್ ಮಾಲೀಕ ಬಸು ಪೂಜೇರಿ ಅಂಗಡಿ ಕಳ್ಳತನ ಆಗಿರುವುದುನ್ನು ಕಂಡು 112 ಸಹಾಯವಾಣಿಗೆ ಕರೆ ಮಾಡಿದ್ದು ಸ್ಥಳಕ್ಕೆ ದೌಡಾಯಿಸಿದ ಪಿಎಸ್‌ಐ ವಾಲೀಕರ ಹಾಗೂ ಪೊಲೀಸ 112 ಸಿಬ್ಬಂದಿಗಳು ತನಿಖೆ ನಡೆಸಿ ಸ್ಥಳೀಯರಿಂದ …

Read More »

ಮೌನವಾಗಿರುವವರು ಈಗಾಗಲೇ ಸತ್ತಿದ್ದಾರೆ; ಉ.ಪ್ರದೇಶ ಹಿಂಸಾಚಾರಕ್ಕೆ ರಾಹುಲ್ ಟೀಕೆ

ನವದೆಹಲಿ, ಅಕ್ಟೋಬರ್ 04: ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿ ಸಾವನ್ನಪ್ಪಿರುವ ಕುರಿತು ಆಡಳಿತ ಪಕ್ಷವನ್ನು ಟೀಕಿಸಿರುವ ಅವರು, ‘ಈ ಘಟನೆ ಬಗ್ಗೆ ಮೌನ ತಾಳಿರುವವರು ಈಗಾಗಲೇ ಸತ್ತಿದ್ದಾರೆ’ ಎಂದು ಕಟುವಾಗಿ ನುಡಿದಿದ್ದಾರೆ. ಉತ್ತರ ಪ್ರದೇಶದಲ್ಲಿ ಭಾನುವಾರ ನಡೆದ ಹಿಂಸಾಚಾರವನ್ನು ‘ಅಮಾನವೀಯ ಹತ್ಯಾಕಾಂಡ’ ಎಂದು …

Read More »

26 ಸಾವಿರ ಕೋಟಿಗೆ ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿ ಅದಾನಿ ತೆಕ್ಕೆಗೆ

ನವದೆಹಲಿ: ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ (ಎಜಿಇಎಲ್‌) ಕಂಪನಿಯು ₹26 ಸಾವಿರ ಕೋಟಿಗೆ (3.5 ಶತಕೋಟಿ ಡಾಲರ್) ಎಸ್‌ಬಿ ಎನರ್ಜಿ ಇಂಡಿಯಾ ಕಂಪನಿಯನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ‘ಜಗತ್ತಿನ ಅತಿದೊಡ್ಡ ಸೌರ ವಿದ್ಯುತ್‌ ಅಭಿವೃದ್ಧಿ ಕಂಪನಿಯಾದ ಎಜಿಇಎಲ್‌ ಯಶಸ್ವಿಯಾಗಿ ಎಸ್‌ಬಿ ಎನರ್ಜಿ ಹೋಲ್ಡಿಂಗ್ಸ್‌ ಲಿಮಿಟೆಡ್‌ (ಎಸ್‌ಬಿ ಎನರ್ಜಿ ಇಂಡಿಯಾ) ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿದೆ. ಎಲ್ಲಾ ನಗದು ವ್ಯವಹಾರವನ್ನೇ ಒಳಗೊಂಡ ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಳೆದ ಮೇ 8ರಂದೇ ಖಚಿತಗೊಳಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು’ …

Read More »