ನವದೆಹಲಿ: ಕೇಂದ್ರ ಸರ್ಕಾರ ಬೀದಿ ಬದಿಯ ವ್ಯಾಪಾರಿಗಳಿಗೆ ರಿಲೀಫ್ ನೀಡಿದಂತೆ ಸಣ್ಣ ವ್ಯಾಪಾರಿಗಳಿಗೆ ಸಹಾಯಹಸ್ತ ಚಾಚಿದೆ. ಮುದ್ರಾ ಶಿಶು ಯೋಜನೆಯ ಅಡಿಯಲ್ಲಿ ಗರಿಷ್ಟ 50 ಸಾವಿರ ರೂ. ಸಾಲ ನೀಡಲಾಗುತ್ತಿದ್ದು, ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದವರಿಗೆ 12 ಅವಧಿಗೆ ಶೇ.2 ರಷ್ಟು ಬಡ್ಡಿಯನ್ನು ಸರ್ಕಾರವೇ ಪಾವತಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಈ ಸಾಲಕ್ಕೆ ಅನುಮತಿ ನೀಡಿದೆ. ಪ್ರಧಾನಿ …
Read More »ಕೊರೊನಾ’ ಎಂದು ಕೂಗಿ ವೈದ್ಯೆಗೆ ಕಿರುಕುಳ- ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ಥಳೀಯರು
ನವದೆಹಲಿ: ಕೋವಿಡ್-19 ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಯೊಬ್ಬರು ತಮ್ಮ ಮನೆಗೆ ವಾಪಸ್ಸಾದಾಗ ಸ್ಥಳೀಯರು ಅವರನ್ನು ಹಿಗ್ಗಾಮುಗ್ಗ ನಿಂದಿಸಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಈ ಘಟನೆ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿದೆ. ಕುಂಜ್ ಪ್ರದೇಶದಲ್ಲಿ ಮಹಿಳೆ ಒಂಟಿಯಾಗಿ ನೆಲೆಸಿದ್ದಾರೆ. ಹೀಗಾಗಿ ಅವರು ಐಸೋಲೇಷನ್ ವಾರ್ಡಿನಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಸ್ಥಳೀಯರು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಅವರನ್ನು ಕೂಡಿ ಹಾಕಿದ್ದರು. ಕೋವಿಡ್-19 ರೋಗಿಗಳ …
Read More »ಭಾರತದಲ್ಲಿ ಕೊರೋನಾಗೆ 24 ಗಂಟೆಯಲ್ಲಿ 134 ಸಾವು, 3,722 ಮಂದಿಗೆ ಪಾಸಿಟಿವ್..!
ನವದೆಹಲಿ/ಮುಂಬೈ, ಮೇ 14- ಡೆಡ್ಲಿ ಕೊರೊನಾ ಹಾವಳಿ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ದೇಶದಲ್ಲಿ ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿದ್ದು, ರಾಷ್ಟ್ರವ್ಯಾಪಿ ಭಯಭೀತಿಯ ವಾತಾವರಣ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಭಾರತದಲ್ಲಿ ಸಾವಿನ ಸಂಖ್ಯೆ 2,500 ದಾಟಿದ್ದು, ಸೋಂಕು ಪೀಡಿತರ ಸಂಖ್ಯೆಯೂ 80,000 ಸನಿಹದಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 134 ಸಾವು ಮತ್ತು 3,722 ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ …
Read More »3 ವರ್ಷ ಕಾಲ ಸೈನಿಕರಾಗಿ ದೇಶ ಸೇವೆ – ಭಾರತೀಯ ಸೇನೆಯಲ್ಲಿ ತಾತ್ಕಾಲಿಕ ಉದ್ಯೋಗ……..
ನವದೆಹಲಿ: ಭಾರತೀಯ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಯುವ ಜನತೆಯಲ್ಲಿರುತ್ತದೆ. ಆದರೆ ಯಾವುದೋ ಕಾರಣದಿಂದಾಗಿ ಈ ಆಸೆ ಈಡೇರುವುದಿಲ್ಲ. ಆದರೆ ಈಗ 3 ವರ್ಷಗಳ ಕಾಲ ಸೇನೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಭಾರತೀಯ ಸೇನೆ ಗಂಭೀರವಾಗಿ ಚಿಂತನೆ ನಡೆಸಿದೆ. ಹೌದು, ಮಿಲಿಟರಿ ಸೇರಿದರೆ ನಿವೃತ್ತಿಯಾಗುವರೆಗೆ ಕೆಲಸ ಮಾಡಬೇಕು ಎಂಬ ನಿಯಮವಿದೆ. ಆದರೆ ಈಗ ಮೂರು ವರ್ಷಗಳ ಕಾಲ ‘ಟೂರ್ ಆಫ್ ಡ್ಯೂಟಿ’ ಹೆಸರಿನಲ್ಲಿ ಯುವಜನತೆಗೆ ಸೇನೆಯಲ್ಲಿ ಸೇವೆ …
Read More »ಕೇಂದ್ರದಿಂದ ಪಿಎಫ್ ಹಣ – 20 ಲಕ್ಷ ಕೋಟಿ ರೂ. ಹಂಚಿಕೆ ಹೇಗೆ?
ನವದೆಹಲಿ – ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹದಗೆಟ್ಟಿರುವ ದೇಶದ ಆರ್ಥಿಕತೆ ಅಭಿವೃದ್ಧಿಗೆ 20 ಲಕ್ಷ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಈ ಪ್ಯಾಕೇಜ್ ಹೇಗಿರಲಿದೆ ಎನ್ನುವ ಕುರಿತು ಸುದೀರ್ಘವಾಗಿ ವಿವರಿಸಿದರು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಈ ಪ್ಯಾಕೇಜ್ ನಿಂದ ಸಿಂಹಪಾಲು ಸಿಗಲಿದ್ದು, ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೂ ನೆರವು ನೀಡಲಿದೆ. ಸಣ್ಣ ಕೈಗಾರಿಕೆಗಳು …
Read More »‘ಕೊರೊನಾ ಬಂದಿರೋ ಭಯ ಕಾಡ್ತಿದೆ’- ಗುಂಡಿಕ್ಕಿಕೊಂಡು ಸಿಆರ್‌ಪಿಎಫ್ ಅಧಿಕಾರಿ ಆತ್ಮಹತ್ಯೆ
ಶ್ರೀನಗರ: ಹೆಮ್ಮಾರಿ ಕೊರೊನಾ ವೈರಸ್ ಭೀತಿಯಿಂದಾಗಿ ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಜಮ್ಮು-ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ನಡೆದಿದೆ. ರಾಜಸ್ಥಾನದ ಜೈಸಲ್ಮೇರ್ ನಿವಾಸಿ ಸಬ್-ಇನ್ಸ್‌ಪೆಕ್ಟರ್ ಫತಾಹ್ ಸಿಂಗ್ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಅಧಿಕಾರಿ. ಫತಾಹ್ ಸಿಂಗ್ ಅವರನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಮಟ್ಟನ್ ಪ್ರದೇಶದಲ್ಲಿ ಸಿಆರ್‌ಪಿಎಫ್‍ನ 49ನೇ ಬೆಟಾಲಿಯನ್‍ನೊಂದಿಗೆ ನೇಮಿಸಲಾಗಿತ್ತು. ಆದರೆ ತಾವು ಕೋವಿಡ್-19 ಸೋಂಕು ತಗುಲಬಹುದೆಂದು ಆತಂಕಕ್ಕೆ ಒಳಗಾಗಿದ್ದರು. ಫತಾಹ್ ಸಿಂಗ್ ಮಂಗಳವಾರ ತಮ್ಮ ಬಳಿ ಇದ್ದ ರೈಫಲ್‍ನಿಂದ …
Read More »ನಾದಿನಿ ಮನೆಗೆ ಹೋಗಿದ್ದಕ್ಕೆ ಗರ್ಭಿಣಿ ಪತ್ನಿಯನ್ನೇ ಕೊಂದ
ನವದೆಹಲಿ: ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ಭೇಟಿಯಾಗಲು ಹೋಗಿದ್ದ ಗರ್ಭಿಣಿ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಹೇಮಲತಾ (30) ಮೃತ ಮಹಿಳೆ. ಆರೋಪಿ ವಿಜಯ್ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ಘಟನೆ ದಕ್ಷಿಣಪುರಿಯಲ್ಲಿರುವ ಅಂಬೇಡ್ಕರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಮಧ್ಯರಾತ್ರಿ ಸುಮಾರು 12.30ಕ್ಕೆ ಆರೋಪಿ ವಿಜಯ್ ಪೊಲೀಸ್ ಠಾಣೆಗೆ ಹೋಗಿ ತನ್ನ ಹೆಂಡತಿಯನ್ನು ಕೊಲೆ ಮಾಡಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ. ತಕ್ಷಣ …
Read More »ಭಾರತದಲ್ಲಿ ಕಿಲ್ಲರ್ ಕೊರೊನಾಗೆ 2,415 ಮಂದಿ ಬಲಿ – 74 ಸಾವಿರ ಗಡಿದಾಟಿತ ಸೋಂಕಿತರ ಸಂಖ್ಯೆ
ನವದೆಹಲಿ: ವಿಶ್ವವ್ಯಾಪಿ ಹರಡಿರುವ ಕಿಲ್ಲರ್ ಕೊರೊನಾ ವೈರಸ್‍ಗೆ ಭಾರತದಲ್ಲಿ ಬರೋಬ್ಬರಿ 2,415 ಮಂದಿ ಬಲಿಯಾಗಿದ್ದಾರೆ. ಈವರೆಗೆ 74,292 ಮಂದಿ ಸೋಂಕಿಗೆ ತುತ್ತಾಗಿದ್ದು, 24,453 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಮೇ 17 ರಂದು ಮುಗಿಯಬೇಕಿದ್ದ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಲಾಕ್‍ಡೌನ್ 4.0 ಈವರೆಗೆ ಇದ್ದ ಲಾಕ್‍ಡೌನ್ ನಿಯಮಗಳಿಗಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಈವರೆಗೆ …
Read More »20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ನ್ನು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಘೋಷಿಸಲಾಗಿದೆ.: ಪ್ರಧಾನಿ ನರೇಂದ್ರ ಮೋದಿ
ಲಘು ಉದ್ಯೋಗ ಸೇರಿದಂತೆ ಎಲ್ಲ ವಲಯಗಳಿಗೂ ಅನ್ವಯವಾಗುವ ಮೆಘಾ ಆರ್ಥಿಕ ಪ್ಯಾಕೇಜ್ ಒಂದನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಒಟ್ಟಾರೆ 20 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್ ನ್ನು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಘೋಷಿಸಲಾಗಿದೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಇಡೀ ವಿಶ್ವವೇ ಭಾರತದೆಡೆಗೆ ನೋಡುತ್ತಿರುವ ಈ ಸಂದರ್ಭದಲ್ಲಿ, ಭಾರತದ ಭವಿಷ್ಯ ಬದಲಾದರೆ ವಿಶ್ವದ ಭವಿಷ್ಯ ಬದಲಾಗಲಿದೆ ಎನ್ನುವ ಸತ್ಯದ ಹಿನ್ನೆಲೆಯಲ್ಲಿ ಇಂತಹ ಪ್ಯಾಕೇಜ್ ಘೋಷಿಸಲಾಗುತ್ತಿದೆ ಎಂದಿದ್ದಾರೆ. ಬಡವರು, …
Read More »15 ವಿಶೇಷ ರೈಲುಗಳ ಸಂಚಾರ ಆರಂಭ, 45,533 ರೈಲ್ವೆ ಟಿಕೆಟ್ ಬುಕ್ ……….
ನವದೆಹಲಿ, ಮೇ 12- ಲಾಕ್‍ಡೌನ್ ಸಂಕಷ್ಟದಲ್ಲಿರುವ ಜನರ ಅನುಕೂಲಕ್ಕಾಗಿ ಇಂದಿನಿಂದ ದೇಶದ ವಿವಿಧ ಭಾಗಗಳಿಗೆ 15 ವಿಶೇಷ ರೈಲುಗಳ ಸಂಚಾರ ಆರಂಭವಾಗಿದೆ. ನಿನ್ನೆ ಸಂಜೆ 6 ಗಂಟೆಯಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಇಂದು ಬೆಳಗ್ಗೆವರೆಗೆ 80 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. 16.15 ಕೋಟಿ ರೂ. ಮೌಲ್ಯದ 45,533 ರೈಲ್ವೆ ಟಿಕೆಟ್‍ಗಳು ಬುಕ್ಕಿಂಗ್ ಆಗಿವೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ತಿಳಿಸಿದೆ. ಐದು ವಿಶೇಷ ರೈಲುಗಳಲ್ಲಿ …
Read More »
Laxmi News 24×7